ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನೃತ್ಯ ನಿರ್ದೇಶಕ ಸಿದ್ದಲಿಂಗಯ್ಯ

ನಿರ್ದೇಶಕ ಸಿದ್ದಲಿಂಗಯ್ಯ ಕಲಾವಿದರಿಗೆ ಸ್ವತಃ ತಾವೇ ನಟನೆ, ನೃತ್ಯ ಹೇಳಿಕೊಡುತ್ತಿದ್ದುದಿದೆ. ಮಧುಗಿರಿ ಸಮೀಪ `ಭೂಲೋಕದಲ್ಲಿ ಯಮರಾಜ’ (1979) ಚಿತ್ರದ ಹಾಡೊಂದನ್ನು ಚಿತ್ರಿಸಲಾಗಿತ್ತು. ಸಿದ್ದಲಿಂಗಯ್ಯನವರು ಚಿತ್ರದ ನಾಯಕಿ ಅಂಜಲಿಗೆ ನೃತ್ಯದ ಸ್ಟೆಪ್ಸ್ ಹೇಳಿಕೊಡುತ್ತಿದ್ದ ಸಂದರ್ಭ ಅಶ್ವತ್ಥ ನಾರಾಯಣ ಅವರ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ. ಸಿದ್ದಲಿಂಗಯ್ಯ, ವರದಪ್ಪ (ಈ ಫೋಟೊದಲ್ಲಿದ್ದಾರೆ), ಚಂದೂಲಾಲ್ ಜೈನ್, ವೀರಾಸ್ವಾಮಿ.. ಈ ನಾಲ್ವರೂ ಸೇರಿ ನಿರ್ಮಿಸಿದ ಚಿತ್ರವಿದು. ಸಿ.ಅಶ್ವಥ್ ಸಂಗೀತ ಸಂಯೋಜನೆ, ವಿ.ಕೆ.ಕಣ್ಣನ್ ಛಾಯಾಗ್ರಹಣ, ಭಕ್ತವತ್ಸಲಂ ಸಂಕಲನ ಚಿತ್ರಕ್ಕಿದೆ.

Share this post