ದತ್ತ ಕೇಶವ ನಿರ್ದೇಶನದ ‘ಸಾವಳಿ ಪ್ರೇಮಾಚಿ’ (1980) ಮರಾಠಿ ಚಿತ್ರದಲ್ಲಿ ನಟಿ ಮಧುಮತಿ ಅವರೊಂದಿಗೆ ಸುನೀಲ್ ಗವಾಸ್ಕರ್. ಭಾರತೀಯ ಕ್ರಿಕೆಟ್ ಕಂಡ ಮೇರು ಪ್ರತಿಭೆ ಸುನೀಲ್ ಗವಾಸ್ಕರ್ ಈ ಚಿತ್ರದ ಪ್ರಮುಖ ಪಾತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದರು. ಸಿನಿಮಾ ಯಶಸ್ವಿಯಾಗಲಿಲ್ಲ. ಮುಂದೆ ನಾಸಿರುದ್ದೀನ್ ಷಾ ಅಭಿನಯದ ‘ಮಾಲಾಮಾಲ್’ (1988) ಚಿತ್ರದ ಅತಿಥಿ ಪಾತ್ರವೊಂದರಲ್ಲಿ ಗವಾಸ್ಕರ್ ಕಾಣಿಸಿಕೊಂಡಿದ್ದರು. ಇಂದು ಸುನೀಲ್ ಗವಾಸ್ಕರ್ 72ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ನಟ ಸುನೀಲ್ ಗವಾಸ್ಕರ್
- ಮರಾಠಿ ಸಿನಿಮಾ
Share this post