ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಗುಣಸಾಗರಿ – ಗುಬ್ಬಿ ವೀರಣ್ಣ

ಎಚ್‌.ಎಲ್‌.ಎನ್‌.ಸಿಂಹ ನಿರ್ದೇಶನದ ‘ಗುಣಸಾಗರಿ’ (1953) ಚಿತ್ರದಲ್ಲಿ ಗುಬ್ಬಿ ವೀರಣ್ಣ. ಎವಿಎಂ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿ ಎ.ವಿ.ವೇಯಪ್ಪನ್‌, ಗುಬ್ಬಿ ವೀರಣ್ಣ ಮತ್ತು ಸಿ.ಆರ್.ಬಸವರಾಜು ನಿರ್ಮಿಸಿದ ಈ ಚಿತ್ರ ‘ಸತ್ಯ ಶೋಧನೈ’ ಶೀರ್ಷಿಕೆಯಡಿ ಏಕಕಾಲಕ್ಕೆ ತಮಿಳಿನಲ್ಲೂ ತಯಾರಾಗಿತ್ತು. ಕು.ರಾ.ಸೀತಾರಾಮಶಾಸ್ತ್ರಿ ರಚನೆಯ ಗೀತೆಗಳಿಗೆ ಆರ್‌.ಸುದರ್ಶನಂ ಸಂಗೀತ ಸಂಯೋಜಿಸಿದ್ದರು. ಹೊನ್ನಪ್ಪ ಭಾಗವತರ್ ಮತ್ತು ಫಂಡರೀಬಾಯಿ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಮಲಯಾಳಂ ಚಿತ್ರರಂಗದ ಮೇರು ನಟ ಪ್ರೇಮ್‌ ನಜೀರ್‌ ಈ ಚಿತ್ರದ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. (ಫೋಟೊ ಕೃಪೆ: ‘ವಿಜಯಚಿತ್ರ’ ಸಿನಿಪತ್ರಿಕೆ ವಿಶೇಷ ಸಂಚಿಕೆ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು