ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಸಿನಿಮಾಗೆ ಜೀವ ತುಂಬುವ ಪೋಷಕ ಕಲಾವಿದರು

Share this post

(ಬರಹ – ಫೋಟೋಗಳು: ಪ್ರಗತಿ ಅಶ್ವತ್ಥ ನಾರಾಯಣ)

ಚಿತ್ರವೊಂದು ರೂಪುಗೊಳ್ಳಬೇಕಾದರೆ  ಮುಖ್ಯಭೂಮಿಕೆಯ ನಟ – ನಟಿಯರೊಂದಿಗೆ ಪೋಷಕ ಪಾತ್ರಗಳೂ ಅತ್ಯವಶ್ಯ. ಪೋಷಕ ಪಾತ್ರಗಳಲ್ಲಿ ಕೆಲವೊಮ್ಮೆ ಪುಟ್ಟ ಅವಧಿಯಲ್ಲಿ ಬಂದುಹೋಗುವ ಪಾತ್ರಗಳಾದರೆ, ಮತ್ತೆ ಕೆಲವು ಬಾರಿ ಚಿತ್ರದುದ್ದಕ್ಕೂ ಪಾತ್ರಧಾರಿಗಳು ಕಾಣಿಸಿಕೊಳ್ಳುವುದಿದೆ. ನಾಯಕ – ನಾಯಕಿಯ ಸ್ನೇಹಿತರಾಗಿ, ಸಂಬಂಧಿಯಾಗಿ, ಹಿತೈಷಿಗಳಾಗಿ, ಊರಿನ ಯಜಮಾನರಾಗಿ, ಕಚೇರಿಯಲ್ಲಿನ ಸಹ ಸಿಬ್ಬಂದಿ, ಖಳರ ಆಪ್ತರಾಗಿ… ಹಲವು ಬಾರಿ ಚಿತ್ರಕಥೆಗೆ ತಿರುವು ನೀಡುವುದೇ ಪೋಷಕ ಪಾತ್ರಗಳು. ದಶಕಗಳ ಹಿಂದಿನ ಕೌಟುಂಬಿಕ ಚಿತ್ರಗಳಲ್ಲಿ ಹತ್ತಾರು ಪೋಷಕ ಪಾತ್ರಗಳಿರುತ್ತಿದ್ದವು. ಕೂಡುಕುಟುಂಬದ ಕಾನ್ಸೆಪ್ಟ್ ಇಡೀ ಸಿನಿಮಾದಲ್ಲೂ ಸಿಗುತ್ತಿತ್ತು!

ದಶಕಗಳಿಂದೀಚೆಗೆ ನಾಯಕಪ್ರಧಾನ ಕತೆಗಳಿಂದಾಗಿ ಪೋಷಕ ಪಾತ್ರಗಳಿಗೆ ಸಿಗುವ ಪ್ರಾಧಾನ್ಯತೆ ಗೌಣವಾಗಿದೆ. 70 ದಶಕದವರೆಗೂ ಕನ್ನಡ ಚಿತ್ರರಂಗ ಮದರಾಸಿನಲ್ಲೇ ನೆಲೆಯೂರಿತ್ತು. ಆಗಿನ ಕನ್ನಡ ಚಿತ್ರರಂಗದಲ್ಲಿನ ಪೋಷಕ ಕಲಾವಿದರ ಕೊಡುಗೆಯನ್ನು ನೆನೆಯಲೇಬೇಕು. ಕಡಿಮೆ ಸಂಖ್ಯೆಯ ಚಿತ್ರಗಳು ತಯಾರಾಗುತ್ತಿದ್ದ ಅಂದಿನ ದಿನಗಳಲ್ಲಿ ತಮಗೆ ಸಿಗುತ್ತಿದ್ದ ಸಣ್ಣ ಪುಟ್ಟ ಪಾತ್ರಗಳಲ್ಲೇ ತೃಪ್ತಿ ಪಟ್ಟು, ಸಿಗುತ್ತಿದ್ದ ತೀರ ಕಡಿಮೆ ಸಂಭಾವನೆಯಲ್ಲೇ ಜೀವನ ಸಾಗಿಸಿದರು. ನಟನಾ ವೃತ್ತಿಯಲ್ಲಿನ ಅವರಿಗಿದ್ದ ಪ್ರೀತಿ, ನಿಷ್ಠೆ ಎಲ್ಲಾ ಸಂಕಷ್ಟಗಳನ್ನು ಮರೆಸುತ್ತಿತ್ತು. ದೂರದೂರು ಮದರಾಸಿನಲ್ಲಿ ಪರಸ್ಪರ ಸಹಕಾರದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ನಾನು ಸೆರೆಹಿಡಿದ, ನನ್ನ ಸಂಗ್ರಹದಲ್ಲಿನ ಪುರುಷ ಪೋಷಕ ಕಲಾವಿದರ ಫೋಟೋಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ