ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ವೈರಮುತ್ತು – 68

ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರೊಂದಿಗೆ ಚಿತ್ರಸಾಹಿತಿ, ಗೀತರಚನೆಕಾರ ವೈರಮುತ್ತು. ಕವಿ, ಕಾದಂಬರಿಕಾರ ವೈರಮುತ್ತು ಗೀತರಚನೆಕಾರರಾಗಿ ಚಿತ್ರರಂಗ ಪ್ರವೇಶಿಸಿದ್ದು ‘ನಿಝಲ್ಗಳ್‌’ (1980) ತಮಿಳು ಚಿತ್ರದೊಂದಿಗೆ. ಭಾರತಿರಾಜ ನಿರ್ದೇಶನದ ಈ ಚಿತ್ರಕ್ಕೆ  ಇಳಯರಾಜ ಸಂಗೀತ ಸಂಯೋಜಿಸಿದ್ದರು. ನಲವತ್ತು ವರ್ಷಗಳ ವೃತ್ತಿ ಬದುಕಿನಲ್ಲಿ ವೈರಮುತ್ತು ಏಳೂವರೆ ಸಾವಿರಕ್ಕೂ ಹೆಚ್ಚು ಚಿತ್ರಗೀತೆ ಹಾಗೂ ಕವಿತೆಗಳನ್ನು ರಚಿಸಿದ್ದಾರೆ. ಅತ್ಯುತ್ತಮ ಚಿತ್ರಗೀತೆ ರಚನೆಗಾಗಿ ಅವರು ಏಳು ಬಾರಿ ರಾಷ್ಟ್ರಪ್ರಶಸ್ತಿಗೆ ಪಾತ್ರರಾಗಿರುವುದು ವಿಶೇಷ. ನಿರ್ದೇಶಕ ಮಣಿರತ್ನಂ, ಸಂಗೀತ ಸಂಯೋಜಕ ಎ.ಆರ್‌.ರೆಹಮಾನ್‌ ಮತ್ತು ವೈರಮುತ್ತು… ಈ ಮೂವರ ಸಹಯೋಗದಲ್ಲಿ ಜನಪ್ರಿಯ ಗೀತೆಗಳು ಸೃಷ್ಟಿಯಾಗಿವೆ. ವೈರಮುತ್ತು ಇಂದು (ಜುಲೈ 13) 68ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು