ಬಹುಭಾಷಾ ನಟಿ ಶಾರದ ಮತ್ತು ಗಾಯಕಿ ಜಾನಕಿ ಇಬ್ಬರೂ ಕೇರಳ ರಾಜ್ಯ ಪ್ರಶಸ್ತಿ (1970) ಗೌರವ ಪಡೆದ ಸಂದರ್ಭದ ಫೋಟೊ ಇದು. ಮೊನ್ನೆಯಷ್ಟೇ (ಜೂನ್ 25) 76ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಶಾರದ ಮೂರು ಬಾರಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಮಲಯಾಳಂನ ‘ತುಲಾಭಾರಂ’ ಮತ್ತು ‘ಸ್ವಯಂವರಂ’ ಹಾಗೂ ತೆಲುಗಿನ ‘ನಿಮಜ್ಜನಂ’ ಚಿತ್ರಗಳ ಶ್ರೇಷ್ಠ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರಪ್ರಶಸ್ತಿ ಗೌರವ ಸಂದಿದೆ. ಶಾರದ ಅವರಿಗಾಗಿ ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ನಾಲ್ಕೂ ಭಾಷೆಗಳಲ್ಲಿ ಎಸ್.ಜಾನಕಿ ಹಾಡಿದ್ದಾರೆ ಎನ್ನುವುದು ವಿಶೇಷ. (Photo Courtesy: S Janaki Net)

ಶಾರದ – ಜಾನಕಿ
- ಬಹುಭಾಷಾ ಸಿನಿಮಾ
Share this post