ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಹುಲುಗಪ್ಪ ಕಟ್ಟಿಮನಿ – 60

ಗಿರೀಶ್ ಕಾರ್ನಾಡ್‌ ರಚನೆ, ಸಿ.ಬಸವಲಿಂಗಯ್ಯ ನಿರ್ದೇಶನದ ‘ಟಿಪ್ಪುವಿನ ಕನಸುಗಳು’ (1998) ನಾಟಕದ ಶೀರ್ಷಿಕೆ ಪಾತ್ರದಲ್ಲಿ ಹುಲುಗಪ್ಪ ಕಟ್ಟಿಮನಿ. ‘ರಂಗಾಯಣ’ದ ಖ್ಯಾತ ರಂಗಕಲಾವಿದ ಕಟ್ಟಿಮನಿ ಅವರಿಗೆ ಇಂದು (ಜುಲೈ 01) ಅರವತ್ತನೇ ಹುಟ್ಟುಹಬ್ಬ. 1989ರಿಂದ ರಂಗಾಯಣದಲ್ಲಿ ಕಲಾವಿದರಾಗಿದ್ದ ಕಟ್ಟಿಮನಿ ಅವರು ಅಲ್ಲಿ 32 ವರ್ಷಗಳ ಕಲಾಸೇವೆ ನಡೆಸಿ ನಿನ್ನೆ (ಜೂನ್‌ 30) ನಿವೃತ್ತರಾದರು. ತಲೆದಂಡ, ಶಿಕಾರಿ, ಜ್ಯೂಲಿಯಸ್ ಸೀಸರ್‌, ಶಿಖರ ಸೂರ್ಯ, ಚೆಕ್‌ಮೇಟ್‌, ಚಿರಬಂದಿವಾಡೆ, ಇತ್ತೀಚಿನ ಪರ್ವ ಅವರ ಅಭಿನಯದ ಪ್ರಮುಖ ನಾಟಕಗಳು. ತಮ್ಮದೇ ‘ಸಂಕಲ್ಪ’ ರಂಗತಂಡದಿಂದ ಅವರು ಕಳೆದ 24 ವರ್ಷಗಳಿಂದ ಜೈಲಿನಲ್ಲಿರುವ ಖೈದಿಗಳಿಗೆ ನಾಟಕಗಳನ್ನು ಮಾಡಿಸುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಂಗಪ್ರಯೋಗಗಳನ್ನು ಹಮ್ಮಿಕೊಳ್ಳುವ ಗುರಿ ಅವರದು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು