ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಂಸಾರದಲ್ಲಿ ಸರಿಗಮ

ಸರಿಗಮ ವಿಜಿ ರಚನೆ ಮತ್ತು ನಿರ್ದೇಶನದ ‘ಸಂಸಾರದಲ್ಲಿ ಸರಿಗಮ’ ಕನ್ನಡದ ಜನಪ್ರಿಯ ನಾಟಕಗಳಲ್ಲೊಂದು. ತೊಂಬತ್ತರ ದಶಕದ ಆರಂಭದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನಾಟಕದ ನೂರನೇ ಪ್ರದರ್ಶನ ಸಂದರ್ಭದ ಫೋಟೋ ಇದು. ವರನಟ ಡಾ.ರಾಜಕುಮಾರ್‌ ಮುಖ್ಯಅತಿಥಿಯಾಗಿ ಸಮಾರಂಭದಲ್ಲಿದ್ದರು. ಈ ನಾಟಕದ ‘ಅಯ್ಯಂಗಾರ್‌’ ಪಾತ್ರಧಾರಿ ಎನ್‌.ಬಿ.ಜಯಪ್ರಕಾಶ್ ಅವರಿಗೆ ಡಾ.ರಾಜ್‌ ಸ್ಮರಣಿಕೆ ಹಸ್ತಾಂತರಿಸುತ್ತಿದ್ದಾರೆ. ಯಶಸ್ವೀ ಕಲಾವಿದರು ತಂಡದ ‘ಸಂಸಾರದಲ್ಲಿ ಸರಿಗಮ’ ಇಲ್ಲಿಯವರೆಗೆ ಸಾವಿರಕ್ಕೂ ಮೀರಿ ಪ್ರದರ್ಶನ ಕಂಡಿದೆ. ನಟ ಎನ್‌.ಬಿ.ಜಯಪ್ರಕಾಶ್ ಅವರು ‘ಅಯ್ಯಂಗಾರ್‌’ ಪಾತ್ರಧಾರಿಯಾಗಿ ಸುಮಾರು 450ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಇಂದು (ಮೇ 20) ಅವರ ಜನ್ಮದಿನ.

Share this post