ಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್ ರೇ, ಕವಯಿತ್ರಿ ಅಮೃತಾ ಪ್ರೀತಂ, ಶಾಸ್ತ್ರೀಯ ಗಾಯಕಿ ಎಂ.ಎಸ್.ಸುಬ್ಬಲಕ್ಷ್ಮಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ. ಒಂದು ಅಪರೂಪದ ಫೋಟೊ. ಪಂಜಾಬಿ ಮತ್ತು ಹಿಂದಿ ಭಾಷೆಗಳ ಜನಪ್ರಿಯ ಕವಯಿತ್ರಿ – ಲೇಖಕಿ ಅಮೃತಾ ಪ್ರೀತಂ. ಅವರ ಹತ್ತಾರು ಮಹತ್ವದ ಕೃತಿಗಳು ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿವೆ. ಅವರ ಕೃತಿಗಳನ್ನು ಆಧರಿಸಿ ‘ಕಾದಂಬರಿ’ (1965), ‘ಡಾಕು’ (1976), ‘ಪಿಂಜಾರ್’ (2003) ಸಿನಿಮಾಗಳು ತಯಾರಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಪದ್ಮವಿಭೂಷಣ ಪುರಸ್ಕೃತ ಅಮೃತಾ ಪ್ರೀತಂ (31/08/1919 – 31/10/2005) ಜನ್ಮದಿನವಿಂದು. (Photo Courtesy: Film History Pics)

ಅಮೃತಾ ಪ್ರೀತಂ ನೆನಪು
- ಹಿಂದಿ ಸಿನಿಮಾ
Share this post