ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಶ್ರೀನಾಥ್ – ಜಯಂತಿ

ಬೆಂಗಳೂರು ಕಂಠೀರವ ಸ್ಟುಡಿಯೋದಲ್ಲಿ ‘ಸಂಶಯಫಲ’ (1971) ಸಿನಿಮಾ ಚಿತ್ರೀಕರಣ ಸಂದರ್ಭ. ಕಲಾವಿದರಾದ ಶ್ರೀನಾಥ್‌ ಮತ್ತು ಜಯಂತಿ, ಮೇಕಪ್ ಕಲಾವಿದ ಎಂ.ಎಸ್‌.ಕೇಶವ, ಜಯಂತಿ ಅವರ ಸಹಾಯಕಿ ರಾಜಮ್ಮ ಇದ್ದಾರೆ. ಬಾವಾ ಮೂವೀಸ್‌ ಬ್ಯಾನರ್‌ನಡಿ ಸಮೀವುಲ್ಲಾ ನಿರ್ಮಿಸಿ – ನಿರ್ದೇಶಿಸಿದ ಈ ಚಿತ್ರದ ಮೂಲಕ ಖ್ಯಾತ ಹಿಂದಿ ಸಂಗೀತ ಸಂಯೋಜಕ ಸಲೀಲ್ ಚೌಧರಿ ಕನ್ನಡ ಚಿತ್ರರಂಗಕ್ಕೆ ಬಂದರು. ಉತ್ತಮ ಸಂಗೀತ ಸಂಯೋಜನೆಗಾಗಿ ಸಲೀಲ್‌ ಚೌಧರಿ ಅವರಿಗೆ ಕರ್ನಾಟಕ ರಾಜ್ಯಪ್ರಶಸ್ತಿ ಸಂದಿದೆ. (ಫೋಟೊ ಕೃಪೆ: ಮೇಕಪ್ ಕಲಾವಿದ ಎಂ.ಎಸ್‌.ಕೇಶವ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು