ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅರೆ ನೀವು, ಒಳಗೆ ಮಲಗಿದ್ರಲ್ವಾ?

ಪೋಸ್ಟ್ ಶೇರ್ ಮಾಡಿ
ಟೆನ್ನಿಸ್ ಕೃಷ್ಣ
ನಟ

ನಾಲ್ಕು ಹೆಜ್ಜೆ ಹಾಕುತ್ತಿದ್ದಂತೆ ಅವರಿಗಲ್ಲಿ ನಾನು ಎದುರಾದೆ! `ಅರೆ ನೀವು, ಒಳಗೆ ಮಲಗಿದ್ರಲ್ವಾ?’ ಎಂದು ಗಾಬರಿಯಿಂದ ಕೇಳಿದರು. `ಸಾರ್, ನಾನು ನಿಮಗಿಂತ ಮುಂಚೆ ಎದ್ದು ಸಿದ್ಧವಾಗಿ ವಾಕ್ ಮಾಡ್ತಿದೇನೆ’ ಎಂದಾಗ ಅವರಿಗೆ ಸಮಾಧಾನವಾಯ್ತು.

ಚಿಕ್ಕಮಗಳೂರಿನಲ್ಲಿ `ಮುಸುಕು’ ಚಿತ್ರೀಕರಣದ ಸಂದರ್ಭ. ಹಿರಿಯ ನಟ ಕೆ.ಎಸ್.ಅಶ್ವತ್ಥ್ ಮತ್ತು ನನಗೆ ಒಂದೇ ಕೋಣೆಯಲ್ಲಿ ವಾಸ್ತವ್ಯವಿತ್ತು. ಮೊದಲ ದಿನ ಸಂಜೆ ಶೂಟಿಂಗ್ ಮುಗಿಸಿಕೊಂಡು ಕೋಣೆಗೆ ಬಂದಾಗ ಅಶ್ವತ್ಥ ಅವರು, `ಟೆನ್ನಿಸ್ ಅವರೇ ನನಗೆ ಮೊದಲಿನಿಂದಲೂ ಒಂದು ಅಭ್ಯಾಸವಿದೆ. ರಾತ್ರಿ ಬೇಗ ಊಟ ಮುಗಿಸಿ, ಬೇಗನೇ ಮಲಗುತ್ತೇನೆ. ಮುಂಜಾನೆ ನಾಲ್ಕೂವರೆಗೇ ಎದ್ದು ವಾಕಿಂಗ್ ಮಾಡ್ತೇನೆ. ನಿಮಗೇನೂ ತೊಂದರೆ ಇಲ್ಲಾ ತಾನೇ?’ ಎಂದು ಪ್ರಶ್ನಿಸಿದರು. `ನನಗೇನೂ ತೊಂದರೆ ಇಲ್ಲ ಸಾರ್, ನಾನು ಕೂಡ ಬೇಗ ಏಳುತ್ತೇನೆ..’ ಎಂದೆ. ಮರುದಿನ ಮುಂಜಾನೆ ನಾಲ್ಕೂವರೆಗೇ ಎದ್ದ ಅಶ್ವತ್ಥ್ ಕೋಣೆಯ ಲೈಟ್ ಹಾಕಿಲ್ಲ. ಲೈಟ್ ಹಾಕಿದರೆ ಮಲಗಿದ ನನಗೆ ತೊಂದರೆಯಾಗುತ್ತದೆಂದು ಸೈಲೆಂಟಾಗಿ ಬಾತ್‍ರೂಂಗೆ ಹೋಗಿ ಸ್ನಾನ ಮುಗಿಸಿ ಬಂದಿದ್ದಾರೆ.

ಇನ್ನೇನು ಕೋಣೆಯಿಂದ ಹೊರನಡೆಯಬೇಕು ಎನ್ನುವಷ್ಟರಲ್ಲಿ, ಹೊರಗೆ ಯಾರೋ ಓಡಾಡುತ್ತಿರುವುದು ಕಿಟಕಿಯಲ್ಲಿ ಕಾಣಿಸಿದೆ. ಅವರಿಗೆ ಕೊಂಚ ಆತಂಕವಾಗಿದೆ. ಸದ್ದಿಲ್ಲದೆ ಕೋಣೆ ಬಾಗಿಲು ಹಾಕಿಕೊಂಡು ಹೊರಬಂದಿದ್ದಾರೆ. ನಾಲ್ಕು ಹೆಜ್ಜೆ ಹಾಕುತ್ತಿದ್ದಂತೆ ಅವರಿಗಲ್ಲಿ ನಾನು ಎದುರಾದೆ! `ಅರೆ ನೀವು, ಒಳಗೆ ಮಲಗಿದ್ರಲ್ವಾ?’ ಎಂದು ಗಾಬರಿಯಿಂದ ಕೇಳಿದರು. `ಸಾರ್, ನಾನು ನಿಮಗಿಂತ ಮುಂಚೆ ಎದ್ದು ಸಿದ್ಧವಾಗಿ ವಾಕ್ ಮಾಡ್ತಿದೇನೆ’ ಎಂದಾಗ ಅವರಿಗೆ ಸಮಾಧಾನವಾಯ್ತು. `ವೆರಿಗುಡ್ ವೆರಿಗುಡ್, ಒಳ್ಳೇ ಅಭ್ಯಾಸ ರೂಢಿಸಿಕೊಂಡಿದ್ದೀರಿ. ಇದನ್ನೇ ಮೇಂಟೇನ್ ಮಾಡಿ…’ ಎಂದು ನನ್ನೊಂದಿಗೆ ಹೆಜ್ಜೆ ಹಾಕಿದರು.

ಮತ್ತಷ್ಟು ಸೋಜಿಗ

ಜನಪ್ರಿಯ ಪೋಸ್ಟ್ ಗಳು

ದಿಕ್ಕಾಪಾಲಾಗಿ ಓಡಿದೆವು..!

ಕಾರಿನಲ್ಲಿ ನಾನು, ಡ್ರೈವರ್‌ ಇಬ್ಬರೇ. ಮೂರ್ನಾಲ್ಕು ಕಿಲೋ ಮೀಟರ್ ಹೋಗುತ್ತಿದ್ದಂತೆ ಡ್ರೈವರ್‌ ಕಾರಿನ ಬ್ರೇಕ್ ಒತ್ತಿದ. ಎದುರಿಗೆ ಏಳೆಂಟು ಆನೆಗಳ

‘ಡಮ್ಮಿ’ ಜೊತೆ ನಿಜ ಕಲ್ಲುಗಳನ್ನೂ ಬೀಸಿದರು!

ಸಿದ್ದಲಿಂಗಯ್ಯ ನಿರ್ದೇಶನದ ‘ಹೇಮಾವತಿ’ ಕಥಾವಸ್ತುವಿನ ದೃಷ್ಟಿಯಿಂದ ಮಹತ್ವದ ಚಿತ್ರವಾಗಿ ದಾಖಲಾಗಿದೆ. ಚಿತ್ರದ ಹಲವು ಸನ್ನಿವೇಶಗಳಲ್ಲಿ ನಟ-ನಟಿಯರ ಜೊತೆ ಸ್ಥಳೀಯರೂ ಪಾತ್ರಧಾರಿಗಳಾಗಿದ್ದಾರೆ.