ಸಾಹಸ ನಿರ್ದೇಶಕ ರವಿವರ್ಮ ನಿರ್ಮಾಣ, ರವಿ ಸಾರಂಗ ನಿರ್ದೇಶನದ ‘ರಕ್ಕಸಪುರದೋಳ್’ ಸಿನಿಮಾ ಯಶಸ್ವೀ 25 ದಿನಗಳನ್ನು ಪೂರೈಸಿ ಮುನ್ನುಗ್ಗಿದೆ. ರಾಜ್ ಬಿ ಶೆಟ್ಟಿ, ಅನಿರುದ್ಧ ಭಟ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.
ಇಪ್ಪತ್ತೈದು ದಿನಗಳನ್ನು ಪೂರೈಸಿರುವ ‘ರಕ್ಕಸಪುರದೋಳ್’ ಸಿನಿಮಾ ಹಲವಾರು ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದ್ದು 50ನೇ ದಿನದತ್ತ ದಾಪುಗಾಲಿಟ್ಟಿದೆ. 2026ರ ಮೊದಲ ಹಿಟ್ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾಹಸ ನಿರ್ದೇಶಕ ರವಿವರ್ಮ ಚೊಚ್ಚಲ ನಿರ್ಮಾಣದ ಈ ಸಿನಿಮಾದ ನಿರ್ದೇಶಕರು ರವಿ ಸಾರಂಗ. ಸಾಲು ಸಾಲು ಸಿನಿಮಾಗಳು ಬಿಡುಗಡೆಯಾದ್ರೂ, ‘ರಕ್ಕಸಪುರದೋಳ್’ ಪ್ರದರ್ಶನಕ್ಕೆ ಚ್ಯುತಿಯಾಗಿಲ್ಲ. ವಿಶೇಷವಾಗಿ ಮಲ್ಟಿಪ್ಲೆಕ್ಸ್’ಗಳಲ್ಲಿ ವಾರಾಂತ್ಯದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ರಾಜ್ ಬಿ ಶೆಟ್ಟಿ, ಅನಿರುದ್ಧ್ ಭಟ್, ಅರ್ಚನಾ ಕೊಟ್ಟಿಗೆ, ಸ್ವಾತಿಷ್ಟ ಕೃಷ್ಣ ಮುಖ್ಯ ಭೂಮಿಕೆಯ ಈ ಸಿನಿಮಾದ ಕಥೆ ಪಾತ್ರಗಳು, ಸಂಗೀತ, ಛಾಯಾಗ್ರಹಣ ಎಲ್ಲಾ ವಿಭಾಗಗಳಲ್ಲೂ ಪ್ರೇಕ್ಷಕರ ಮನಸೆಳೆದಿದೆ. ಬಗೆಬಗೆಯ ಸಿನಿಮಾಗಳ ನಡುವೆ ಥ್ರಿಲ್ಲರ್ ‘ರಕ್ಕಸಪುರದೋಳ್’ ಪ್ರೇಕ್ಷಕರಿಗೆ ಥ್ರಿಲ್ ಕೊಡುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ ಈ ಚಿತ್ರಕ್ಕೆ ಹಾಕಿದ ಬಂಡವಾಳದ ಎರಡು ಪಟ್ಟು ಬರೀ ಥಿಯೇಟರ್‌ನಿಂದಲೇ ಬಂದಿದೆಯಂತೆ. ಸದ್ಯದಲ್ಲೇ ಚಿತ್ರತಂಡ ಗೆಲುವಿನ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳುವ ಯೋಜನೆಯಿದೆ. ಅಂದು ‘ರಕ್ಕಸಪುರದೋಳ್’ ಚಿತ್ರದ ಅಸಲಿ ಬಾಕ್ಸ್ ಆಫೀಸ್ ಗಳಿಕೆ ಹೊರಬೀಳಲಿದೆ.







