ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ತಂದೆಯೇ ಗುರುವು

ತಂದೆ, ಚಿತ್ರಸಾಹಿತಿ ಚಿ.ಸದಾಶಿವಯ್ಯ ಅವರೊಂದಿಗೆ ಚಿತ್ರಸಾಹಿತಿ ಚಿ.ಉದಯಶಂಕರ್‌. ತಂದೆಯವರ ಮಾರ್ಗದರ್ಶನದಲ್ಲಿ ಉದಯಶಂಕರ್ ಚಿತ್ರಸಾಹಿತಿಯಾಗಿ ರೂಪುಗೊಂಡರು. ‘ಸಂತ ತುಕಾರಾಂ’ (1963) ಚಿತ್ರಕ್ಕೆ ಸಂಭಾಷಣೆ ರಚಿಸುವುದರೊಂದಿಗೆ ಉದಯಶಂಕರ್ ಸಿನಿಮಾ ಬರವಣಿಗೆ ಶುರುವಾಯ್ತು. ‘ಶಿವರಾತ್ರಿ ಮಹಾತ್ಮೆ’ (1964) ಚಿತ್ರಕ್ಕೆ ಮೊದಲ ಹಾಡು ಬರೆದರು. ಚಿ.ಉದಯಶಂಕರ್ 300ಕ್ಕೂ ಹೆಚ್ಚು ಚಿತ್ರಗಳಿಗೆ ಚಿತ್ರಸಾಹಿತ್ಯ ಬರೆದಿದ್ದು, ರಚಿಸಿರುವ ಹಾಡುಗಳ ಸಂಖ್ಯೆ 3000 ದಾಟುತ್ತದೆ. ಡಾ.ರಾಜಕುಮಾರ್ ಅಭಿನಯದ 97 ಚಿತ್ರಗಳ ಚಿತ್ರಸಾಹಿತ್ಯ ಅವರದ್ದೆ. ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕುಲಗೌರವ, ನಾಗರಹಾವು, ಪ್ರೇಮದ ಕಾಣಿಕೆ, ಜೀವನ ಚೈತ್ರ ಚಿತ್ರಗಳ ಸಂಭಾಷಣೆಗಾಗಿ ಮತ್ತು ಭಾಗ್ಯದ ಲಕ್ಷ್ಮೀ ಬಾರಮ್ಮ, ಆನಂದ್ ಸಿನಿಮಾಗಳ ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಚಿ.ಉದಯಶಂಕರ್ ಅಗಲಿದ ದಿನವಿಂದು (ಜುಲೈ 2). (ಫೋಟೊ: ಭವಾನಿ ಲಕ್ಷ್ಮೀನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು