ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಪೇಷನ್ಸ್ ಕೂಪರ್

ಪೋಸ್ಟ್ ಶೇರ್ ಮಾಡಿ

ಭಾರತದ ಮೊದಲ ಸಿನಿಮಾ ಸ್ಟಾರ್‌ಗಳಲ್ಲಿ ನಟಿ ಪೇಷನ್ಸ್ ಕೂಪರ್ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ಕೊಲ್ಕೊತ್ತಾ ಮೂಲದ ಆಂಗ್ಲೋ ಇಂಡಿಯನ್‌ ಪೇಷನ್ಸ್ ಕೂಪರ್ ಮೊದಲು ‘ಬ್ಯಾಂಡ್‌ಮನ್‌’ ಡ್ಯಾನ್ಸ್ ಟ್ರೂಪ್‌ನಲ್ಲಿ ನೃತ್ಯಗಾರ್ತಿಯಾಗಿದ್ದರು. ಮುಂದೆ ಮದನ್‌ ರಂಗತಂಡದ ಹಲವು ನಾಟಕಗಳಲ್ಲಿ ಅಭಿನಯಿಸಿದರು. ನಂತರದ ದಿನಗಳಲ್ಲಿ ಮದನ್‌ ಥಿಯೇಟರ್‌ ಪಿಕ್ಚರ್ಸ್‌ ಬ್ಯಾನರ್‌ ಸಿನಿಮಾಗಳನ್ನು ತಯಾರಿಸಿತು. ಅಲ್ಲಿನ ಮೂಕಿ ಚಿತ್ರಗಳಲ್ಲಿ ಪೇಷನ್ಸ್ ಕೂಪರ್ ನಟಿಸಿದರು. ನಳ ದಮಯಂತಿ (1920), ಧ್ರುವ ಚರಿತಾ, ಪತಿ ಭಕ್ತಿ, ರತ್ನಾವಳಿ, ನೂರ್‌ ಜಹಾನ್‌ ಮುಂತಾದ ಮೂಕಿ ಚಿತ್ರಗಳಲ್ಲಿ ಹೆಸರು ಗಳಿಸಿದ ಪೇಷನ್ಸ್ ಕೂಪರ್‌ ಟಾಕಿ ಸಿನಿಮಾಗಳತ್ತ ಹೊರಳಿದರು. ಶ್ವೇತವರ್ಣ, ಚೂಪುಗಣ್ಣಿನ ಅವರು ‘ಹಾಲಿವುಡ್‌ ಲುಕ್‌’ನ ಪಾತ್ರಗಳಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತಿದ್ದರು ಎಂದು ಆಗ ತಂತ್ರಜ್ಞರು ಅಭಿಪ್ರಾಯ ಪಟ್ಟಿದ್ದರು.

ಭಾರತೀಯ ಸಿನಿಮಾದ ಆರಂಭದ ಕೆಲವು ದ್ವಿಪಾತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಪೇಷನ್ಸ್ ಕೂಪರ್ ಅವರದ್ದು. ‘ಪತ್ನಿ ಪ್ರತಾಪ್‌’ ಮತ್ತು ‘ಕಶ್ಮೀರಿ ಸುಂದರಿ’ ಅವರ ದ್ವಿಪಾತ್ರದ ಎರಡು ಚಿತ್ರಗಳು. ಮೂವತ್ತರ ದಶಕದಲ್ಲಿ ಅವರು ನಾಯಕನಟಿಯಾಗಿ ಜನಪ್ರಿಯತೆ ಗಳಿಸಿದರು. ಇರಾದಾ, ಖಾನ್ ಸಾಹೇಬ್‌ (1946) ಅವರ ಕೊನೆಯ ಎರಡು ಸಿನಿಮಾಗಳು. 1947ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಅವರು ಅಲ್ಲಿ ಹತ್ತಾರು ಅನಾಥ ಮಕ್ಕಳನ್ನು ದತ್ತು ಪಡೆದು ಪೋಷಿಸಿದರು ಎನ್ನಲಾಗುತ್ತದೆ. 1993ರ ಏಪ್ರಿಲ್‌ 5ರಂದು ಕರಾಚಿಯಲ್ಲಿ ಪೇಷನ್ಸ್ ಕೂಪರ್ ನಿಧನ ಹೊಂದಿದರು.

ಪೇಷನ್ಸ್ ಕೂಪರ್‌ | ಜನನ: 1905 | ನಿಧನ: 05/04/1993

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಶಶಿಕಪೂರ್

ಹಿಂದಿ ಚಿತ್ರರಂಗ ಮತ್ತು ರಂಗಭೂಮಿ ದಿಗ್ಗಜ ಪೃಥ್ವೀರಾಜ್ ಕಪೂರ್ ಅವರ ಮೂರನೇ ಪುತ್ರ ಶಶಿಕಪೂರ್. ಕಪೂರ್ ಸಹೋದರರ ಪೈಕಿ ಚಿಕ್ಕವರು.

ಡಿ.ಕೆ.ಸಪ್ರು

ಕಾಶ್ಮೀರ ಮೂಲದ ದಯಾ ಕಿಶನ್ ಸಪ್ರು ಹಿಂದಿ ಸಿನಿಮಾ ನಟ. ಆರಂಭದಲ್ಲಿ ನಾಯಕನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದ ಸಪ್ರು ಮುಂದೆ