ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಮೊದಲ ಭೇಟಿಯಲ್ಲಿ ಲತಾ, ಕಿಶೋರ್‌ಗೆ ‘ಸ್ಕೌಂಡ್ರಲ್’ ಎಂದು ಬೈದಿದ್ದರಂತೆ!

Share this post

ಬರಹ: ಚಿತ್ರಾ ಸಂತೋಷ್‌

ಅದು 1940ರ ಸುಮಾರು. ಆ ಯುವಕ ಲೋಕಲ್‌ ಟ್ರೇನು ಹತ್ತಿದ. ಸರಳ ಸುಂದರಿಯಾದ ಆ ಹುಡುಗಿ ಕಿಟಕಿ ಬದಿಯ ಸೀಟಿನಲ್ಲಿ ಕುಳಿತು ಹೊರಗೆ ದೃಷ್ಟಿ ನೆಟ್ಟಿದ್ದಳು. ಅವಳೆದುರು ಕುಳಿತ ಆತನತ್ತ ಸಹಜವಾಗಿ ಅವಳು ದೃಷ್ಟಿ ಹಾಯಿಸಿದಾಗ, ಆ ಯುವಕನೂ ಸಹಜವೆಂಬಂತೆ ಮುಗುಳುನಗೆಯೊಂದನ್ನು ಸೂಸಿದ. ಆದರೆ ಆತನ ಚೆಂದದ ನಗೆಗೆ ಆಕೆ ನಗೆಯುತ್ತರ ಕೊಡಲಿಲ್ಲ, ಬದಲಾಗಿ “ಗುರ್‌” ಎಂದು ಸಿಟ್ಟಿನಿಂದ ದಿಟ್ಟಿಸಿ ನೋಡಿದಳು. ಆತನಿಗೆ ಏಕಕಾಲದಲ್ಲಿ ಭಯವೂ, ಮುಜುಗರವೂ! ಇದೇನಿದು, ಈ ಪರಿ ಕಣ್ಣು ದೊಡ್ಡದು ಮಾಡಿ ನೋಡುತ್ತಾಳೆ ಎಂದನಿಸಿ ಎದೆ ಢವಢವ ಅನಿಸಿಬಿಟ್ಟಿತು. ಮತ್ತೆ ಆತ ಅವಳತ್ತ ನೋಡಲಿಲ್ಲ, ನಗಲಿಲ್ಲ, ಸುಮ್ಮನಾಗಿಬಿಟ್ಟ.

ಇಬ್ಬರು ಎದುರು-ಬದುರು ಕುಳಿತು ಪ್ರಯಾಣಿಸಿದರು. ಅವಳು ಕಿಟಕಿ ಬಿಟ್ಟು ಕಣ್ಣು ಅಲ್ಲಾಡಿಸಲಿಲ್ಲ ಮತ್ತೆ!. ದಾದ್ರಾ ನಿಲ್ದಾಣ ಬಂತು. ಅವನೂ ಇಳಿದ, ಅವಳೂ ಇಳಿದಳು. ಆಕೆ ಕುದುರೆಗಾಡಿಯನ್ನು ಹತ್ತಿ ಎಲ್ಲೋ ಪ್ರಯಾಣ ಬೆಳೆಸಿದಳು, ಅವನೂ ಇನ್ನೊಂದು ಕುದುರೆಗಾಡಿ ಹತ್ತಿ ಪ್ರಯಾಣಿಸಿದ ಅವನು ಅವಳನ್ನು ಹಿಂಬಾಲಿಸಿದಂತೆ! ಇಬ್ಬರೂ ಒಂದೇ ದಾರಿಯಲ್ಲಿ ಸಾಗಿದರು. ನಿಲ್ದಾಣ ಬಂತು. ಅವನೂ ಇಳಿದ, ಇವಳೂ ಇಳಿದಳು!

ಆತನೇನೂ ಸುಮ್ಮನಿದ್ದ, ಆದರೆ ಈ ಹುಡುಗಿ ಸುಮ್ಮನಿರಲಿಲ್ಲ. “ಹೇ ಸ್ಕೌಂಡ್ರಲ್, ರೋಡ್‌ ರೋಮಿಯೋ ತರ ನನ್ನ ಹಿಂಬಾಲಿಸ್ತಿದ್ದೀಯಾ?’’ ಎಂದು ಕೋಪದಿಂದ ಬೈದು ಅವಸರದಿಂದ ಅಲ್ಲೇ ಇದ್ದ ಸ್ಟುಡಿಯೋದೊಳಗೆ ಓಡಿ ಹೋಗಿ, ಸಂಗೀತ ನಿರ್ದೇಶಕರಾದ ಖೇಮ್‌ಚಾಂದ್‌ ಪ್ರಕಾಶ್‌ ಅವರಿಗೆ ದೂರು ನೀಡಿಬಿಟ್ಟಳು!
ಅಷ್ಟೊತ್ತಿಗೆ ಆತನೂ ಸ್ಟುಡಿಯೋದೊಳಗೆ ಹೊಕ್ಕಿದ್ದ. ಖೇಮ್‌ಚಾಂದ್ ಅವರಿಗೆ ನಗು ಬಂತು. ಅವನೂ-ಅವಳು ಒಂದೇ ಸ್ಟುಡಿಯೋದೊಳಗೆ ಪ್ರವೇಶಿಸಿದರು. ಅವರು ಆ ಹುಡುಗಿನ ಪಕ್ಕದಲ್ಲಿ ನಿಲ್ಲಿಸಿ, ಈ ಹುಡುಗಗನ್ನೂ ಜೊತೆಗೆ ನಿಲ್ಲಿಸಿಕೊಂಡು ಪರಿಚಯಿಸಿದರು: “ಇವರು ರೋಡ್‌ ರೋಮಿಯೋ ಅಲ್ಲ, ಅವರೊಬ್ಬ ಗಾಯಕ. ಅವರೂ ಇಲ್ಲಿಗೆ ಬರುವವರಿದ್ದರು. ನೀವು ತಪ್ಪಾಗಿ ಅರ್ಥಮಾಡಿಕೊಂಡಿದ್ದೀರಿ” ಎಂದು ಮನವರಿಕೆ ಮಾಡಿದಾಗ ಆ ಹುಡುಗಿಗೆ ಅರ್ಥವಾಗಿತ್ತು!

ಈ ಹುಡುಗಿಯೇ ಲತಾ ಮಂಗೇಶ್ಕರ್‌, ಆ ಹುಡುಗನೇ ಕಿಶೋರ್‌ ಕುಮಾರ್‌. ಇದು ಕಿಶೋರ್—ಲತಾ ಮೊದಲ ಭೇಟಿಯ ಪ್ರಸಂಗವಂತೆ! ಲತಾ ಅವರು ಕಿಶೋರ್‌ ಕುಮಾರ್‌ ಜೊತೆ 300ಕ್ಕೂ ಹೆಚ್ಚು ಯುಗಳ ಗೀತೆಗಳನ್ನು ಹಾಡಿದ್ದಾರೆ. ಈ ಘಟನೆಯನ್ನು‌ ಸ್ವತಃ ಕಿಶೋರ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ