ಕನ್ನಡ ಚಿತ್ರರಂಗದ ಮಹೋನ್ನತ ಚಿತ್ರಗಳಲ್ಲೊಂದಾದ ‘ಬಂಗಾರದ ಮನುಷ್ಯ’ (1972) ಸಿನಿಮಾದ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಡಿ.ವಿ.ರಾಜಾರಾಂ ಅವರು ಆಗ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರಿಂದ ರಾಜ್ಯ ಪ್ರಶಸ್ತಿ ಪಡೆಯುತ್ತಿದ್ದಾರೆ. ಅದು ಕನ್ನಡ ಸಿನಿಮಾ ಚಟುವಟಿಕೆಗಳು ಮದರಾಸಿನಿಂದ ಕರ್ನಾಟಕಕ್ಕೆ ಸ್ಥಳಾಂತರಗೊಳ್ಳುತ್ತಿದ್ದ ಅವಧಿ. ಮುಖ್ಯಮಂತ್ರಿ ಅರಸು ಚಿತ್ರೋಧ್ಯಮಕ್ಕೆ ಅಗತ್ಯ ನೆರವು ನೀಡಿ ಸೂಕ್ತ ಬೆಂಬಲವಿತ್ತರು ಎಂದು ಚಿತ್ರರಂಗದ ಹಿರಿಯರು ಸ್ಮರಿಸುತ್ತಾರೆ. ಅರಸು (20/08/1915 – 06/06/1982) ಅವರ ಜನ್ಮದಿನವಿಂದು. (ಫೋಟೊ – ಮಾಹಿತಿ: ಪ್ರಗತಿ ಅಶ್ವತ್ಥ ನಾರಾಯಣ)

ಅರಸು ನೆನಪು
- ಕನ್ನಡ ಸಿನಿಮಾ
Share this post