ಅಲ್ಲು ಅರ್ಜುನ್ ಅವರ ನೂತನ ತೆಲುಗು ಸಿನಿಮಾ ‘ರಾಕಾ’ ಫಸ್ಟ್ಲುಕ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಹುಕೋಟಿ ವೆಚ್ಚದ ಈ ಚಿತ್ರವನ್ನು ಅಟ್ಲೀ ನಿರ್ದೇಶಿಸುತ್ತಿದ್ದಾರೆ.
ಪುಷ್ಪ ಸರಣಿ ಸಿನಿಮಾಗಳ ಬಳಿಕ ನಟ ಅಲ್ಲು ಅರ್ಜುನ್ ಮತ್ತೊಂದು ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಬನ್ನಿ, ತಮಿಳು ನಿರ್ದೇಶಕ ಅಟ್ಲಿ ಜೊತೆ ಕೈ ಜೋಡಿಸಿದ್ದಾರೆ. ಒಂದಷ್ಟು ಸ್ಯಾಂಪಲ್ ಮೂಲಕ ಕುತೂಹಲ ಹೆಚ್ಚಿಸಿದ್ದ ‘ರಾಕಾ’ ಸಿನಿಮಾದ ಫಸ್ಟ್ ಲುಕ್ ಅಲ್ಲು ಅರ್ಜುನ್ ಬರ್ತ್ಡೇಗೆ ರಿವೀಲ್ ಮಾಡಲಾಗಿತ್ತು. ಅರ್ಧ ಮೃಗ, ಅರ್ಧ ಮನುಷ್ಯನ ಅವತಾರದಲ್ಲಿ ಸ್ಟೈಲಿಶ್ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ರಾಕಾ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಲುಕ್ ಗಾಗಿ ಬನ್ನಿ ದಿನಕ್ಕೆ 3 ರಿಂದ 4 ಗಂಟೆ ಶ್ರಮ ಹಾಕಿದ್ದಾರೆ.
‘ರಾಕಾ’ ಪೋಸ್ಟರ್ ನಲ್ಲಿ ಕೈ ಎತ್ತಿ ಅಲ್ಲು ಗೆಸ್ಚರ್ ಒಂದನ್ನು ಮಾಡಿದ್ದು, ಅದನ್ನು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ರೀ ಕ್ರಿಯೇಟ್ ಮಾಡಿದ್ದಾರೆ. ಆರ್ ಸಿಬಿ ವರ್ಸಸ್ ಮುಂಬೈ ಇಂಡಿಯನ್ ಐಪಿಎಲ್ ಮ್ಯಾಚ್ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ರಾಕಾ ಚಿತ್ರದ ಸಿಗ್ನೇಚರ್ ಹ್ಯಾಂಡ್ ಗೆಸ್ಚರ್ ಮಾಡಿದ್ದಾರೆ. ‘ರಾಕಾ’ ಬಹುಕೋಟಿ ವೆಚ್ಚದಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ. ಹಾಲಿವುಡ್ ಗ್ರಾಫಿಕ್ಸ್ ಸ್ಟುಡಿಯೋ ಕೈ ಜೋಡಿಸಿದೆ. ಈ ಚಿತ್ರ ಫ್ಯಾಂಟಸಿ ಕತೆಯನ್ನು ಒಳಗೊಂಡಿದೆ. ಭಾರಿ ಬಜೆಟ್ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.







