ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಫಲಿತಾಂಶ’ (1976) ಚಿತ್ರದಲ್ಲಿ ಜೈಜಗದೀಶ್ ಮತ್ತು ಆರತಿ. ಈ ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದ ಜೈಜಗದೀಶ್ ನಾಯಕನಟ, ಖಳನಾಯಕ, ಪೋಷಕ ನಟನಾಗಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಪಡುವಾರಹಳ್ಳಿ ಪಾಂಡವರು’, ‘ಗಾಳಿಮಾತು’, ‘ಬೆಂಕಿಯಲ್ಲಿ ಅರಳಿದ ಹೂವು’, ‘ಬಂಧನ’, ‘ಮದುವೆ ಮಾಡು ತಮಾಷೆ ನೋಡು’, ‘ಘರ್ಜನೆ’ ಅವರ ಕೆಲವು ಪ್ರಮುಖ ಚಿತ್ರಗಳು. ‘ಭೂಮಿ ತಾಯಿ ಚೊಚ್ಚಲ ಮಗ’ ಚಿತ್ರದೊಂದಿಗೆ ನಿರ್ಮಾಪಕರಾದ ಅವರು ಮುಂದೆ ಕೆಲವು ಚಿತ್ರಗಳನ್ನು ನಿರ್ಮಿಸಿದರು. ‘ಮದನ’ ಚಿತ್ರ ನಿರ್ದೇಶಿಸಿದ್ದಾರೆ. ಇಂದು (ಜೂನ್ 29) ಜೈಜಗದೀಶ್ ಅವರ 67ನೇ ಹುಟ್ಟುಹಬ್ಬ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಜೈಜಗದೀಶ್ – 67
- ಕನ್ನಡ ಸಿನಿಮಾ
Share this post