ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಡಾ.ವಿಜಯಮ್ಮ – 79

ಕೆ.ಎಸ್‌.ಎಲ್‌.ಸ್ವಾಮಿ ನಿರ್ಮಾಣ – ನಿರ್ದೇಶನದ ‘ಜಂಬೂಸವಾರಿ’ (1993) ಸಿನಿಮಾ ಮುಹೂರ್ತದ ಸಂದರ್ಭ. ಕಂಠೀರವ ಸ್ಟುಡಿಯೋದಲ್ಲಿ ಮಾಸ್ಟರ್ ಜಯಂತ್‌ ನಟನೆಯ ಮೊದಲ ದೃಶ್ಯಕ್ಕೆ ಪತ್ರಕರ್ತೆ – ಲೇಖಕಿ ಡಾ.ವಿಜಯಮ್ಮ ಕ್ಲ್ಯಾಪ್ ಮಾಡಿದ್ದರು. ಡಾ.ವಿಜಯಮ್ಮ ನಿನ್ನೆ ಹೋಳಿ ಹುಣ್ಣಿಮೆಯಂದು 79ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಲೇಖಕಿ, ರಂಗಕರ್ಮಿ, ಪತ್ರಕರ್ತೆ ವಿಜಯಮ್ಮ ಸಾಮಾಜಿಕ ಹೋರಾಟಗಾರ್ತಿಯಾಗಿ ಹತ್ತಾರು ಚಳುವಳಿಗಳಲ್ಲಿ ಪಾಲ್ಗೊಂಡವರು. ಹಲವು ಪತ್ರಿಕೆಗಳಲ್ಲಿ ವಿಶಿಷ್ಟ ಅಂಕಣ – ಬರಹಗಳ ಮೂಲಕ ಸಿನಿಮಾ ಪತ್ರಿಕೋದ್ಯಮದಲ್ಲಿ ಹೊಸತನ ತಂದ ಹೆಗ್ಗಳಿಕೆ ಅವರದು. (ಫೊಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು