ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕನ್ನಡದ ಮೊದಲ ಚಿತ್ರನಿರ್ಮಾಪಕಿ ಎಂ.ವಿ.ರಾಜಮ್ಮ

ಪೋಸ್ಟ್ ಶೇರ್ ಮಾಡಿ

ದಕ್ಷಿಣ ಭಾರತ ಚಿತ್ರರಂಗದ ಆರಂಭದ ದಿನಗಳ ಪ್ರಮುಖ ನಾಯಕನಟಿ ಎಂ.ವಿ.ರಾಜಮ್ಮ. ಕನ್ನಡದ ಮೊದಲ ಚಿತ್ರನಿರ್ಮಾಪಕಿ (‘ರಾಧಾರಮಣ’ – 1943). ಬೆಂಗಳೂರು ಮೆಜಸ್ಟಿಕ್‌ನ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿಯವರೆಗೆ ಓದಿದ ಅವರು ನಾಟಕಗಳತ್ತ ಆಸಕ್ತರಾಗಿ ರಂಗಭೂಮಿಯೆಡೆ ಹೊರಳಿದರು. ಮೊಹಮ್ಮದ್ ಪೀರ್‌ ಅವರ ‘ಶ್ರೀ ಚಂದ್ರಕಲಾ ನಾಟಕ ಮಂಡಳಿ’ಯಲ್ಲಿ ಬಣ್ಣ ಹಚ್ಚಿದ ಅವರು ಕೆಲವೇ ದಿನಗಳಲ್ಲಿ ಆ ಕಂಪನಿಯ ಜನಪ್ರಿಯ ನಟಿಯಾದರು. ಕಂಪನಿಯ ‘ಸಂಸಾರ ನೌಕ’ದ ಸರಳೆಯಾಗಿ, ‘ಗೌತಮ ಬುದ್ಧ’ ನಾಟಕದ ಯಶೋಧರೆಯಾಗಿ ಅವರು ಜನಮನ್ನಣೆ ಗಳಿಸಿದರು.

‘ಕಿತ್ತೂರು ರಾಣಿ ಚೆನ್ನಮ್ಮ’ ಚಿತ್ರದಲ್ಲಿ

ಎಚ್‌.ಎಲ್‌.ಎನ್‌.ಸಿಂಹ ಅವರ ‘ಸಂಸಾರ ನೌಕ’ (1936) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಅವರಿಗೆ ನಂತರ ತಮಿಳು, ತೆಲುಗು ಚಿತ್ರಗಳಲ್ಲಿ ಅವಕಾಶಗಳು ಹೆಚ್ಚಾದವು. ತಮಿಳು ಚಿತ್ರರಂಗದಲ್ಲಿ ಆಗ ಟಿ.ಆರ್‌.ಮಹಾಲಿಂಗಂ ಮತ್ತು ರಾಜಮ್ಮ ಅತ್ಯಂತ ಯಶಸ್ವೀ ಜೋಡಿ. ‘ರಾಧಾರಮಣ’ ಚಿತ್ರ ನಿರ್ಮಾಣದೊಂದಿಗೆ ರಾಜಮ್ಮನವರು ಕನ್ನಡದ ಮೊದಲ ಚಿತ್ರನಿರ್ಮಾಪಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ನಟ ಬಾಲಕೃಷ್ಣ ಮತ್ತು ನಟ – ನಿರ್ದೇಶಕ ಜಿ.ವಿ.ಅಯ್ಯರ್ ಅವರಿಗೆ ಇದು ಚೊಚ್ಚಲ ಸಿನಿಮಾ.

ತಮಿಳು ಚಿತ್ರವೊಂದರಲ್ಲಿ ಶಿವಾಜಿ ಗಣೇಶನ್ ಅವರೊಂದಿಗೆ

70, 80ರ ದಶಕಗಳಲ್ಲಿ ದಕ್ಷಿಣ ಭಾರತದ ಸಾಕಷ್ಟು ಚಿತ್ರಗಳಲ್ಲಿ ರಾಜಮ್ಮ ಪೋಷಕ ಕಲಾವಿದೆಯಾಗಿ ಅಭಿನಯಿಸಿದರು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ರತ್ನಗಿರಿ ರಹಸ್ಯ, ಸ್ಕೂಲ್‌ ಮಾಸ್ಟರ್‌, ಕಿತ್ತೂರು ಚೆನ್ನಮ್ಮ, ಸತಿಶಕ್ತಿ, ತಾಯಿದೇವರು, ಬಂಗಾರದ ಪಂಜರ, ಸಂಪತ್ತಿಗೆ ಸವಾಲ್‌, ಜಗಮೆಚ್ಚಿದ ಮಗ, ದಾರಿ ತಪ್ಪಿದ ಮಗ, ತ್ರಿಮೂರ್ತಿ, ಬೆಸುಗೆ… ರಾಜಮ್ಮನವರು ನಟಿಸಿದ ಕೆಲವು ಪ್ರಮುಖ ಕನ್ನಡ ಚಿತ್ರಗಳು. 1998ರಲ್ಲಿ ಕರ್ನಾಟಕ ಸರ್ಕಾರ ಅವರಿಗೆ ‘ಡಾ.ರಾಜಕುಮಾರ್‌’ ಪ್ರಶಸ್ತಿ ನೀಡಿ ಗೌರವಿಸಿತು.

(ಎಂ.ವಿ.ರಾಜಮ್ಮ | ಜನನ – 10/03/1921 | ಮರಣ – 23/04/1999)

(ಪೂರಕ ಮಾಹಿತಿ ಕೃಪೆ: ರುಕ್ಕೋಜಿ ಅವರ ‘ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ)

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಚಿತ್ರರಂಗಕ್ಕೆ ಆಸರೆಯಾದ ಅರಸು

ಮೈಸೂರು ಅರಸು ಕುಟುಂಬದವರು ಕೆಂಪರಾಜ ಅರಸ್. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಅವರ ಸಹೋದರ. ಗುಬ್ಬಿ ವೀರಣ್ಣನವರು ನಿರ್ಮಿಸಿದ  `ಜೀವನ

ನಟ, ನಿರ್ಮಾಪಕ ಬಿ.ಎಂ.ವೆಂಕಟೇಶ್

ಬೆಂಗಳೂರು ಸಮೀಪದ ಇಮ್ಮಡಿಹಳ್ಳಿಯ ವೆಂಕಟೇಶ್‌ ಅವರಿಗೆ ಶಾಲೆಯಲ್ಲಿ ಓದುತ್ತಿದ್ದಾಗ ಗಾಯಕನಾಗುವ ಉಮೇದು ಇತ್ತು. ಹಿನ್ನೆಲೆ ಗಾಯಕನಾಗುವ ಆಸೆಯಿದ್ದ ಅವರು ಕ್ರಮೇಣ

ಯಶಸ್ವೀ ಚಿತ್ರನಿರ್ದೇಶಕ ವಿಜಯ್

ತಾರಾವ್ಯವಸ್ಥೆಯ ಪರಿಣಾಮಗಳಿಂದ ತೆರೆಯ ಮರೆಯಲ್ಲಿಯೇ ಉಳಿದ  ವಿಜಯ್ ಅವರು ತಾರೆಗಳ ಹಂಗಿಲ್ಲದೆ ನಿರ್ದೇಶಿಸಿದ ‘ರಂಗಮಹಲ್ ರಹಸ್ಯ’ ಅಪೂರ್ವ ಸಸ್ಪೆನ್ಸ್ ಚಿತ್ರ.