ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಮಿನಿಯೇಚರ್ ಸ್ಪೆಷಲಿಸ್ಟ್ ನಾಗರಾಜರಾವ್

ಕಲಾ ನಿರ್ದೇಶಕ
ಪೋಸ್ಟ್ ಶೇರ್ ಮಾಡಿ

60, 70ರ ದಶಕದಲ್ಲಿ ತಯಾರಾದ ಐತಿಹಾಸಿಕ, ಪೌರಾಣಿಕ, ಫ್ಯಾಂಟಸಿ ಸಿನಿಮಾಗಳನ್ನು ನೋಡಿದವರಿಗೆ ಚಿತ್ರದ ಸನ್ನಿವೇಶಗಳು ಕಣ್ಣಿಗೆ ಕಟ್ಟಿದಂತಿರುತ್ತವೆ. ಗ್ರಾಫಿಕ್ಸ್ ತಂತ್ರಜ್ಞಾನವಿಲ್ಲದ ದಿನಗಳಲ್ಲಿ ಕಲಾ ನಿರ್ದೇಶಕರ ನೈಪುಣ್ಯದಿಂದಲೇ ಇಂತಹ ದೃಶ್ಯಗಳು ಮೆರುಗು ಪಡೆಯುತ್ತಿದ್ದವು. ಅಂದಿನ ಚಿತ್ರಗಳಿಗೆ ವೈಭವ ತಂದುಕೊಟ್ಟ ಪ್ರಮುಖ ಕಲಾ ನಿರ್ದೇಶಕರ ಪೈಕಿ ಬಿ.ನಾಗರಾಜರಾವ್ ದೊಡ್ಡ ಹೆಸರು. ಹಿಂದಿ ಸೇರಿದಂತೆ ದಕ್ಷಿಣ ಭಾರತದ 500ಕ್ಕೂ ಹೆಚ್ಚು ಚಿತ್ರಗಳಿಗೆ ಅವರು ಕಲಾನಿರ್ದೇಶನ ಮಾಡಿದ್ದಾರೆ.

ಅರಮನೆ, ಬಂಗಲೆ, ದೇವಾಲಯ, ಸ್ಮಾರಕಗಳ ಮಿನಿಯೇಚರ್‍ಗಳನ್ನು ನೈಜವಾಗಿ ಕಾಣುವಂತೆ ರೂಪಿಸುತ್ತಿದ್ದ ನಾಗರಾಜರಾವ್ `ಮಿನಿಯೇಚರ್ ಸ್ಪೆಷಲಿಸ್ಟ್’ ಎಂದೇ ಹೆಸರಾಗಿದ್ದರು. ಕನ್ನಡಿಗರೇ ಆದ ಅವರ ಮೊದಲ ಕಲಾ ನಿರ್ದೇಶನದ ಕನ್ನಡ ಸಿನಿಮಾ ಕಸ್ತೂರಿ ವಿಜಯ. ಕವಿರತ್ನ ಕಾಳಿದಾಸ, ಶ್ರೀ ರೇಣುಕಾದೇವಿ ಮಹಾತ್ಮೆ, ಎಡೆಯೂರು ಸಿದ್ದಲಿಂಗೇಶ್ವರ, ಶಬರಿಮಲೆ ಸ್ವಾಮಿ ಅಯ್ಯಪ್ಪ, ಭಕ್ತ ಸಿರಿಯಾಳ… ಅವರು ಕಲಾ ನಿರ್ದೇಶನದ ಕೆಲವು ಪ್ರಮುಖ ಚಿತ್ರಗಳು. `ಕೊಲ್ಲೂರು ಶ್ರೀ ಮೂಕಾಂಬಿಕ’ (1993) ಚಿತ್ರದ ಉತ್ತಮ ಕಲಾ ನಿರ್ದೇಶನಕ್ಕಾಗಿ ಅವರಿಗೆ ರಾಜ್ಯ ಪ್ರಶಸ್ತಿ ಸಂದಿದೆ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ನೆಲದ ಸೊಗಡಿನ ನಿರ್ದೇಶಕ

ಕನ್ನಡ ಚಿತ್ರರಂಗ ಕಂಡ ಪ್ರಮುಖ ಚಿತ್ರಸಾಹಿತಿ ಮತ್ತು ಅಪ್ಪಟ ನೆಲದ ಸೊಗಡಿನ ನಿರ್ದೇಶಕ ಗೀತಪ್ರಿಯ. ನೂರಾರು ಮಧುರ ಗೀತೆಗಳ ಕತೃ.

ಚಿತ್ರಸಾಹಿತಿ ಗೋಪಾಲ ವಾಜಪೇಯಿ

ಕವಿ, ಪತ್ರಕರ್ತ, ನಾಟಕಕಾರ ಗೋಪಾಲ ವಾಜಪೇಯಿ (01/06/1951 – 20/09/2016) ಚಿತ್ರಸಾಹಿತ್ಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಇಂದು (ಸೆಪ್ಟೆಂಬರ್‌ 20)