ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮಮ್ತಾಜ್‌ ಬೇಗಮ್

ನಟಿ
ಪೋಸ್ಟ್ ಶೇರ್ ಮಾಡಿ

ಹಿಂದಿ ಸಿನಿಮಾಗಳ ಪೋಷಕ ಪಾತ್ರಗಳಲ್ಲಿ ಚಿರಪರಿಚಿತ ನಟಿ ಮಮ್ತಾಜ್ ಬೇಗಮ್‌. ವಿ.ಶಾಂತಾರಾ ನಿರ್ದೇಶನದ ‘ದಹೇಜ್‌’ (1950) ಚಿತ್ರದಲ್ಲಿ ಪೃಥ್ವಿರಾಜ್ ಕಪೂರ್ ಅವರ ಪತ್ನಿಯ ಪಾತ್ರದೊಂದಿಗೆ ಅವರು ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಎ.ಆರ್.ಕರ್ದರ್‌ ನಿರ್ದೇಶನದ ‘ದೀವಾನಾ’ (1952) ಚಿತ್ರದಲ್ಲಿ ಅವರಿಗೆ ಸುರಯ್ಯಾ ಜೊತೆ ನಟಿಸುವ ಅವಕಾಶ ಲಭಿಸಿತು. ದೇವೇಂದ್ರ ಗೋಯೆಲ್‌ ಅವರ ‘ಚಿರಾಗ್ ಕಹಾ ರೋಷಿನಿ ಕಹಾ’ (1959) ನಾಯಕಿ ಮೀನಾಕುಮಾರಿ ಅತ್ತೆಯ ಪಾತ್ರದಲ್ಲಿ ಮಮ್ತಾಜ್‌ ಅವರನ್ನು ಪ್ರೇಕ್ಷಕರು ಮೆಚ್ಚಿಕೊಂಡರು.

‘ಏಕ್‌ ಫೂಲ್ ಚಾರ್‌ ಕಾಂಟೆ’ ಚಿತ್ರದಲ್ಲಿ ಸುನೀಲ್ ದತ್‌ ಜೊತೆ ಮಮ್ತಾಜ್ ಬೇಗಂ

ಮೂವತ್ತು ವರ್ಷಗಳ ವೃತ್ತಿ ಬದುಕಿನಲ್ಲಿ ಮಮ್ತಾಜ್ ಪೋಷಕ ತಾಯಿ, ಅತ್ತೆ, ಚಿಕ್ಕಮ್ಮ… ಹೀಗೆ ವೈವಿಧ್ಯಮಯ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಒಂದೆಡೆ ಅವರ ಸಮಕಾಲೀನ ಪೋಷಕ ನಟಿಯರಾದ ದುರ್ಗಾ ಕೋಟೆ, ಲಲಿತಾ ಪವಾರ್‌, ಲೀಲಾ ಚಟ್ನಿಸ್‌, ಅಚ್ಲಾ ಸಚ್‌ದೇವ್‌ ದೊಡ್ಡ ಸಂಭಾವನೆ ಪಡೆದರೆ, ಮಮ್ತಾಜ್‌ ಬೇಗಮ್‌ ಕಡಿಮೆ ಸಂಭಾವನೆ ಪಡೆದು ನಟಿಸುತ್ತಾ ಬಂದರು. ಎಂಬತ್ತರ ದಶಕದ ನಂತರ ಅವರು ಬಹುತೇಕ ಬೆಳ್ಳಿತೆರೆಯಿಂದ ದೂರವಾದರು. ಜಾಗೃತಿ, ನಾಸ್ತಿಕ್‌, ಬಹೂ, ನ್ಯೂಡೆಲ್ಲಿ, ಚಂಪಾಕಲಿ, ಬರ್ಸಾತ್ ಕಿ ರಾತ್‌, ಪರಾಖ್‌, ಬಾತ್ ಏಕ್ ರಾತ್ ಕಿ, ದಿಲ್ ತೇರಾ ದೀವಾನಾ, ದಿಲ್ ಹೀ ತೋ ಹೈ, ತೇರೆ ಘರ್ ಕೆ ಸಾಮ್ನೆ, ಆಯೀ ಮಿಲನ್ ಕಿ ಬೇಲಾ, ನೀಲಾ ಆಕಾಶ್, ಏಕ್ ಸಪೇರಾ ಏಕ್ ಲುಟೇರಾ, ದಿಲ್ ನೇ ಫಿರ್ ಯಾದ್ ಕಿಯಾ, ಆತ್ಮಾ ರಾಮ್‌, ದೂಸ್ರೀ ಸೀತಾ… ಮಮ್ತಾಜ್ ನಟನೆಯ ಪ್ರಮುಖ ಚಿತ್ರಗಳು.

(ಫೋಟೊ ಕೃಪೆ: Cinestaan)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಅಪರೂಪದ ಸಾಧಕ ವೀರಾಸ್ವಾಮಿ

ಉತ್ತರ ಭಾರತದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ `ಡ್ರೀಮ್‍ಲ್ಯಾಂಡ್’ ಸಿನಿಮಾ ಹಂಚಿಕೆ ಕಚೇರಿ ನಡೆಸುತ್ತಿದ್ದರು. ಅವರಲ್ಲಿ ಸಾಮಾನ್ಯ ನೌಕರನಾಗಿ ಕೆಲಸಕ್ಕೆ ಸೇರಿದ ವೀರಾಸ್ವಾಮಿ

ಫಾರೂಕ್ ಶೇಕ್

ಭಾರತೀಯ ಚಿತ್ರರಂಗದ ಹೊಸ ಅಲೆಯ ಸಿನಿಮಾ ಯಾದಿಯಲ್ಲಿ ನಟ ಫಾರೂಕ್ ಶೇಕ್‌ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ರಂಗಭೂಮಿ, ಸಿನಿಮಾ ಮತ್ತು