‘ಅನಿರೀಕ್ಷಿತ’ (1970) ಸಿನಿಮಾದಲ್ಲಿ ಕುವೆಂಪು ರಚನೆಯ ‘ಸೊಬಗಿನ ಸೆರೆಮನೆಯಾಗಿಹೆ ನೀನು…’ ಗೀತೆ ಬಳಕೆಯಾಗಿದೆ. ಕುವೆಂಪು ಅವರ ‘ಷೋಡಶಿ’ ಕವನಸಂಕಲನದಲ್ಲಿನ ಪದ್ಯವಿದು. ಚಿತ್ರದ ನಿರ್ಮಾಪಕ, ನಿರ್ದೇಶಕ ನಾಗೇಶ್ ಬಾಬ ಈ ಪದ್ಯ ಬಳಸಿಕೊಳ್ಳಲು ಕುವೆಂಪು ಅವರಿಂದ ಪಡೆದುಕೊಂಡ ಒಪ್ಪಿಗೆ ಪತ್ರವಿದು (1968). ಈ ಕವಿತೆಗೆ ಗೌರವ ಸಂಭಾವನೆಯಾಗಿ 200 ರೂಪಾಯಿ ಸಂದಾಯವಾಗಿದ್ದು, ಕುವೆಂಪು ಸಹಿ (‘ಕೆ.ವಿ.ಪುಟ್ಟಪ್ಪ’) ಹಾಕಿದ್ದಾರೆ.
ಈ ಚಿತ್ರದಲ್ಲಿ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಮೂರು ಹಾಡುಗಳು ಬಳಕೆಯಾಗಿವೆ. ಕೆಎಸ್‍ನ ಅವರು ಮದರಾಸಿಗೆ ಹೋಗಿ ಚಿತ್ರದ ಸನ್ನಿವೇಶಗಳಿಗೆ ಹೊಂದಿಕೆಯಾಗುವ ಎರಡು ಹಾಡುಗಳನ್ನು ಬರೆದುಕೊಟ್ಟಿದ್ದರು ಎನ್ನುವುದು ವಿಶೇಷ! ‘ಅನಿರೀಕ್ಷಿತ’ ಚಿತ್ರದ ನಿರ್ದೇಶಕ ನಾಗೇಶ್ ಬಾಬ ಅವರು ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥರ ಹಿರಿಯ ಸಹೋದರ.