ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟ – ನಿರ್ದೇಶಕ ಸಿ.ಆರ್.ಸಿಂಹ

ಟಿ.ಎನ್‌.ನರಸಿಂಹನ್‌ ರಚನೆ – ನಿರ್ದೇಶನದ ‘ಟಿಪಿಕಲ್ ಟಿ.ಪಿ.ಕೈಲಾಸಂ’ ನಾಟಕದ ಶೀರ್ಷಿಕೆ ಪಾತ್ರದಲ್ಲಿ ಸಿ.ಆರ್.ಸಿಂಹ. ಭಾರತದ ಹಲವೆಡೆ ಮಾತ್ರವಲ್ಲದೆ ಅಮೆರಿಕ, ಕೆನಡಾ, ಇಂಗ್ಲೆಂಡ್‌, ಗಲ್ಫ್‌ ದೇಶಗಳಲ್ಲಿ 1000ಕ್ಕೂ ಹೆಚ್ಚು ಪ್ರದರ್ಶನ ಕಂಡ ಜನಪ್ರಿಯ ನಾಟಕವಿದು. ಸಿ.ಆರ್‌.ಸಿಂಹ (ಚನ್ನಪಟ್ಟಣ ರಾಮಸ್ವಾಮಿ ಸಿಂಹ) ಅವರು ತಮ್ಮ ವೇದಿಕೆ ನಾಟಕಶಾಲೆ ಸಂಸ್ಥೆಯಿಂದ ನಾಟಕವನ್ನು ರಂಗಕ್ಕೆ ತಂದಿದ್ದರು. ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ವಿಶಿಷ್ಠ ಛಾಪು ಮೂಡಿಸಿದ್ದ ನಟ – ನಿರ್ದೇಶಕ ಸಿ.ಆರ್‌.ಸಿಂಹ (16/06/1942 – 28/02/2014) ಅವರ ಜನ್ಮದಿನವಿಂದು (ಜೂನ್‌ 16).

Share this post