ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ತಮಿಳು ಸಿನಿಮಾದ ಮೊದಲ ಸೂಪರ್‌ಸ್ಟಾರ್ ತ್ಯಾಗರಾಜ ಭಾಗವತರ್

Share this post

(ಬರಹ: ಮಲ್ಲಿಕಾರ್ಜುನ ಮೇಟಿ)

ಮಾಯಾವರಂ ಕೃಷ್ಣಸ್ವಾಮಿ ತ್ಯಾಗರಾಜ ಭಾಗವತರ್‌ ತಮಿಳು ಚಿತ್ರರಂಗದಲ್ಲಿ ‘ಎಂ.ಕೆ.ಟಿ’ ಎಂದೇ ಹೆಸರಾದವರು. ತಮಿಳು ಚಿತ್ರರಂಗದ ಮೊದಲ ಸೂಪರ್‌ಸ್ಟಾರ್‌! ಶಾಸ್ತ್ರೀಯ ಗಾಯನದಲ್ಲಿ ಪರಿಣತಿ ಹೊಂದಿದ್ದ ಅವರು ಮೊದಲ ಬಣ್ಣ ಹಚ್ಚಿದ್ದು ರಂಗಭೂಮಿಯಲ್ಲಿ. ‘ಪವಲಕ್ಕೊಡಿ’ (1934) ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಅವರು ಚೊಚ್ಚಲ ಪ್ರಯತ್ನದಲ್ಲೇ ದೊಡ್ಡ ಗೆಲುವು ಕಂಡರು. 1934ರಿಂದ 1959ರ ಅವಧಿಯಲ್ಲಿ ತ್ಯಾಗರಾಜ ಭಾಗವತರ್‌ ಹದಿನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳ ಪೈಕಿ ಹತ್ತು ಚಿತ್ರಗಳು ಬಹುದೊಡ್ಡ ಯಶಸ್ಸು ದಾಖಲಿಸಿದವು. ಸತ್ಯಶೀಲನ್ (ದ್ವಿಪಾತ್ರ), ಚಿಂತಾಮಣಿ, ಅಂಬಿಕಾಪತಿ, ತಿರುನೀಲಕಂಠರ್‌, ಅಶೋಕ್ ಕುಮಾರ್, ಶಿವಕವಿ… ಅವರ ಕೆಲವು ಪ್ರಮುಖ ಚಿತ್ರಗಳು.

1944ರಲ್ಲಿ ತೆರೆಕಂಡ ಅವರ ‘ಹರಿದಾಸ್‌’ ಸಿನಿಮಾ ಮದರಾಸಿನ ಬ್ರಾಡ್‌ವೇ ಥಿಯೇಟರ್‌ನಲ್ಲಿ ನಿರಂತರವಾಗಿ ಎರಡೂವರ್ಷ ಪ್ರದರ್ಶನ ಕಂಡಿದ್ದೊಂದು ದಾಖಲೆ. ಸತತ ಗೆಲುವಿನ ಹಿನ್ನೆಲೆಯಲ್ಲಿ ತ್ಯಾಗರಾಜ ಭಾಗವತರ್ ಸಂಭಾವನೆ ಬಹು ದುಬಾರಿಯಾಗಿತ್ತು. ಯಶಸ್ಸಿನ ಉತ್ತುಂಗದಲ್ಲಿದ್ದಾಗ ದುರದೃಷ್ಟವತಾಶ್ ತ್ಯಾಗರಾಜ ಭಾಗವತರ್‌ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿದರು. ತಮಿಳು ಸಿನಿಮಾ ಪತ್ರಕರ್ತ ಲಕ್ಷ್ಮೀಕಾಂತನ್‌ ಕೊಲೆ ಪ್ರಕರಣದ ಆರೋಪಿಯಾಗಿ ಭಾಗವತರ್ ಮೂರು ವರ್ಷಗಳ ಕಾಲ ಜೈಲು ವಾಸ ಅನುಭವಿಸಬೇಕಾಯ್ತು.

ತ್ಯಾಗರಾಜ ಭಾಗವತರ್ ಜೈಲು ಸೇರಿದಾಗ ಅವರಿಗೆ ಬರುತ್ತಿದ್ದ ಅವಕಾಶಗಳು ಕನ್ನಡಿಗ ಹೊನ್ನಪ್ಪ ಭಾಗವತರ್ ಅವರ ಪಾಲಾದವು. ಆ ಸಂದರ್ಭದಲ್ಲಿ ಹೊನ್ನಪ್ಪ ಭಾಗವತರ್ ಅವರು ತ್ಯಾಗರಾಜ ಭಾಗವತರನ್ನು ಜೈಲಿನಲ್ಲಿ ಕಂಡು ಅವರ ಒಪ್ಪಿಗೆ ಪಡೆದು ಮುಂದುವರೆಯುತ್ತಿದ್ದರು. ಕೊಲೆ ಆರೋಪದಲ್ಲಿ ನಿರ್ದೋಷಿ ಎಂದು ಬಿಡುಗಡೆಯಾಗಿ ಹೊರಬಂದ ನಂತರ ತ್ಯಾಗರಾಜ ಭಾಗವತರ್‌ ಅವರಿಗೆ ಮೊದಲಿನಂತೆ ಅವಕಾಶಗಳು ಸಿಗಲಿಲ್ಲ. ಹಿಂದಿದ್ದ ಜನಪ್ರಿಯತೆ ಕುಂದಿತ್ತು. ನಂತರದ ದಿನಗಳನ್ನು ಕಷ್ಟದಲ್ಲಿ ಕಳೆದರೂ ತಮಿಳು ಚಿತ್ರರಂಗದಲ್ಲಿ ಚರಿತ್ರಾರ್ಹವಾಗಿ ಉಳಿದಿದ್ದಾರೆ.

ತ್ಯಾಗರಾಜ ಭಾಗವತರ್ ಅಭಿನಯದ ‘ಹರಿದಾಸ’ ಚಿತ್ರದ ಹಾಡು

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ