ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ರಾಜಾ ಹರಿಶ್ಚಂದ್ರ

Share this post

ಭಾರತದ ಮೊದಲ ಕಥಾಚಿತ್ರ (ಮೂಕಿ) ‘ರಾಜಾ ಹರಿಶ್ಚಂದ್ರ’. ದಾದಾಸಾಹೇಬ್ ಫಾಲ್ಕೆ ನಿರ್ಮಾಣ, ನಿರ್ದೇಶನದ ಈ ಕಥಾಚಿತ್ರದ (ಫೀಚರ್ ಫಿಲ್ಮ್‌) ಪ್ರೀಮಿಯರ್ ಶೋ ಮುಂಬೈನಲ್ಲಿ 1913, ಏಪ್ರಿಲ್ 21ರಂದು ನಡೆಯಿತು. ಈ ಚಿತ್ರ ಅಧಿಕೃತವಾಗಿ ಥಿಯೇಟರ್‍ಗೆ ಬಿಡುಗಡೆಯಾಗಿದ್ದು 1913, ಮೇ 3ರಂದು. ಹರಿಶ್ಚಂದ್ರ ಮತ್ತು ವಿಶ್ವಾಮಿತ್ರರ ಪೌರಾಣಿಕ ಕತೆಯನ್ನು ಆಧರಿಸಿ ತಯಾರಾಗಿದ್ದ ಪ್ರಯೋಗವಿದು.

‘ರಾಜಾ ಹರಿಶ್ಚಂದ್ರ’ ತೆರೆಕಾಣುವುದಕ್ಕಿಂತ ಸರಿಸುಮಾರು ಒಂದು ವರ್ಷ ಮುನ್ನ 1912, ಮೇ 18ರಂದು ದಾದಾಸಾಹೇಬ್ ತೋರ್ನೆ ನಿರ್ದೇಶನದ ‘ಶ್ರೀ ಪುಂಡಲೀಕ’ ಸಿನಿಮಾ ತೆರೆಕಂಡಿತ್ತು. ಆದರೆ ಈ ಚಿತ್ರವನ್ನು ಲಂಡನ್‌ನಲ್ಲಿ ಚಿತ್ರಿಸಲಾಗಿತ್ತು. ಅಲ್ಲದೆ ಚಿತ್ರಕ್ಕೆ ಬ್ರಿಟೀಷ್ ಛಾಯಾಗ್ರಾಹಕ ಕೆಲಸ ಮಾಡಿದ್ದರು. ಜೊತೆಗೆ ಕ್ಯಾಮರಾವನ್ನು ಒಂದೆಡೆ ಫಿಕ್ಸ್‌ ಮಾಡಿ ನಾಟಕವನ್ನು ಸೆರೆಹಿಡಿಯಲಾಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ‘ಸತ್ಯ ಹರಿಶ್ಚಂದ್ರ’ ಮೊದಲ ಭಾರತೀಯ ಸಿನಿಮಾ ಎನ್ನುವ ದಾಖಲೆಗೆ ಪಾತ್ರವಾಯ್ತು.

‘ರಾಜಾ ಹರಿಶ್ಚಂದ್ರ’ ವಿಶೇಷತೆಗಳು

  • ನಾಲ್ಕು ರೀಲ್‌ನ ‘ರಾಜಾ ಹರಿಶ್ಚಂದ್ರ’ 40 ನಿಮಿಷ ಅವಧಿಯ ಚಿತ್ರ. ನಿರ್ಮಾಣ ಅವಧಿ ಏಳು ತಿಂಗಳು 21 ದಿನ.
  • ಮುಂಬಯಿಯ ದಾದರ್ ಮುಖ್ಯರಸ್ತೆಯಲ್ಲಿ ದಾದಾ ಫಾಲ್ಕೆ ಸ್ಟೂಡಿಯೋ ನಿರ್ಮಿಸಿದ್ದರು. ರಾಜಾ ರವಿವರ್ಮ ಅವರ ಪೌರಾಣಿಕ ಕಲಾಕೃತಿಗಳನ್ನು ಆಧರಿಸಿ ಸ್ಟೂಡಿಯೋದಲ್ಲಿ ಸೆಟ್‌ಗಳನ್ನು ಹಾಕಲಾಗಿತ್ತು.
  • ರಾಜಾ ಹರಿಶ್ಚಂದ್ರನ ಸತ್ಯ, ನೀತಿಯ ಕಥಾನಕವಿದು. ಸತ್ಯವಾಕ್ಯ ಪರಿಪಾಲನೆಗಾಗಿ ಮಹರ್ಷಿ ವಿಶ್ವಾಮಿತ್ರರಿಗೆ ಕೊಟ್ಟ ಭಾಷೆಯಿಂದಾಗಿ ತನ್ನ ಪತ್ನಿ, ಪುತ್ರ, ರಾಜ್ಯವನ್ನು ಹರಿಶ್ಚಂದ್ರ ಕಳೆದುಕೊಳ್ಳುತ್ತಾನೆ. ಅಂತಿಮವಾಗಿ ಹರಿಶ್ಚಂದ್ರನ ನ್ಯಾಯ-ನೀತಿ-ಸತ್ಯ ಪರಿಪಾಲನೆಗೆ ಮೆಚ್ಚಿ ದೇವತೆಗಳು ಆತ ಕಳೆದುಕೊಂಡದ್ದೆಲ್ಲವನ್ನೂ ಮರಳಿ ದೊರಕಿಸಿಕೊಟ್ಟು ಹರಸುತ್ತಾರೆ.
  • ಮರಾಠಿ ರಂಗಭೂಮಿ ಕಲಾವಿದ ದಾಮೋದರ್ ದಾಬ್ಕೆ ಚಿತ್ರದ ಶೀರ್ಷಿಕೆ ಪಾತ್ರಧಾರಿ. ಹರಿಶ್ಚಂದ್ರನ ಪತ್ನಿ ತಾರಾಮತಿ ಪಾತ್ರ ನಿರ್ವಹಿಸಲು ಆಗಿನ ಸಾಂಪ್ರದಾಯಿಕ ಸಮಾಜದಲ್ಲಿ ನಟಿಯರು ಒಪ್ಪಲಿಲ್ಲ. ಕೊನೆಗೆ ಪುರುಷನೇ ಈ ಪಾತ್ರ ಮಾಡಬೇಕಾಯ್ತು. ಈ ಪಾತ್ರದಲ್ಲಿ ನಟಿಸಿದ ಅಣ್ಣಾಸಾಹೇಬ್‌ ಸಾಲುಂಕೆ ಅವರು ಮುಂದಿನ ದಿನಗಳಲ್ಲಿ ಸ್ತ್ರೀ ಪಾತ್ರಗಳಿಗೆ ಬೇಡಿಕೆಯ ಕಲಾವಿದರಾದರು.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ