ಭಾರತೀಯ ಪುರಾಣದ ಅತ್ಯಂತ ಜನಪ್ರಿಯ ಪಾತ್ರಗಳಲ್ಲಿ ‘ನಾರದ’ರ ಪಾತ್ರವೂ ಒಂದು. ಸಂದೇಶ ತಲುಪಿಸುವ, ಜಗಳ ತಂದಿಡುವ, ಜಗಳ ಸರಿಪಡಿಸುವ ವ್ಯಕ್ತಿಯಾಗಿ ಪುರಾಣದ ಕತೆಗಳಲ್ಲಿ ನಾರದರು ಹೆಸರುವಾಸಿ. ಪೌರಾಣಿಕ ಮತ್ತು ಸಾಮಾಜಿಕ ಕನ್ನಡ ಚಿತ್ರಗಳಲ್ಲಿ ಜನಪ್ರಿಯ ನಟರು ನಾರದನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆರ್.ನಾಗೇಂದ್ರರಾವ್ (ಭೂಕೈಲಾಸ), ಬಿ.ಎಸ್.ರಾಜಯ್ಯಂಗಾರ್ (ಹರಿಶ್ಚಂದ್ರ), ಹೊನ್ನಪ್ಪ ಭಾಗವತರ್ (ಕೃಷ್ಣಲೀಲಾ), ಕೆ.ಎಸ್.ಅಶ್ವಥ್ (ಸ್ವರ್ಣ ಗೌರಿ, ಗಂಗೆ ಗೌರಿ, ಸತಿ ಸುಕನ್ಯ), ರಾಜಕುಮಾರ್ (ಮಹಾಸತಿ ಅನಸೂಯ, ಮೂರೂವರೆ ವಜ್ರಗಳು), ಉದಯಕುಮಾರ್ (ಪಾರ್ವತಿ ಕಲ್ಯಾಣ), ಕಲ್ಯಾಣ್ ಕುಮಾರ್ (ಭೂಕೈಲಾಸ), ಬಾಲಕೃಷ್ಣ (ಮೋಹಿನಿ ಭಸ್ಮಾಸುರ), ರಘು ರಾಮಯ್ಯ (ವಾಲ್ಮೀಕಿ), ಶೋಭನ್ ಬಾಬು (ಶಿವರಾತ್ರಿ ಮಹಾತ್ಮೆ), ಶ್ರೀನಾಥ್ (ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ, ಶ್ರೀ ಶ್ರೀನಿವಾಸ ಕಲ್ಯಾಣ), ಅನಂತನಾಗ್ (ಭಕ್ತಪ್ರಹ್ಲಾದ) ಮತ್ತಿತರರು ತೆರೆಯ ಮೇಲೆ ನಾರದರಾಗಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣರು ತಾವು ಸೆರೆಹಿಡಿದ ಮತ್ತು ತಮ್ಮಲ್ಲಿನ ಸಂಗ್ರಹದ ನಾರದ ಪಾತ್ರಧಾರಿಗಳ ಫೋಟೋಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. (ಪೂರಕ ಮಾಹಿತಿ ಕೃಪೆ: ರಾಮಕುಮಾರ್ – ಪದ್ಮಶ್ರೀ)
ಬಿ.ಎಸ್.ರಾಜಯ್ಯಂಗಾರ್ (ಹರಿಶ್ಚಂದ್ರ – 1943) ಹೊನ್ನಪ್ಪ ಭಾಗವತರ್ (ಕೃಷ್ಣಲೀಲಾ – 1947) ಕಲ್ಯಾಣ್ ಕುಮಾರ್ (ಭೂಕೈಲಾಸ – 1958) ಕೆ.ಎಸ್.ಅಶ್ವಥ್ (ರಾಮಾಂಜನೇಯ ಯುದ್ಧ – 1963) ರಾಜಕುಮಾರ್ (ಮಹಾಸತಿ ಅನಸೂಯ – 1965) ಉದಯ ಕುಮಾರ್ (ಪಾರ್ವತಿ ಕಲ್ಯಾಣ – 1967) ಅನಂತ ನಾಗ್ (ನಾರದ ವಿಜಯ – 1980) ಶ್ರೀನಾಥ್ (ಡ್ರೈವರ್ ಹನುಮಂತು – 1980) ಶಿವರಾಂ (ಭಗವಾನ್ ಶ್ರೀ ಸಾಯಿಬಾಬಾ – 1993)