ಕನ್ನಡ ಪತ್ರಿಕೋದ್ಯಮ ಕಂಡ ಮಹತ್ವದ ಪತ್ರಕರ್ತ ಎಂ.ಬಿ.ಸಿಂಗ್ (24/05/1925 – 25/10/2016) ಅವರ ಜನ್ಮದಿನವಿಂದು. ದಶಕಗಳ ಕಾಲ ಅವರು ‘ಪ್ರಜಾವಾಣಿ’ ಪತ್ರಿಕೆಯ ಸಂಪಾದಕರಾಗಿದ್ದರು. ಸಿನಿಮಾರಂಗದ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇತ್ತು. ಸಿಂಗ್ ಅವರಿಗೆ ಆತ್ಮೀಯರಾಗಿದ್ದ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರು ನಂದಿಬೆಟ್ಟದಲ್ಲಿ ‘ನಾಂದಿ’ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಸೆರೆಹಿಡಿದ ಫೋಟೋ ಇದು. ನಿರ್ಮಾಪಕ ವಾದಿರಾಜ್, ಮಕ್ಕಳೊಂದಿಗೆ ಎಂ.ಬಿ.ಸಿಂಗ್ ದಂಪತಿ, ನಟಿ ಹರಿಣಿ, ನಿರ್ಮಾಪಕ ಜವಾಹರ್, ನಟರಾದ ಡಾ.ರಾಜಕುಮಾರ್, ಬಾಲಕೃಷ್ಣ ಇತರರಿದ್ದಾರೆ.

ಪತ್ರಕರ್ತ ಎಂ.ಬಿ.ಸಿಂಗ್ ನೆನಪು
- ಕನ್ನಡ ಸಿನಿಮಾ
Share this post