ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ನಲವತ್ತರ ದಶಕದಲ್ಲಿ ಅವರು ಅರು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇವುಗಳಲ್ಲಿ ಐದು ತಮಿಳು ಸಿನಿಮಾ ಮತ್ತು ಒಂದು ಹಿಂದಿ. ‘ಸೇವಾಸದನಂ’ (1938) ತಮಿಳು ಚಿತ್ರದೊಂದಿಗೆ ಅವರು ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. 1940ರಲ್ಲಿ ತೆರೆಕಂಡ ‘ಶಕುಂತಲಾ’ ಚಿತ್ರದಲ್ಲಿ ಅವರು ಶೀರ್ಷಿಕೆ ಪಾತ್ರ ನಿರ್ವಹಿಸಿದ್ದರು. ಮರುವರ್ಷ ತೆರೆಕಂಡ ‘ಸಾವಿತ್ರಿ’ (1941) ಚಿತ್ರದಲ್ಲಿ ಸುಬ್ಬಲಕ್ಷ್ಮಿ ಅವರು ನಾರದನಾಗಿ ಕಾಣಿಸಿಕೊಂಡಿದ್ದು ವಿಶೇಷ. 1945ರಲ್ಲಿ ತೆರೆಗೆ ಬಂದ ‘ಮೀರಾ’ ಚಿತ್ರದಲ್ಲಿನ ಮೀರಾಬಾಯಿ ಪಾತ್ರ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಇದೇ ಸಿನಿಮಾ 1947ರಲ್ಲಿ ‘ಮೀರಾಬಾಯಿ’ ಶೀರ್ಷಿಕೆಯಡಿ ಹಿಂದಿಯಲ್ಲಿ ತಯಾರಾಯ್ತು. ಹಿಂದಿ ಅವತರಣಿಕೆಯಲ್ಲೂ ಸುಬ್ಬಲಕ್ಷ್ಮಿ ಶೀರ್ಷಿಕೆ ಪಾತ್ರ ನಿರ್ವಹಿಸಿದರು. 1947ರಲ್ಲೇ ತೆರೆಕಂಡ ‘1000 ತಲೈ ವಾಂಗಿ ಅಪೂರ್ವ ಚಿಂತಾಮಣಿ’ ತಮಿಳು ಚಿತ್ರದಲ್ಲಿ ಸುಬ್ಬಲಕ್ಷ್ಮಿ ನೃತ್ಯಗಾರ್ತಿಯಾಗಿ ಕಾಣಿಸಿಕೊಂಡಿದ್ದರು.

ಮೊದಲ ಭೇಟಿಯಲ್ಲಿ ಲತಾ, ಕಿಶೋರ್ಗೆ ‘ಸ್ಕೌಂಡ್ರಲ್’ ಎಂದು ಬೈದಿದ್ದರಂತೆ!
ಬರಹ: ಚಿತ್ರಾ ಸಂತೋಷ್ ಅದು 1940ರ ಸುಮಾರು. ಆ ಯುವಕ ಲೋಕಲ್ ಟ್ರೇನು