ಪತ್ರಕರ್ತೆ ಸುನಯನಾ ಸುರೇಶ್ ಅವರ ಚೊಚ್ಚಲ ಕಿರುಚಿತ್ರ ‘ಮೌನರಾಗ’ಕ್ಕೆ CFCA ವಿಶೇಷ ಜ್ಯೂರಿ ಗೌರವ ಲಭಿಸಿದೆ. ‘ಮೌನರಾಗ’ ಚಿತ್ರವು ಅದರ ಭಾವನಾತ್ಮಕತೆ ಮತ್ತು ಕಥನ ಶೈಲಿಗೆ ಮೆಚ್ಚುಗೆ ಪಡೆದಿದೆ.
ಪತ್ರಕರ್ತೆ ಹಾಗೂ ನಿರ್ದೇಶಕಿ ಸುನಯನಾ ಸುರೇಶ್ ಅವರು ತಮ್ಮ ಮೊದಲ ಕಿರುಚಿತ್ರ ‘ಮೌನರಾಗ’ಕ್ಕಾಗಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2026 ನಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಸಾಧನೆ ಅವರ ಪತ್ರಿಕೋದ್ಯಮದಿಂದ ಚಿತ್ರರಂಗದತ್ತ ನಡೆದ ಮಹತ್ವದ ಬದಲಾವಣೆಯನ್ನು ಸೂಚಿಸುವುದರ ಜೊತೆಗೆ, ಕನ್ನಡ ಸಿನೆಮಾದಲ್ಲಿ ಹೊಸ ಧ್ವನಿಯಾಗಿ ಅವರ ಸ್ಥಾನವನ್ನು ದೃಢಪಡಿಸಿದೆ. ‘ಮೌನರಾಗ’ ಚಿತ್ರವು ಅದರ ಭಾವನಾತ್ಮಕತೆ ಮತ್ತು ಕಥನ ಶೈಲಿಗೆ ಮೆಚ್ಚುಗೆ ಪಡೆದಿದೆ.
ಈ ಗೌರವದ ಬಗ್ಗೆ ಮಾತನಾಡುವ ಸುನಯನಾ ಸುರೇಶ್, ‘ಇದು ನನ್ನ ಮೊದಲ ಚಿತ್ರರಂಗದ ಹೆಜ್ಜೆಗೆ ವಿಮರ್ಶಕರಿಂದ ದೊರೆತ ಮಾನ್ಯತೆ ಎಂಬುದರಿಂದ ತುಂಬಾ ವಿಶೇಷವಾಗಿದೆ. ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್‌ನಲ್ಲಿ ‘ಮೌನಾ ರಾಗ’ ಚಿತ್ರಕ್ಕಾಗಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದಿರುವುದು ನನಗೆ ವಿನಮ್ರತೆಯ ಅನುಭವ ನೀಡಿದೆ. ಇದು ನನ್ನ ಪ್ರಯಾಣದ ಆರಂಭದಂತೆ ಭಾಸವಾಗುತ್ತಿದೆ. ನಾನು ಪ್ರೀತಿಸುವ ಮತ್ತು ಗೌರವಿಸುವ ಸಿನಿಮಾ ಮತ್ತು ಮಾಧ್ಯಮ ಕ್ಷೇತ್ರದ ಜನರ ಮಧ್ಯೆ ಈ ಕ್ಷಣವನ್ನು ಅನುಭವಿಸುವುದು ಅತ್ಯಂತ ವಿಶೇಷವಾಗಿತ್ತು. ಈ ಸಾಧನೆ ನನ್ನ ಪ್ರತಿಭಾವಂತ ತಂಡದ ನಂಬಿಕೆ ಮತ್ತು ಪರಿಶ್ರಮದಿಂದ ಸಾಧ್ಯವಾಗಿದೆ. ನನ್ನ ಕುಟುಂಬವು ನನಗೆ ಕನಸು ಕಾಣುವ ಧೈರ್ಯ ನೀಡಿದ ಕಾರಣ ಅವರಿಗೆ ನಾನು ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ’ ಎನ್ನುತ್ತಾರೆ. ‘ಮೌನರಾಗ’ ಚಿತ್ರದ ಮೂಲಕ ಸುನಯನಾ ಸುರೇಶ್ ಅವರು ಭರವಸೆಯ ನಿರ್ದೇಶಕಿಯಾಗಿ ಹೊರಹೊಮ್ಮಿದ್ದು, ಈ ಪ್ರಶಸ್ತಿ ಅವರ ಮುಂದಿನ ಸಿನಿಮಾ ಪಯಣಕ್ಕೆ ಪ್ರಮುಖ ಮೆಟ್ಟಿಲಾಗಿದೆ.








