ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಾಹಸಿ ನಿರ್ಮಾಪಕ – ನಟ ಎಂ.ಪಿ.ಶಂಕರ್

ಪೋಸ್ಟ್ ಶೇರ್ ಮಾಡಿ

ಮೈಸೂರಿನ ಜಯಲಕ್ಷ್ಮೀಪುರಂನಲ್ಲಿ ಆಗ ಎಂ.ಪಿ.ಶಂಕರ್ ಭವ್ಯ ಬಂಗಲೆಯಿತ್ತು. `ಬೂತಯ್ಯನ ಮಗ ಅಯ್ಯು’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಜನರು ಅವರ ಮನೆಯ ಸಮೀಪವಿದ್ದ ಸರ್ಕಲ್ ಅನ್ನು `ಬೂತಯ್ಯ ಸರ್ಕಲ್’ ಎಂದೇ ಕರೆದರು! ಅಷ್ಟರಮಟ್ಟಿಗೆ ಎಂ.ಪಿ.ಶಂಕರ್ ನಿರ್ವಹಿಸಿದ ಆ ಪಾತ್ರ ಪ್ರಭಾವಶಾಲಿಯಾಗಿತ್ತು. ಮೈಸೂರು ರೈಲ್ವೆ ವರ್ಕ್‍ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಶಂಕರ್‌ ಕುಸ್ತಿಯಲ್ಲೂ ತಾಲೀಮು ನಡೆಸುತ್ತಿದ್ದರು. ಜೊತೆಗೆ ರಂಗಭೂಮಿ, ಸಾಹಿತ್ಯದ ನಂಟು ಬೆಳೆಸಿಕೊಂಡರು. ನಾಟಕದೆಡೆಗಿನ ಆಸಕ್ತಿಯಿಂದಾಗಿ ‘ಭರಣಿ ಕಲಾವಿದರು’ ರಂಗತಂಡ ಕಟ್ಟಿದರು. ಈ ತಂಡದಲ್ಲಿ ಎಂ.ಪಿ.ಶಂಕರ್ ನಿರ್ವಹಿಸಿದ ಪಾತ್ರ ನೋಡಿ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಪ್ರಭಾವಿತರಾದರು. ಅವರು ತಮ್ಮ ‘ರತ್ನಮಂಜರಿ’ (1962) ಚಿತ್ರದಲ್ಲಿ ಎಂ.ಪಿ.ಶಂಕರ್‌ರಿಗೆ ಒಂದು ಪಾತ್ರ ನೀಡಿದರು.

ಮೈಸೂರಿನ ಎಂ.ಪಿ.ಶಂಕರ್ ಮನೆಯಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರು ಸೆರೆಹಿಡಿದ ಫೋಟೊ.

ಮುಂದೆ ಸತ್ಯಹರಿಶ್ಚಂದ್ರ, ಬೂತಯ್ಯನ ಮಗ ಅಯ್ಯು, ಬಂಗಾರದ ಮನುಷ್ಯ, ಗಂಧದ ಗುಡಿ, ನಾಗರಹಾವು, ಭೂಲೋಕದಲ್ಲಿ ಯಮರಾಜ, ದೂರದ ಬೆಟ್ಟ, ವೀರಸಂಕಲ್ಪ… ಹೀಗೆ ಉತ್ತಮ ಪಾತ್ರಗಳೊಂದಿಗೆ ಎಂ.ಪಿ.ಶಂಕರ್ ತಮ್ಮದೇ ಆದ ಛಾಪು ಮೂಡಿಸಿದರು. ಕಾಡು ಮತ್ತು ವನ್ಯಜೀವಿಗಳ ಬಗ್ಗೆ ವಿಶೇಷ ಆಸ್ಥೆಯಿದ್ದ ಅವರು ತಮ್ಮ `ಭರಣಿ ಚಿತ್ರ’ ಸಂಸ್ಥೆಯಡಿ ಕೆಲವು ಕಾಡಿನ ಸಿನಿಮಾಗಳನ್ನು ತೆರೆಗೆ ತಂದರು. ‘ಕಾಡಿನ ರಹಸ್ಯ’, ‘ಗಂಧದ ಗುಡಿ’, ‘ಮೃಗಾಲಯ’ ಸೇರಿದಂತೆ ಎಂ.ಪಿ.ಶಂಕರ್ ಹದಿನಾರು ಚಿತ್ರಗಳನ್ನು ನಿರ್ಮಿಸಿದ್ದು, ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಕಳ್ಳರ ಕಳ್ಳ’ ಅವರು ನಿರ್ಮಿಸಿ, ನಿರ್ದೇಶಿಸಿದ ಏಕೈಕ ಚಿತ್ರ. 2005ರಲ್ಲಿ ಅವರಿಗೆ ಪ್ರತಿಷ್ಠಿತ ಡಾ.ರಾಜಕುಮಾರ್ ಪ್ರಶಸ್ತಿ ಸಂದಿದೆ.

ಎಂ.ಪಿ.ಶಂಕರ್‌ | ಜನನ: 20/08/1935 | ನಿಧನ: 17/07/2008

ಚಿತ್ರವೊಂದರಲ್ಲಿ ರಾಜಕುಮಾರ್ ಅವರೊಂದಿಗೆ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಕನ್ನಡಕ್ಕೊಬ್ಬರೇ ಬಾಲಣ್ಣ

ಬಾಲಣ್ಣ ತೀರಿಹೋಗಿ 26 ವರ್ಷ ಆಗಿದ್ದರೂ ಅವರಿಗೆ ಅವರ ಪಾತ್ರಗಳಿಗೆ ಸರಿಸಾಟಿ ಯಾರಿದ್ದಾರೆ? ಬಾಲಣ್ಣನವರಿಗೆ ಸರಿಸಾಟಿಯಾಗಿ ನಿಲ್ಲುವವರು ಬಾಲಣ್ಣನವರು ಮಾತ್ರ.

ಸ್ವಂತಿಕೆಯ ಹರಿಕಾರ ಶಂಕರ್ ಸಿಂಗ್

(ಬರಹ: ಎನ್‌.ಎಸ್‌.ಶ್ರೀಧರಮೂರ್ತಿ, ಲೇಖಕ) ಚಿತ್ರನಿರ್ಮಾಪಕ, ನಿರ್ದೇಶಕ ಶಂಕರ್‌ ಸಿಂಗ್‌ ಅವರ ಜನ್ಮಶತಮಾನೋತ್ಸವ ಸಂದರ್ಭವಿದು (ಜನನ 15, ಆಗಸ್ಟ್ 1921). ಕನ್ನಡ