ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪ್ರತಿಮಾದೇವಿ

ನಟಿ
ಪೋಸ್ಟ್ ಶೇರ್ ಮಾಡಿ

ಕನ್ನಡ ಚಿತ್ರರಂಗದ ಆರಂಭದ ದಿನಗಳ ನಾಯಕನಟಿ ಪ್ರತಿಮಾದೇವಿ. ಹುಟ್ಟೂರು ಉಡುಪಿ. ಅವರ ಜನ್ಮನಾಮ ಮೋಹಿನಿ. ಅಭಿನಯ ಶುರು ಮಾಡಿದ್ದು ನಾಟಕಗಳಲ್ಲಿ. ರಂಗಭೂಮಿಯಲ್ಲಿ ಅವರ ಹೆಸರು ಪ್ರತಿಮಾ ಎಂದಾಯ್ತು. ‘ಕೃಷ್ಣಲೀಲಾ’ (1947) ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾದರು. ‘ಬಿಂದು ಬಿ.ಎ.’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರಾದರೂ, ಈ ಚಿತ್ರ ತೆರೆಕಾಣಲಿಲ್ಲ. ಮುಂದೆ ಮಹಾತ್ಮಾ ಪಿಕ್ಚರ್ಸ್‌ನ ಶಂಕರ್‌ಸಿಂಗ್ ನಿರ್ದೇಶಿಸಿದ ‘ಜಗನ್ಮೋಹಿನಿ’ (1951) ಚಿತ್ರದೊಂದಿಗೆ ನಾಯಕಿಯಾಗಿ ಜನಪ್ರಿಯತೆ ಗಳಿಸಿದರು.

‘ಭಕ್ತ ಚೇತ’ ಚಿತ್ರದಲ್ಲಿ ಡಾ.ರಾಜಕುಮಾರ್ ಅವರಿಗೆ ನಾಯಕಿಯಾಗಿ ನಟಿಸಿದ ಪ್ರತಿಮಾದೇವಿ ಮಹಾತ್ಮಾ ಪಿಕ್ಚರ್ಸ್‌ನ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಖ್ಯಾತಿ ಪಡೆದರು. ಎಪ್ಪತ್ತರ ದಶಕದ ನಂತರ ಪ್ರತಿಮಾದೇವಿ ಹಲವಾರು ಚಿತ್ರಗಳ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಶಿವಪಾರ್ವತಿ, ಶ್ರೀ ಶ್ರೀನಿವಾಸ ಕಲ್ಯಾಣ, ಚಂಚಲ ಕುಮಾರಿ, ಮುಟ್ಟಿದ್ದೆಲ್ಲಾ ಚಿನ್ನ, ಮಾಡಿದ್ದುಣ್ಣೋ ಮಹಾರಾಯ, ಶಿವಶರಣೆ ನಂಬಿಯಕ್ಕ, ಪ್ರಭುಲಿಂಗ ಲೀಲೆ, ಮಂಗಳ ಸೂತ್ರ, ಶಿವಲಿಂಗ ಸಾಕ್ಷಿ, ರಾಜ ಸತ್ಯವ್ರತ, ಧರ್ಮಸ್ಥಳ ಮಹಾತ್ಮೆ, ಪಾಲಿಗೆ ಬಂದದ್ದೇ ಪಂಚಾಮೃತ, ಪಾತಾಳ ಮೋಹಿನಿ, ನಾಗರಹಾವು, ನಾರದ ವಿಜಯ, ಧರಣಿ ಮಂಡಲ ಮಧ್ಯದೊಳಗೆ, ರಾಮ ಶ್ಯಾಮ ಭಾಮ.. ಸೇರಿದಂತೆ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರತಿಮಾದೇವಿ ಅಭಿನಯಿಸಿದ್ದಾರೆ.

ಪ್ರತಿಮಾದೇವಿ ಅವರಿಗೆ 2001-02ನೇ ಸಾಲಿನ ಡಾ.ರಾಜಕುಮಾರ್‌ ಜೀವಮಾನ ಸಾಧನೆ ಪುರಸ್ಕಾರ ಸಂದಿದೆ. ಶಂಕರ್‌ಸಿಂಗ್‌ – ಪ್ರತಿಮಾದೇವಿ ತಾರಾದಂಪತಿ ಪುತ್ರ ಎಸ್‌.ವಿ.ರಾಜೇಂದ್ರಸಿಂಗ್ ಬಾಬು ಖ್ಯಾತ ಚಿತ್ರನಿರ್ದೇಶಕ. ಪುತ್ರಿ ವಿಜಯಲಕ್ಷ್ಮೀ ಸಿಂಗ್ ನಟಿ – ಚಿತ್ರನಿರ್ದೇಶಕಿ. ಅವರ ಮೊಮ್ಮಗ ಆದಿತ್ಯ ಮತ್ತು ಮೊಮ್ಮಕ್ಕಳು (ವಿಜಯಲಕ್ಷ್ಮೀಸಿಂಗ್‌ – ಜೈಜಗದೀಶ್ ದಂಪತಿಯ ಮೂವರು ಪುತ್ರಿಯರು) ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಪ್ರತಿಮಾದೇವಿ | ಜನನ: 09/04/1933 | ನಿಧನ: 06/04/2021

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಕನ್ನಡಕ್ಕೊಬ್ಬರೇ ಬಾಲಣ್ಣ

ಬಾಲಣ್ಣ ತೀರಿಹೋಗಿ 26 ವರ್ಷ ಆಗಿದ್ದರೂ ಅವರಿಗೆ ಅವರ ಪಾತ್ರಗಳಿಗೆ ಸರಿಸಾಟಿ ಯಾರಿದ್ದಾರೆ? ಬಾಲಣ್ಣನವರಿಗೆ ಸರಿಸಾಟಿಯಾಗಿ ನಿಲ್ಲುವವರು ಬಾಲಣ್ಣನವರು ಮಾತ್ರ.

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ