ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಜನಪ್ರಿಯ ಸಂಗೀತ ಸಂಯೋಜಕ ಶ್ರವಣ್ ರಾಥೋಡ್

ಪೋಸ್ಟ್ ಶೇರ್ ಮಾಡಿ

ನದೀಮ್‌ ಅಖ್ತರ್ ಸೈಫಿ ಮತ್ತು ಶ್ರವಣ್‌ ಕುಮಾರ್ ರಾಥೋಡ್‌ ಇಬ್ಬರೂ ಬಾಲಿವುಡ್‌ನಲ್ಲಿ ‘ನದೀಮ್ – ಶ್ರವಣ್‌’ ಎಂದೇ ಪರಿಚಿತರು. ಇಬ್ಬರೂ 1954ರಲ್ಲಿ ಜನಿಸಿದವರು. ತೊಂಬತ್ತರ ದಶಕದ ಜನಪ್ರಿಯ ಸಂಗೀತ ಸಂಯೋಜಕ ಜೋಡಿಯಿದು. ತಮ್ಮ ಸಂಯೋಜನೆಯಲ್ಲಿ ಹಿಂದೂಸ್ತಾನಿ ಸಂಗೀತವನ್ನು ಅವರು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು. ಸಂಯೋಜನೆಯ ಪ್ರತೀ ಹಾಡುಗಳಲ್ಲೂ ಬಾನ್ಸುರಿ, ಸಿತಾರ್ ಮತ್ತು ಶೆಹನಾಯ್‌ ವಾದ್ಯಗಳ ಬಳಕೆಗೆ ಒತ್ತು ನೀಡುತ್ತಿದ್ದುದು ವಿಶೇಷ. ತೊಂಬತ್ತರದ ದಶಕದ ಮಧ್ಯೆ ಬಾಲಿವುಡ್ ಸಂಗೀತದಲ್ಲಿ ಸಾಕಷ್ಟು ಬದಲಾವಣೆಗಳಾದವು. ಸಾಕಷ್ಟು ಪೈಪೋಟಿಯ ಮಧ್ಯೆ ಈ ಜೋಡಿ ತಮ್ಮದೇ ಆದ ವಿಶಿಷ್ಟ ಸಂಯೋಜನೆಗಳೊಂದಿಗೆ ಪ್ರತ್ಯೇಕವಾಗಿ ಗುರುತಿಸಿಕೊಂಡಿತ್ತು.

ಎಂಬತ್ತರ ದಶಕದ ಒಂದು ಫೋಟೋ. ಸಂಗೀತ ಸಂಯೋಜಕ ನದೀಮ್, ನಟ ಅನಿಲ್ ಕಪೂರ್, ನಟಿ ಮತ್ತು ಗಾಯಕಿ ವಿಜೇತಾ ಪಂಡಿತ್, ಸಂಗೀತ ಸಂಯೋಜಕ ಶ್ರವಣ್ ಫೋಟೋದಲ್ಲಿದ್ದಾರೆ.

‘ಆಶಿಕಿ’ (1990) ಚಿತ್ರದ ಸೂಪರ್‌ಹಿಟ್ ಹಾಡುಗಳೊಂದಿಗೆ ನದೀಮ್ – ಶ್ರವಣ್‌ ಜೋಡಿ ದೊಡ್ಡ ಜನಪ್ರಿಯತೆ ಗಳಿಸಿತು. ಬಾಲಿವುಡ್‌ ಮ್ಯೂಸಿಕ್‌ ಉದ್ಯಮದಲ್ಲೇ ಸಂಚಲನ ಸೃಷ್ಟಿಸಿದ ಚಿತ್ರವಿದು. ಈ ಸಿನಿಮಾದ ಎರಡು ಕೋಟಿ ಆಡಿಯೋ ಕೆಸೆಟ್‌ಗಳು ಬಿಕರಿಯಾಗಿ ದಾಖಲೆ ಸೃಷ್ಟಿಯಾಗಿತ್ತು. ಮುಂದೆ ಈ ಜೋಡಿಯ ಮತ್ತಷ್ಟು ಸೂಪರ್‌ಹಿಟ್‌ ಆಲ್ಬಂಗಳೊಂದಿಗೆ ‘ಟಿ-ಸೀರೀಸ್‌’ ಆಡಿಯೋ ಸಂಸ್ಥೆ ಜನಮನ್ನಣೆ ಪಡೆಯಿತು. ಮುಂದೆ ಇದೇ ‘ಟಿ-ಸೀರೀಸ್‌’ನ ಮಾಲೀಕ ಗುಲ್ಶನ್ ಕುಮಾರ್ ಹತ್ಯೆಯ ಕೇಸಿನಿಂದಾಗಿ ನದೀಮ್‌ – ಶ್ರವಣ್ ಬೇರ್ಪಡುವಂತಾಗಿದ್ದು ವಿಪರ್ಯಾಸ.

ತೊಂಬತ್ತರ ದಶಕದ ನದೀಮ್ – ಶ್ರವಣ್‌ ಜೋಡಿಯ ಮತ್ತಷ್ಟು ಸೂಪರ್‌ಹಿಟ್‌ ಸಿನಿಮಾಗಳಿವು – ಸಾಜನ್‌, ಫೂಲ್ ಔರ್ ಕಾಂಟೆ, ಸಡಕ್, ದೀವಾನಾ, ದಿಲ್ ಕಾ ಕ್ಯಾ ಕಸೂರ್‌, ಹಮ್ ಹೈ ರಹೀ ಪ್ಯಾರ್‌ ಕೆ, ರಂಗ್‌, ದಿಲ್‌ವಾಲೇ, ರಾಜಾ, ಬರ್ಸಾತ್‌, ಅಗ್ನಿಸಾಕ್ಷಿ, ಜೀತ್‌, ರಾಜಾ ಹಿಂದೂಸ್ತಾನಿ, ಪರ್ದೇಸ್‌, ಸಿರ್ಫ್‌ ತುಮ್‌, ಧಡಕ್‌, ಕಸೂರ್‌, ಹಮ್‌ ಹೋ ಗಯೇ ಆಪ್ಕೆ ಮುಂತಾದವು. ಗಾಯಕರಾದ ಕುಮಾರ್ ಸಾನು, ಅಲ್ಕಾ ಯಾಗ್ನಿಕ್ ಮತ್ತು ಉದಿತ್ ನಾರಾಯಣ್‌ ಅವರು ನದೀಮ್‌ – ಶ್ರವಣ್ ಸಂಗೀತ ಸಂಯೋಜನೆಯ ಅತಿ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಮೇರು ಗಾಯಕರಾದ ಮೊಹಮ್ಮದ್ ರಫಿ (ದಂಗಲ್‌), ಕಿಶೋರ್ ಕುಮಾರ್ (ಇಲಾಖಾ), ಲತಾ ಮಂಗೇಶ್ಕರ್‌ ಮತ್ತು ಆಶಾ ಬೋಂಸ್ಲೆ ಕೂಡ ಇವರ ಸಂಯೋಜನೆಗೆ ಹಾಡಿದ್ದಾರೆ. ಎರಡು ತಲೆಮಾರಿನ ಹಲವಾರು ಗಾಯಕ – ಗಾಯಕರು ಇವರ ಸಂಯೋಜನೆಗಳಿಗೆ ಹಾಡಿರುವುದು ವಿಶೇಷ. 2000ನೇ ಇಸವಿಯಲ್ಲಿ ಬೇರ್ಪಟ್ಟಿದ್ದ ಈ ಜೋಡಿ ಡೇವಿಡ್ ಧವನ್ ನಿರ್ದೇಶನದ ‘ಡು ನಾಟ್ ಡಿಸ್ಟರ್ಬ್‌’ (2009) ಚಿತ್ರದ ಸಂಯೋಜನೆಗೆ ಮತ್ತೆ ಒಟ್ಟಾಗಿದ್ದರು. ಒಟ್ಟು ನೂರಿಪ್ಪತ್ತಕ್ಕೂ ಹೆಚ್ಚು ಚಿತ್ರಗಳಿಗೆ ನದೀಮ್‌ – ಶ್ರವಣ್ ಸಂಗೀತ ಸಂಯೋಜಿಸಿದ್ದಾರೆ.

ನದೀಮ್‌ – ಶ್ರವಣ್ ಸಂಯೋಜನೆಯ ಸೂಪರ್‌ಹಿಟ್ ಹಾಡುಗಳಿವು..

ಸೋಚೋಂಗೆ ತುಮ್ಹೆ ಪ್ಯಾರ್‌… ದೀವಾನಾ (1992)

ಮುಝ್‌ಸೆ ಮೊಹಬ್ಬತ್‌… ಹಮ್‌ ಹೈ ರಹೀ ಪ್ಯಾರ್ ಕೆ (1993)

ದಿಲ್‌ ನೇ ಯೆಹ್ ಕಹಾ ಹೈ ದಿಲ್‌ಸೇ… ಧಡ್ಕನ್‌ (2000)

ಮೈ ದುನಿಯಾ ಬುಲಾ ದೂಂಗಾ.. ಆಶಿಕಿ (1990)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಮೇರು ತಾರೆ ದಿಲೀಪ್ ಕುಮಾರ್

ಹಿಂದಿ ಚಿತ್ರರಂಗದ ಮೇರು ನಟ ದಿಲೀಪ್ ಕುಮಾರ್ ಹುಟ್ಟಿದ್ದು ಪೇಶಾವರದಲ್ಲಿ (ಈಗಿನ ಪಾಕಿಸ್ತಾನ) 1922, ಡಿಸೆಂಬರ್ 11ರಂದು. ಜನ್ಮನಾಮ ಮೊಹಮ್ಮದ್

ಸಿನಿಮಾ ಮಾಹಿತಿ ಭಂಡಾರ ಆರ್.ಲಕ್ಷ್ಮಣ್

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಶ್ರಮಿಸಿದ ಹಲವರಲ್ಲಿ ಆರ್‌.ಲಕ್ಷ್ಮಣ್ ಹೆಸರೂ ಪ್ರಸ್ತಾಪವಾಗುತ್ತದೆ. ಚಿತ್ರನಿರ್ಮಾಪಕ, ವಿತರಕರಾಗಿ ಅಷ್ಟೇ ಅಲ್ಲ ಕನ್ನಡ ಸಿನಿಮಾಗೆ