ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಶುಭಮಂಗಳ

ಬ್ರಾಡ್‌ವೇ ಹೋಟೆಲ್‌ನಲ್ಲಿ ‘ಶುಭಮಂಗಳ’ (1975) ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ ಸಂದರ್ಭ. ಚಿತ್ರದ ನಿರ್ಮಾಪಕ ಕೆ.ಎಸ್‌.ಎಲ್‌.ಸ್ವಾಮಿ (ರವೀ), ನಿರ್ದೇಶಕ ಪುಟ್ಟಣ್ಣ ಕಣಗಾಲ್‌, ಸಂಗೀತ ಸಂಯೋಜಕ ವಿಜಯಭಾಸ್ಕರ್ ಇದ್ದಾರೆ. ನಿರ್ದೇಶಕ ಪುಟ್ಟಣ್ಣನವರ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕರು ವಿಜಯಭಾಸ್ಕರ್‌. ‘ಬೆಳ್ಳಿಮೋಡ’ದಿಂದ ‘ಮಸಣದ ಹೂವು’ ಚಿತ್ರದವರೆಗೆ ಪುಟ್ಟಣ್ಣನವರ 17 ಚಿತ್ರಗಳಿಗೆ ವಿಜಯಭಾಸ್ಕರ್ ಸಂಗೀತವಿದೆ. ಕನ್ನಡ ಸಿನಿಮಾ ಕಂಡ ಮೇರು ಸಂಗೀತ ಸಂಯೋಜಕರಲ್ಲೊಬ್ಬರಾದ ವಿಜಯಭಾಸ್ಕರ್ (07/09/1931 – 03/03/2002) ಜನ್ಮದಿನವಿಂದು. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು