ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಭಾರತೀಯ ಸಿನಿಮಾದ ಸಾಹಸಿ ಮಹಿಳೆ ಜದ್ದಾನ್‌ಬಾಯಿ

ನಟಿ, ಗಾಯಕಿ, ಚಿತ್ರನಿರ್ದೇಶಕಿ
ಪೋಸ್ಟ್ ಶೇರ್ ಮಾಡಿ

ಭಾರತೀಯ ಸಿನಿಮಾದ ಆರಂಭದ ದಿನಗಳ ಸಾಧಿಕಿಯರಲ್ಲಿ ಜದ್ದಾನ್‌ಬಾಯಿ ಪ್ರಮುಖರು. ನಟಿ, ಸಂಗೀತ ಸಂಯೋಜಕಿ, ಚಿತ್ರನಿರ್ದೇಶಕಿ, ನಿರ್ಮಾಪಕಿಯಾಗಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಸಾಹಸಿ ಮಹಿಳೆ. ಚಿಕ್ಕಂದಿನಿಂದಲೇ ಶಾಸ್ತ್ರೀಯ ಸಂಗೀತದ ವಿದ್ಯಾರ್ಥಿಯಾಗಿದ್ದ ಅವರು ಸೂಕ್ತ ತರಬೇತಿಯೊಂದಿಗೇ ಚಿತ್ರರಂಗಕ್ಕೆ ಬಂದವರು. ಸಿನಿಮಾಗೆ ಬರುವ ಮುನ್ನ ರೇಡಿಯೋದಲ್ಲಿ ಜನಪ್ರಿಯ ಗಝಲ್ ಗಾಯಕಿಯಾಗಿ ಅವರು ಹೆಸರು ಮಾಡಿದ್ದರು.

‘ರಾಜಾ ಗೋಪಿಚಂದ್‌’ (1933) ಚಿತ್ರದೊಂದಿಗೆ ಅವರ ಬೆಳ್ಳಿತೆರೆ ಪ್ರವೇಶವಾಯ್ತು. ಕರಾಚಿ ಮೂಲದ ನಿರ್ಮಾಪಕರ ‘ಇನ್ಸಾನ್‌ ಯಾ ಶೈತಾನ್‌’ ಅವರ ಮುಂದಿನ ಸಿನಿಮಾ. ‘ತಲಾಶ್ ಎ ಹಕ್‌’ (1935) ಅವರ ಮಹತ್ವದ ಸಿನಿಮಾ. ಈ ಚಿತ್ರದಲ್ಲಿ ನಟಿಯಾಗಿ ಮಾತ್ರವಲ್ಲದೆ ಸಂಗೀತ ಸಂಯೋಜಕಿಯಾಗಿಯೂ ಅವರು ಹೆಸರು ಮಾಡಿದರು. ಆಗಿನ ಕಾಲಕ್ಕೆ ಮಹಿಳೆಯೊಬ್ಬರು ಸಿನಿಮಾಗೆ ಸಂಗೀತ ಸಂಯೋಜಿಸಿದ್ದು ದೊಡ್ಡ ವಿಚಾರವೇ ಆಗಿತ್ತು.

ಪುತ್ರಿ, ನಟಿ ನರ್ಗಿಸ್ ಜೊತೆ ಜದ್ದಾನ್‌ಬಾಯಿ (Photo Courtesy: Cinestaan)

ಮುಂದೆ ತಮ್ಮದೇ ಚಿತ್ರನಿರ್ಮಾಣ ಸಂಸ್ಥೆ ‘ಸಂಗೀತ್ ಫಿಲ್ಮ್ಸ್‌’ ಸ್ಥಾಪಿಸಿದರು. ಆರು ವರ್ಷದ ಪುತ್ರಿ ಫಾತಿಮಾಳ ಹೆಸರನ್ನು ಬೇಬಿ ರಾಣಿ ಎಂದು ಬದಲಿಸಿ ‘ಮೇಡಂ ಫ್ಯಾಷನ್‌’ (1936) ಚಿತ್ರದ ಬಾಲನಟಿಯನ್ನಾಗಿ ಪರಿಚಯಿಸಿದರು. ಈ ಬಾಲನಟಿಯೇ ಮುಂದೆ ಹಿಂದಿ ಚಿತ್ರರಂಗದ ಜನಪ್ರಿಯ ನಾಯಕನಟಿಯಾಗಿ ಹೆಸರು ಮಾಡಿದ ನರ್ಗಿಸ್‌! ಮುಂದೆ ನರ್ಗಿಸ್‌ ಅವರು ಮೆಹಬೂಬ್‌ ಖಾನ್‌ ನಿರ್ದೇಶನದ ‘ತಕ್ದೀರ್‌’ (1943) ಚಿತ್ರದಲ್ಲಿ ಮೋತಿಲಾಲ್‌ ಅವರಿಗೆ ನಾಯಕಿಯಾದರು.

ಮೂಲತಃ ನಟಿ, ಗಾಯಕಿಯಾದ ಜದ್ದಾನ್‌ಬಾಯಿ ಹೃದಯ ಮಂಥನ್‌, ಮೇಡಂ ಫ್ಯಾಷನ್‌, ಜೀವನ್ ಸಪ್ನಾ ಮತ್ತು ಮೋತಿಯೋ ಕಾ ಹಾರ್‌ ಚಿತ್ರಗಳನ್ನು ನಿರ್ದೇಶಿಸಿದರು. ಭಾರತೀಯ ಸಿನಿಮಾ ಇತಿಹಾಸದಲ್ಲಿ ತಮ್ಮದೇ ಛಾಪು ಮೂಡಿಸಿದ ಜದ್ದಾನ್ ಬಾಯಿ ಯಶಸ್ವೀ ಚಿತ್ರೋದ್ಯಮಿಯೂ ಹೌದು. ಪುತ್ರಿ ನರ್ಗಿಸ್‌ರನ್ನು ಜನಪ್ರಿಯ ನಾಯಕನಟಿಯಾಗಿ ರೂಪಿಸುವಲ್ಲಿ ಅವರ ಪಾತ್ರ ದೊಡ್ಡದು. ಚಿತ್ರರಂಗದಿಂದ ಹೆಣ್ಣುಮಕ್ಕಳು ದೂರವೇ ಇರುತ್ತಿದ್ದ ಮಡಿವಂತಿಕೆಯ ಕಾಲವದು. ಜದ್ದಾನ್‌ಬಾಯಿ ಸಿನಿಮಾರಂಗದ ವಿವಿಧ ಕ್ಷೇತ್ರಗಳಲ್ಲ ದಿಟ್ಟತನದ ಸವಾಲುಗಳನ್ನು ಎದುರಿಸಿ ಗೆದ್ದು ಮಾದರಿಯಾದರು.

ಜದ್ದಾನ್‌ಬಾಯಿ | ಜನನ: 1882 | ನಿಧನ: 08/04/1949

ಜದ್ದಾನ್‌ಬಾಯಿ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಮೇರು ತಾರೆ ದಿಲೀಪ್ ಕುಮಾರ್

ಹಿಂದಿ ಚಿತ್ರರಂಗದ ಮೇರು ನಟ ದಿಲೀಪ್ ಕುಮಾರ್ ಹುಟ್ಟಿದ್ದು ಪೇಶಾವರದಲ್ಲಿ (ಈಗಿನ ಪಾಕಿಸ್ತಾನ) 1922, ಡಿಸೆಂಬರ್ 11ರಂದು. ಜನ್ಮನಾಮ ಮೊಹಮ್ಮದ್

ಸಿನಿಮಾ ಮಾಹಿತಿ ಭಂಡಾರ ಆರ್.ಲಕ್ಷ್ಮಣ್

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಶ್ರಮಿಸಿದ ಹಲವರಲ್ಲಿ ಆರ್‌.ಲಕ್ಷ್ಮಣ್ ಹೆಸರೂ ಪ್ರಸ್ತಾಪವಾಗುತ್ತದೆ. ಚಿತ್ರನಿರ್ಮಾಪಕ, ವಿತರಕರಾಗಿ ಅಷ್ಟೇ ಅಲ್ಲ ಕನ್ನಡ ಸಿನಿಮಾಗೆ