ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ

‘ಕೃಷ್ಣಲೀಲಾ’ ಜನಪ್ರಿಯ ನಾಟಕದಲ್ಲಿ ಕಂಸನಾಗಿ ಖ್ಯಾತ ರಂಗನಟ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ, ಕೃಷ್ಣ – ಬಲರಾಮರಾಗಿ ಬಿ.ವಿ.ಕಾರಂತ್ ಮತ್ತು ಗುಬ್ಬಿ ಕಂಪನಿಯ ಬಸವರಾಜು. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ 30, 40ರ ದಶಕಗಳ ವೃತ್ತಿರಂಗಭೂಮಿ ವಲಯದಲ್ಲಿ ದೊಡ್ಡ ಹೆಸರು. ಗುಬ್ಬಿ ಕಂಪನಿ, ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯ ಪ್ರಮುಖ ಕಲಾವಿದರಾಗಿ ಗುರುತಿಸಿಕೊಂಡಿದ್ದ ಅವರು ರೌದ್ರ ಪಾತ್ರಗಳಿಗೆ ಹೆಸರಾಗಿದ್ದವರು. ಇವರು ಪಾತ್ರ ನಿರ್ವಹಿಸುತ್ತಿದ್ದ ಕೆಲವು ನಾಟಕಗಳಲ್ಲಿ ಪುತ್ರ ಮುತ್ತುರಾಜ (ವರನಟ ರಾಜಕುಮಾರ್) ಬಾಲನಟನಾಗಿ ಅಭಿನಯಿಸಿದ್ದರು. ಇಂದು (ಸೆಪ್ಟೆಂಬರ್‌ 09) ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಸಂಸ್ಮರಣಾ ದಿನ. (ಫೋಟೊ ಕೃಪೆ: ರಗಾಂಕ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು