ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಾಗಮಂಡಲ

ಸಾಹಿತಿ ಗಿರೀಶ್ ಕಾರ್ನಾಡ್‌ ರಚನೆಯ ನಾಟಕ ಆಧರಿಸಿ ನಾಗಾಭರಣ ನಿರ್ದೇಶಿಸಿದ ‘ನಾಗಮಂಡಲ’ (1997) ಚಿತ್ರದಲ್ಲಿ ಬಿ.ಜಯಶ್ರೀ ಮತ್ತು ಮಂಡ್ಯ ರಮೇಶ್‌. 1989ರಲ್ಲಿ ಕಾರ್ನಾಡರ ನಾಟಕವನ್ನು ನಟ – ನಿರ್ದೇಶಕ ಶಂಕರ್‌ನಾಗ್ ರಂಗಕ್ಕೆ ಅಳವಡಿಸಿದ್ದರು. ನಾಟಕದಲ್ಲಿ ‘ಕುರುಡಮ್ಮ’ ಪಾತ್ರ ನಿರ್ವಹಿಸಿದ್ದ ಬಿ.ಜಯಶ್ರೀ ಸಿನಿಮಾದಲ್ಲೂ ಅದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ. ಸಿನಿಮಾದ ಉತ್ತಮ ನಟನೆಗೆ ಅವರಿಗೆ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ ಸಂದಿದೆ. ಮಂಡ್ಯ ರಮೇಶ್‌ (ಪೋಷಕ ನಟ), ನಿರ್ಮಾಪಕ ಹರಿಖೋಡೆ (ಅತ್ಯುತ್ತಮ ಎರಡನೇ ಸಿನಿಮಾ), ಶಶಿಧರ ಅಡಪ (ಅತ್ಯುತ್ತಮ ಕಲಾ ನಿರ್ದೇಶನ) ಮತ್ತು ಜಿ.ಎಸ್‌.ಭಾಸ್ಕರ್ (ಅತ್ಯುತ್ತಮ ಛಾಯಾಗ್ರಹಣ) ಕೂಡ ರಾಜ್ಯ ಪ್ರಶಸ್ತಿಗೆ ಭಾಜನರಾದರು. (ಫೋಟೊ ಕೃಪೆ: ನಟ ಮಂಡ್ಯ ರಮೇಶ್‌)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು