ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಜೀರ್

ಕಲಾನಿರ್ದೇಶಕ
ಪೋಸ್ಟ್ ಶೇರ್ ಮಾಡಿ

ಶಿರಸಿ ಮೂಲದ ನಜೀರ್ ಕಲಿತದ್ದು ಚಿತ್ರಕಲೆ. ನಂತರ ಮದರಾಸಿನ ಫಿಲ್ಮ್ ಸೆಂಟರ್ ಸ್ಟುಡಿಯೋದಲ್ಲಿ ಕೆಲಸ ಮಾಡಿದರು. ಇವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ನಿರ್ದೇಶಕ ಸಿದ್ದಲಿಂಗಯ್ಯ ಮತ್ತು ನಿರ್ಮಾಪಕ ಆರ್.ಲಕ್ಷ್ಮಣ್‌. ಸಿದ್ದಲಿಂಗಯ್ಯ ನಿರ್ದೇಶನದ `ದೂರದ ಬೆಟ್ಟ’ ಚಿತ್ರದ ಕಲಾನಿರ್ದೇಶಕರಾಗಿ ನಜೀರ್ ಚಿತ್ರರಂಗ ಪ್ರವೇಶಿಸಿದರು. `ಬೂತಯ್ಯನ ಮಗ ಅಯ್ಯು’ ಸಿನಿಮಾದ ಅದ್ಭುತ ಕ್ಲೈಮ್ಯಾಕ್ಸ್ ರೂಪುಗೊಳ್ಳುವಲ್ಲಿ ನಜೀರ್ ಕೈಚಳಕವೂ ಇದೆ. `ಬಂಗಾರದ ಪಂಜರ’, `ಜೀವನ ಚಕ್ರ’, `ಬಂಧನ’, `ರಣಧೀರ’, `ಹೇಮಾವತಿ’, `ಜೀವನ ಚೈತ್ರ’ ಇವರ ಕಲಾ ನಿರ್ದೇಶನದ ಪ್ರಮುಖ ಸಿನಿಮಾಗಳು. `ಸಿಪಾಯಿ’ ಚಿತ್ರದಲ್ಲಿನ ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ನಜೀರ್ ರಾಜ್ಯ ಪ್ರಶಸ್ತಿ (1995-96) ಪಡೆದಿದ್ದರು. ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರಮುಖ ಕಲಾನಿರ್ದೇಶಕ ಇಸ್ಮಾಯಿಲ್ ಅವರೊಂದಿಗೆ ನಜೀರ್ ಈ ಪ್ರಶಸ್ತಿ ಹಂಚಿಕೊಂಡಿದ್ದರು.

ಸಿದ್ದಲಿಂಗಯ್ಯ ನಿರ್ದೇಶನದ `ಬಿಳಿಗಿರಿಯ ಬನದಲ್ಲಿ’ (1980) ಚಿತ್ರಕ್ಕಾಗಿ ಕಲಾ ನಿರ್ದೇಶಕ ನಜೀರ್ ವಿನ್ಯಾಸಗೊಳಿಸಿದ್ದ ಗೆಸ್ಟ್ ಹೌಸ್ ಸೆಟ್ ಇದು. ಜೋಗ್ ಫಾಲ್ಸ್ ಸಮೀಪ ರಸ್ತೆಯ ತಿರುವೊಂದರಲ್ಲಿ ಈ ಸುಂದರ ಸೆಟ್ ಹಾಕಲಾಗಿತ್ತು.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಸ್ವರ ಸಾಮ್ರಾಟ್ ವಿಜಯಭಾಸ್ಕರ್

(ಬರಹ: ಎನ್.ಎಸ್.ಶ್ರೀಧರ ಮೂರ್ತಿ, ಲೇಖಕ) ಕನ್ನಡದ ಸಂಗೀತ ನಿರ್ದೇಶಕರಲ್ಲಿ  ಅತಿ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ ಇಳಯ ರಾಜಾ ಅವರಿಗಿಂತ

ದಾಖಲೆಗಳ ನಿರ್ದೇಶಕ ದಾಸರಿ

ದಾಸರಿ ನಾರಾಯಣರಾವು 150 ಚಿತ್ರಗಳನ್ನು ನಿರ್ದೇಶಿಸಿ, 25 ಚಿತ್ರಗಳನ್ನು ನಿರ್ಮಿಸಿದ್ದಾರೆ. ನಟನಾಗಿ, ರಾಜಕಾರಣಿಯಾಗಿ, ಪರ್ತಕರ್ತನಾಗಿ ತಮ್ಮದೇ ಆದ ಛಾಪು ಮೂಡಿಸಿದ