ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪಿಬಿಎಸ್ ಸಂಗೀತ ಸಂಯೋಜನೆಯ ‘ಹೆಳವನಕಟ್ಟೆ ಗಿರಿಯಮ್ಮ’

ಪೋಸ್ಟ್ ಶೇರ್ ಮಾಡಿ

ದಕ್ಷಿಣ ಭಾರತದ ಜನಪ್ರಿಯ ಗಾಯಕ ಪಿ.ಬಿ.ಶ್ರಿನಿವಾಸ್ ನೆನಪಿನ ಸುಂದರ ಫೋಟೋ ಇದು. ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ ರಾಜಕುಮಾರ್ ಮತ್ತು ರಾಜ್ ಸಹೋದರ, ನಿರ್ಮಾಪಕ ವರದಪ್ಪ ಇದ್ದಾರೆ. ಪಿಬಿಎಸ್ ಅವರು ‘ಹೆಳವನಕಟ್ಟೆ ಗಿರಿಯಮ್ಮ’ ಕನ್ನಡ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದರು. ಚಿತ್ರದ ಒಂದು ಹಾಡನ್ನು ರಾಜ್ ಹಾಡಲು ಬಂದಿದ್ದಾಗ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥರು ಕ್ಲಿಕ್ಕಿಸಿದ ಚಿತ್ರವಿದು.

ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ‘ಹೆಳವನಕಟ್ಟೆ ಗಿರಿಯಮ್ಮ’ ಕನ್ನಡದ ಒಂದು ಅಪೂರ್ವ ಸಿನಿಮಾ ಆಗಬೇಕಿತ್ತು. “ಚಿತ್ರದ ಹನ್ನೆರೆಡು ಹಾಡುಗಳಿಗೆ ಪಿಬಿಎಸ್ ಸಂಗೀತ ಸಂಯೋಜಿಸಿದ್ದರು. ಯೇಸುದಾಸ್, ಎಸ್ಪಿಬಿ, ಎಸ್.ಜಾನಕಿ, ವಾಣಿ ಜಯರಾಂ, ರಾಜಕುಮಾರ್, ಪರ್ವೀನ್ ಸುಲ್ತಾನಾ ಅವರಂತಹ ಮೇರು ಗಾಯಕ – ಗಾಯಕಿಯರು ಹಾಡಿದ್ದರು. ಲತಾ ಮಂಗೇಶ್ಕರ್ ಅವರಿಂದಲೂ ಒಂದು ಗೀತೆ ಹಾಡಿಸಬೇಕೆಂದು ಪಿಬಿಎಸ್ ಯೋಜಿಸಿದ್ದರು. ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಬೇಕಿತ್ತು. ನಾವು ಉತ್ತರ ಕರ್ನಾಟಕದ ಹಲವೆಡೆ ಲೊಕೇಶನ್ ನೋಡಲು ಸಹ ಹೋಗಿದ್ದೆವು. ಕಾರಣಾಂತರಗಳಿಂದ ಚಿತ್ರ ಕೈಗೂಡಲಿಲ್ಲ. ಪಿಬಿಎಸ್ ಸಂಯೋಜನೆಯ ಹಾಡುಗಳು ಕೂಡ ಜನರಿಗೆ ತಲುಪಲಿಲ್ಲ” ಎನ್ನುತ್ತಾರೆ ಪ್ರಗತಿ ಅಶ್ವತ್ಥ ನಾರಾಯಣ.

ಪಿ.ಬಿ.ಶ್ರೀನಿವಾಸ್ | ಜನನ: 22/09/1930 | ನಿಧನ: 14/04/2013

ಇನ್ನಷ್ಟು ಕಥೆ

ಹೆಳವನಕಟ್ಟೆ ಗಿರಿಯಮ್ಮ

ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ

ಮೂವಿಂಗ್ ಶಾಟ್!

ಈಗ ಸಿನಿಮಾ, ಕಿರುತೆರೆ ಚಿತ್ರೀಕರಣಗಳಲ್ಲಿ ಜಿಮ್ಮೀ ಜಿಬ್ ಸೇರಿದಂತೆ ಆಧುನಿಕ ಪರಿಕರಗಳಿಂದ ಮೂವಿಂಗ್‌

ಕನ್ನಯ್ಯರಾಮ – ಅನಂತನಾಗ್‌

ಆಗಿನ್ನೂ ಅನಂತನಾಗ್ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿರಲಿಲ್ಲ. ‘ಅಂಕುರ್’, ‘ನಿಶಾಂತ್’, ‘ಮಂಥನ್’ ಹಿಂದಿ ಸಿನಿಮಾಗಳು

ಜನಪ್ರಿಯ ಪೋಸ್ಟ್ ಗಳು

ಹಾಡಿನ ಪುಸ್ತಕ

ಹೆಚ್ಚಿನ ಸಂಖ್ಯೆಯ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಲ್ಲದ ಆಗಿನ ಕಾಲದಲ್ಲಿ ಸಿನಿಮಾ ಪ್ರಚಾರಕ್ಕೆ ವಿವಿಧ ತಂತ್ರಗಳ ಮೊರೆಹೋಗಬೇಕಿತ್ತು. ಇಂತಹ ಹಾಡಿನ

‘ಗಂಧರ್ವಗಿರಿ’ ಮುಹೂರ್ತ

`ಶಂಕರಾಭರಣಂ’ ತೆಲುಗು ಸಿನಿಮಾ ಖ್ಯಾತಿಯ ನಟ ಸೋಮಯಾಜುಲು ಮುಖ್ಯಪಾತ್ರದಲ್ಲಿ ನಟಿಸಿದ್ದ `ಗಂಧರ್ವಗಿರಿ’ (1983) ಮುಹೂರ್ತದ ಸಂದರ್ಭವಿದು. ಚನ್ನರಾಯಪಟ್ಟಣ ಸಮೀಪದ ನುಗ್ಗೇಹಳ್ಳಿಯ

ಮೇಕಪ್‌ಮ್ಯಾನ್ ರಾಜಕುಮಾರ್!

ಮೈಸೂರು ಸಮೀಪದ ಮಹದೇವಪುರದಲ್ಲಿ ‘ಮನಮೆಚ್ಚಿದ ಹುಡುಗಿ’ (1987) ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಎಂ.ಎಸ್‌.ರಾಜಶೇಖರ್‌ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜಕುಮಾರ್ ಮತ್ತು