ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅವರನ್ನು ನೋಡಿಕೊಳ್ಳುವ ಹೊಣೆ ನನ್ನದಾಗಿತ್ತು..

ಪೋಸ್ಟ್ ಶೇರ್ ಮಾಡಿ

ಹಿಂದಿ ರಂಗಭೂಮಿ ಮತ್ತು ಚಿತ್ರರಂಗದ ಮೇರು ನಟ ಪೃಥ್ವಿರಾಜ್‌ ಕಪೂರ್‌ ಅವರು ‘ಸಾಕ್ಷಾತ್ಕಾರ’ ಕನ್ನಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರದಲ್ಲಿನ ಅವರ ಪಾತ್ರಕ್ಕೆ ಸಾಕಷ್ಟು ಮಹತ್ವವಿದೆ. ಮೇರು ನಟ ಪಾತ್ರವನ್ನು ಜೀವಿಸಿದ್ದಾರೆ. ಪೃಥ್ವಿರಾಜ್‌ ಕಪೂರ್‌ ಇಲ್ಲಿ ಚಿತ್ರೀಕರಣದಲ್ಲಿದ್ದಾಗ ಅವರನ್ನು ನೋಡಿಕೊಂಡಿದ್ದು ಮೇಕಪ್‌ ಕಲಾವಿದ ಎಂ.ಎಸ್‌.ಕೇಶವ. ಆಗಿನ್ನೂ ಅವರು ಪೂರ್ಣಪ್ರಮಾಣದ ಮೇಕಪ್‌ಮ್ಯಾನ್‌ ಆಗಿರಲಿಲ್ಲ. ತಮ್ಮ ತಂದೆ ಎಂ.ಎಸ್‌.ಸುಬ್ಬಣ್ಣನವರಿಗೆ ಸಹಾಯಕರಾಗಿದ್ದರು. ಆಗಿನ ದಿನಗಳನ್ನು ಕೇಶವ ಅವರ ಮಾತುಗಳಲ್ಲೇ ಕೇಳೋಣ..

“ಪುಟ್ಟಣ್ಣನವರ ‘ಸಾಕ್ಷಾತ್ಕಾರ’ ಚಿತ್ರಕ್ಕೆ ಅಪ್ಪ (ಎಂ.ಎಸ್‌.ಸುಬ್ಬಣ್ಣ) ಮೇಕಪ್‌ಮ್ಯಾನ್‌. ಕಂಠೀರವ ಸ್ಟುಡಿಯೋದಲ್ಲಿ ನಡೆದ ಚಿತ್ರದ ಮುಹೂರ್ತಕ್ಕೆ ಪೃಥ್ವಿರಾಜ್‌ ಕಪೂರ್ ಜೊತೆ ಅವರ ತಾರಾಪುತ್ರ ರಾಜ್‌ಕಪೂರ್ ಕೂಡ ಆಗಮಿಸಿದ್ದರು. ಪೂಜೆ ಎಲ್ಲಾ ಆದ ನಂತರ ರಾಜಕಪೂರ್‌, ‘ತಂದೆಗೆ ಮೇಕಪ್‌ ಮಾಡುವವರು ಯಾರು?’ ಎಂದು ಕೇಳಿದ್ದಾರೆ. ಪುಟ್ಟಣ್ಣನವರು ನನ್ನ ತಂದೆ ಸುಬ್ಬಣ್ಣನವರನ್ನು ಪರಿಚಯಿಸಿದರು. ‘ತಂದೆಯನ್ನು ನೋಡಿಕೊಳ್ಳಲು ಒಬ್ಬರು ಬೇಕಲ್ಲ..’ ಎಂದಿದ್ದಾರೆ ರಾಜ್‌ಕಪೂರ್‌. ಆಗ ಅಪ್ಪ ನನ್ನನ್ನು ಕರೆದು ರಾಜ್‌ಕಪೂರ್‌ ಎದುರು ನಿಲ್ಲಿಸಿದರು. ‘ದಾದಾಜೀ ಕೋ ಅಚ್ಛೀ ತರಹ್‌ ದೇಖನಾ ಹೈ’ ಎಂದರು ರಾಜ್‌ಕಪೂರ್‌. ನಾನು ‘ಆಯ್ತು ಸರ್‌’ ಎಂದೆ.

ಚಿತ್ರೀಕರಣದಲ್ಲಿ ಪೃಥ್ವಿರಾಜ್‌ ಕಪೂರ್‌ ಅವರಿಗೆ ಅಪ್ಪ ಮೇಕಪ್ ಮಾಡುತ್ತಿದ್ದರು. ಕ್ಯಾಮರಾ ಎದುರು ಟೇಕ್ ಸಮಯದಲ್ಲಿ ನಾನು ಟಚ್‌ಅಪ್‌ ಮಾಡುತ್ತಿದ್ದೆ. ಜೊತೆಗೆ ಇಡೀ ದಿನ ಅವರೊಂದಿಗಿದ್ದು ಅವರ ಊಟ, ತಿಂಡಿ, ಸಿಗರೇಟು, ಟೀ.. ಎಲ್ಲಾ ನೋಡಿಕೊಳ್ಳುತ್ತಿದ್ದೆ. ಅವರು ಕೂಡ ಏನೇ ಬೇಕೆಂದರೂ ನನ್ನನ್ನೇ ಕೂಗುತ್ತಿದ್ದರು. ಪೃಥ್ವಿರಾಜ್‌ಕಪೂರ್‌ ಪೋರ್ಷನ್ ಶೂಟಿಂಗ್ ಮುಗಿಯುವ ದಿನ ಚಿತ್ರತಂಡದ ಹಲವರು ಅವರೊಂದಿಗೆ ಫೋಟೋ ತೆಗೆಸಿಕೊಂಡರು. ‘ದಾದಾ, ನಿಮ್ಮ ಜೊತೆ ನನಗೂ ಒಂದು ಫೋಟೋ ಬೇಕು’ ಎಂದೆ ನಾನು. ನನಗೆ ಸುಮ್ಮನಿರುವಂತೆ ಹೇಳಿದ ಅವರು ಅಲ್ಲಿದ್ದವರೊಂದಿಗೆ ಫೋಟೋ ಸೆಷನ್ ಮುಗಿಸಿದರು. ನಂತರ ಫ್ಲೋರ್‌ನಿಂದ ಹೊರಬಂದು ನನ್ನನ್ನು ಹಾಗೂ ಸ್ಟಿಲ್‌ ಫೋಟೋಗ್ರಾಫರನ್ನು ಕೂಗಿದರು. ನಾನು ಮತ್ತು ಸ್ಟಿಲ್‌ ಫೋಟೋಗ್ರಾಫರ್ ಇಬ್ಬರೂ ಓಡಿ ಬಂದೆವು. ಅಲ್ಲೇ ಪಕ್ಕಕ್ಕೆ ಕರೆದು ನನ್ನ ಹೆಗಲ ಮೇಲೆ ಕೈಹಾಕಿ ಸ್ಟಿಲ್‌ ಫೋಟೋಗ್ರಾಫರ್‌ಗೆ ಫೋಟೋ ತೆಗೆಯುವಂತೆ ಸೂಚಿಸಿದರು. ಇದರ ಅರಿವಿಲ್ಲದ ನನಗೋ ಖುಷಿಯೋ ಖುಷಿ. ಚಿತ್ರೀಕರಣದುದ್ದಕ್ಕೂ ಪ್ರೀತಿಯಿಂದ ನೋಡಿಕೊಂಡ ನನ್ನನ್ನು ಅವರು ಹರಿಸಿದರು.

ಪೃಥ್ವಿರಾಜ್‌ ಕಪೂರ್‌ ಅವರಿಗೆ ಎಂ.ಎಸ್‌.ಸುಬ್ಬಣ್ಣ ಅವರಿಂದ ಮೇಕಪ್‌

ಇನ್ನಷ್ಟು ಕಥೆ

ಹೆಳವನಕಟ್ಟೆ ಗಿರಿಯಮ್ಮ

ಸಂಕೇತ್ ಸ್ಟುಡಿಯೋದಲ್ಲಿ ‘ಹೆಳವನಕಟ್ಟೆ ಗಿರಿಯಮ್ಮ’ ಚಿತ್ರದ ಹಾಡಿನ ಧ್ವನಿಮುದ್ರಣ ಸಂದರ್ಭ. ಪಿಬಿಎಸ್ ಜೊತೆ

ಮೂವಿಂಗ್ ಶಾಟ್!

ಈಗ ಸಿನಿಮಾ, ಕಿರುತೆರೆ ಚಿತ್ರೀಕರಣಗಳಲ್ಲಿ ಜಿಮ್ಮೀ ಜಿಬ್ ಸೇರಿದಂತೆ ಆಧುನಿಕ ಪರಿಕರಗಳಿಂದ ಮೂವಿಂಗ್‌

ಕನ್ನಯ್ಯರಾಮ – ಅನಂತನಾಗ್‌

ಆಗಿನ್ನೂ ಅನಂತನಾಗ್ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿರಲಿಲ್ಲ. ‘ಅಂಕುರ್’, ‘ನಿಶಾಂತ್’, ‘ಮಂಥನ್’ ಹಿಂದಿ ಸಿನಿಮಾಗಳು

ಜನಪ್ರಿಯ ಪೋಸ್ಟ್ ಗಳು

‘ಗಂಧರ್ವಗಿರಿ’ ಮುಹೂರ್ತ

`ಶಂಕರಾಭರಣಂ’ ತೆಲುಗು ಸಿನಿಮಾ ಖ್ಯಾತಿಯ ನಟ ಸೋಮಯಾಜುಲು ಮುಖ್ಯಪಾತ್ರದಲ್ಲಿ ನಟಿಸಿದ್ದ `ಗಂಧರ್ವಗಿರಿ’ (1983) ಮುಹೂರ್ತದ ಸಂದರ್ಭವಿದು. ಚನ್ನರಾಯಪಟ್ಟಣ ಸಮೀಪದ ನುಗ್ಗೇಹಳ್ಳಿಯ

ಮೇಕಪ್‌ಮ್ಯಾನ್ ರಾಜಕುಮಾರ್!

ಮೈಸೂರು ಸಮೀಪದ ಮಹದೇವಪುರದಲ್ಲಿ ‘ಮನಮೆಚ್ಚಿದ ಹುಡುಗಿ’ (1987) ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಎಂ.ಎಸ್‌.ರಾಜಶೇಖರ್‌ ನಿರ್ದೇಶನದ ಈ ಸಿನಿಮಾದಲ್ಲಿ ಶಿವರಾಜಕುಮಾರ್ ಮತ್ತು

ಬೆಟ್ಟದ ಕಳ್ಳ

ಕೊಯಮತ್ತೂರಿನ ಪಕ್ಷಿರಾಜ ಸ್ಟುಡಿಯೋದಲ್ಲಿ ‘ಬೆಟ್ಟದ ಕಳ್ಳ’ (1957) ಚಿತ್ರೀಕರಣದ ಸಂದರ್ಭ. ನಿರ್ದೇಶಕ ಶ್ರೀರಾಮುಲು ನಾಯ್ಡು ಅವರು ಚಿತ್ರದ ಕಲಾವಿದರಾದ ಆರ್.ನಾಗೇಂದ್ರರಾಯರು