ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಮಾದೇಶ್ ಆರಾಧ್ಯ ನಿರ್ದೇಶನದಲ್ಲಿ ‘RPF’ – AI ವೆಬ್‌ ಸರಣಿ

ಪೋಸ್ಟ್ ಶೇರ್ ಮಾಡಿ
ಮಾದೇಶ್ ಆರಾಧ್ಯ ನಿರ್ದೇಶನದಲ್ಲಿ 'RPF' - AI ವೆಬ್‌ ಸರಣಿ

ಮಾದೇಶ್‌ ಆರಾಧ್ಯ ನಿರ್ದೇಶನದಲ್ಲಿ AI ವೆಬ್‌ ಸರಣಿ ‘RPF’ ಮೂಡಿಬರಲಿದೆ. ಮಧು ಮಂದಗೆರೆ ಈ ಸರಣಿ ನಿರ್ಮಿಸುತ್ತಿದ್ದು, ಅವರೇ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ.

ಈಗ AI ಜಗತ್ತು. ಈ ತಂತ್ರಜ್ಞಾನದಿಂದ ಸಾಧ್ಯವಾಗದ್ದು ಯಾವುದು ಇಲ್ಲ. ಈಗ ಇದೇ ತಂತ್ರಜ್ಞಾನ ಬಳಸಿಕೊಂಡು ‘RPF’ ವೆಬ್ ಸಿರೀಸ್ ನಿರ್ಮಾಣವಾಗುತ್ತಿದೆ. ತಶ್ವಿಶೈವಿ ಪ್ರೊಡಕ್ಷನ್ ಲಾಂಛನದಲ್ಲಿ ಮಧು ಮಂದಗೆರೆ ನಿರ್ಮಿಸುತ್ತಿರುವ ಈ ವೆಬ್ ಸರಣಿಯನ್ನು ಮಾದೇಶ್ ಆರಾಧ್ಯ ನಿರ್ದೇಶಿಸುತ್ತಿದ್ದು, ಮಧು ಮಂದಗೆರೆ ನಾಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ವೆಬ್ ಸರಣಿಯ ಟೀಸರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ನಡೆಯಿತು.

ನಿರ್ದೇಶಕ ಮಾದೇಶ್‌ ಆರಾಧ್ಯ ಮಾತನಾಡಿ, ‘ಇದು ಮಧು ಮಂದಗೆರೆಯ ಜೀವನದಲ್ಲಿ ನಡೆದಂತ ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಮಾಡುತ್ತಿರುವ ಸರಣಿ. ಇದರ ವಿಶೇಷತೆ ಏನೆಂದರೆ ಈ ವೆಬ್ ಸಿರೀಸ್ ಅನ್ನು AI ತಂತ್ರಜ್ಞಾನವನ್ನು ಬಳಸಿಕೊಂಡು ಮಾಡುತ್ತಿದ್ದೇವೆ. ಕಲಾವಿದರ ಅಭಿನಯ ಮಾತ್ರ ನೈಜವಾಗಿರುತ್ತದೆ. ಉಳಿದಿದ್ದು AI ತಂತ್ರಜ್ಞಾನದ್ದೇ ಆಗಿರುತ್ತದೆ. ಇದನ್ನು ಕೆಲವು ವರ್ಷಗಳ ಹಿಂದೆ ಸಿನಿಮಾ ಮಾಡೋಣ ಅಂದು ಕೊಂಡೆವು ಆಗಲಿಲ್ಲ. ಈಗ ವೆಬ್ ಸಿರೀಸ್ ಮಾಡುತ್ತಿದ್ದೇವೆ. ಮೊದಲ ಹೆಜ್ಜೆಯಾಗಿ ಟೀಸರ್ ಬಿಡುಗಡೆ ಮಾಡಿದ್ದೇವೆ. ಈಗಾಗಲೇ ಐದಾರು ಕಂತುಗಳು ಸಿದ್ದವಾಗಿದೆ. ಯಾವಾಗ ಹಾಗೂ ಯಾವುದರಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಸದ್ಯದಲ್ಲೇ ತಿಳಿಸುತ್ತೇವೆ. ಸಹ ಹಾಗೂ ಸಹಾಯಕ ನಿರ್ದೇಶಕನಾಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನನಗೆ ನಿರ್ದೇಶಕನಾಗಿ ಇದು ಮೊದಲ ಪ್ರಯತ್ನ’ ಎಂದರು ಮಾದೇಶ್ ಆರಾಧ್ಯ.

ಸರಣಿಯ ನಿರ್ಮಾಪಕ ಮತ್ತು ನಾಯಕನಟ ಮಧು ಮಂದಗೆರೆ ಮಾತನಾಡಿ, ”ನಾನು ಮೂವತ್ತು ವರ್ಷಗಳಿಂದ ಚಲನಚಿತ್ರ ಕಲಾವಿದ ಹಾಗೂ ‘RPF’ ನೌಕರನಾಗಿ ಕಾರ್ಯ ನಿರ್ವಹಿಸಿದ್ದೇನೆ. ‘ವಂಶಿ’ ಸೇರಿದಂತೆ ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ರೈಲ್ವೇ ಇಲಾಖೆಯಲ್ಲಿ ನಾನು ಕಂಡಿರುವ ನೈಜ ಘಟನೆಗಳು ಹಾಗೂ ಅಲ್ಲಿ ಅನುಭವಿಸಿರುವ ನೋವನ್ನು ಈ ವೆಬ್ ಸೀರಿಸ್ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ ಈ ವೆಬ್ ಸಿರೀಸ್ ನಿರ್ಮಾಣ‌ ಮಾಡುತ್ತಿದ್ದೇನೆ. ಮಾದೇಶ್ ಆರಾಧ್ಯ ನಿರ್ದೇಶನ ಮಾಡುತ್ತಿದ್ದಾರೆ. ನನ್ನ ಪತ್ನಿ ವಾಣಿ ಸಹಕಾರ ನೀಡುತ್ತಿದ್ದಾರೆ. ಬಹುತೇಕ AI ತಂತ್ರಜ್ಞಾನ ಬಳಸಿಕೊಳ್ಳುತ್ತಿರುವುದು ವಿಶೇಷ. ಟೀಸರ್ ಬಿಡುಗಡೆ ಮಾಡಿದ್ದೇವೆ. ಆದಷ್ಟು ಬೇಗ ಮೊದಲ ಎಪಿಸೋಡ್ ಸಹ ಬಿಡುಗಡೆ ಮಾಡುತ್ತೇವೆ. ರಾಯರ ಕೃಪೆ ಲಾಂಛನದಲ್ಲಿ ಮೂಡಿಬರುತ್ತಿರುವ ನಮ್ಮ ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದರು.

ಈ ಬರಹಗಳನ್ನೂ ಓದಿ