ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಎಸ್.ಸುಕುಮಾರಿ

ನಟಿ, ನೃತ್ಯಗಾರ್ತಿ
ಪೋಸ್ಟ್ ಶೇರ್ ಮಾಡಿ

ಪದ್ಮಶ್ರೀ ಪುರಸ್ಕೃತ ಸುಕುಮಾರಿ ದಕ್ಷಿಣ ಭಾರತದ ಜನಪ್ರಿಯ ನಟಿ. ತಿರುವನಂತಪುರದಲ್ಲಿ ಜನಿಸಿದ (1940) ಸುಕುಮಾರಿ ‘ಒರು ಇರವು’ (1951) ತಮಿಳು ಚಿತ್ರದೊಂದಿಗೆ ಬೆಳ್ಳಿತೆರೆ ಪ್ರವೇಶಿಸಿದರು. ಆಗ ಅವರಿಗೆ 10 ವರ್ಷ. ಐವತ್ತು ವರ್ಷಗಳ ಸಿನಿಮಾ ಜೀವನದಲ್ಲಿ ತಮಿಳು, ಹಿಂದಿ, ಮಲಯಾಳಂ, ಕನ್ನಡ, ತೆಲುಗು, ಒರಿಯಾ, ಬೆಂಗಾಲಿ ಭಾಷೆಗಳ 2000ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸುಕುಮಾರಿ ಶ್ರೇಷ್ಠ ನೃತ್ಯಗಾರ್ತಿಯಾಗಿಯೂ ಹೆಸರು ಮಾಡಿದ್ದವರು. ದಕ್ಷಿಣ ಭಾರತ ಅರವತ್ತು, ಎಪ್ಪತ್ತರ ಜನಪ್ರಿಯ ನಾಯಕನಟರಾದ ಎಂ.ಜಿ.ರಾಮಚಂದ್ರನ್‌, ಶಿವಾಜಿ ಗಣೇಶನ್‌, ನಾಗೇಶ್ವರ ರಾವ್‌, ಪ್ರೇಮ್‌ ನಜೀರ್‌ ಅವರೊಂದಿಗೆ ಅಭಿನಯಿಸಿದ್ದಾರೆ. ಎಂಬತ್ತರ ನಂತರದ ಖ್ಯಾತ ನಾಯಕನಟರಾದ ಮುಮ್ಮೂಟಿ, ಮೋಹನ್‌ಲಾಲ್‌, ಕಮಲಹಾಸನ್‌, ರಜನೀಕಾಂತ್‌ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ – ನಿರ್ಮಾಪಕ ಭೀಮ್‌ಸಿಂಗ್‌ ಅವರನ್ನು ವರಿಸಿದ್ದ ಸುಕುಮಾರಿ ಅವರಿಗೆ ಪ್ರತಿಷ್ಠಿತ ಗೌರವಗಳು ಸಂದಿವೆ. ಅಗ್ನಿ ಆಕಸ್ಮಿಕದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು (74) ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದರು.

ಸುಕುಮಾರಿ | ಜನನ: 06/10/1940 | ನಿಧನ: 26/03/2013

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಅಪ್ರತಿಮ ನಾಟಕಕಾರ ಬಿ.ಪುಟ್ಟಸ್ವಾಮಯ್ಯ

ಪುಟ್ಟಸ್ವಾಮಿಯ್ಯನವರಿಗೂ ನಾಟಕರಂಗಕ್ಕೂ ನಿಕಟ ಬಾಂಧವ್ಯವಿತ್ತು. ಪತ್ರಿಕೋದ್ಯಮದಿಂದ ಬೇಸತ್ತ ಅವರು ನಾಟಕರಂಗಕ್ಕೆ ತಮ್ಮನ್ನು ತೊಡಗಿಸಿಕೊಂಡರು. ನಾಟಕ ಕ್ಷೇತ್ರದಲ್ಲಿ ಅವರು ಬಳಸಿಕೊಂಡ ವಸ್ತು