ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಉತ್ಪಲ್ ದತ್

ರಂಗಭೂಮಿ – ಸಿನಿಮಾ ನಟ, ನಿರ್ದೇಶಕ
ಪೋಸ್ಟ್ ಶೇರ್ ಮಾಡಿ

ಆಧುನಿಕ ಭಾರತೀಯ ರಂಗಭೂಮಿಯ ಪ್ರಮುಖ ನಟ, ನಿರ್ದೇಶಕರೊಲ್ಲಬ್ಬರು ಎಂದೇ ಉತ್ಪಲ್‌ ದತ್ (29/03/1929 – 19/08/1993) ಅವರನ್ನು ಗುರುತಿಸಲಾಗುತ್ತದೆ. ಆರಂಭದಲ್ಲಿ ಬೆಂಗಾಲಿ ಮತ್ತು ಇಂಗ್ಲಿಷ್‌ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಉತ್ಪಲ್ ದತ್‌ ಆಧುನಿಕ ಭಾರತೀಯ ರಂಗಭೂಮಿಯ ಪ್ರಮುಖ ನಟ, ನಿರ್ದೇಶಕ. ಮಾರ್ಕ್ಸ್‌ ತತ್ವಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿದ್ದ ಅವರ ನಾಟಕಗಳು ಜನಪರ ನಿಲುವು ಹೊಂದಿದ್ದವು. ‘ಲಿಟ್ಲ್ ಥಿಯೇಟರ್‌ ಗ್ರೂಪ್‌’ ಆರಂಭಿಸಿ ಶೆಕ್ಸ್‌ಪಿಯರ್‌, ಬ್ರೆಚ್ಟ್‌ ನಾಟಕಗಳನ್ನು ತೆರೆಗೆ ಅಳವಡಿಸಿದ್ದರು. ರಂಗಭೂಮಿ ಜೊತೆಜೊತೆಗೆ ಸಿನಿಮಾಗಳಲ್ಲೂ ನಟಿಸಿದ ಅವರು ಅಪರೂಪದ ಪಾತ್ರಗಳಲ್ಲಿ ಪ್ರೇಕ್ಷಕರ ಮನಸ್ಸಿನಲ್ಲುಳಿದಿದ್ದಾರೆ.

ನಲವತ್ತು ವರ್ಷಗಳ ನಟನಾ ಬದುಕಿನಲ್ಲಿ ಉತ್ಪಲ್ ದತ್‌ ಬೆಂಗಾಲಿ ಮತ್ತು ಹಿಂದಿಯ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಭುವನ್ ಶೋಮ್‌’ (1970) ಬೆಂಗಾಲಿ ಸಿನಿಮಾದ ಉತ್ತಮ ನಟನೆಗೆ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ‘ಗೋಲ್‌ಮಾಲ್‌’ (1980), ‘ನರಮ್ ಗರಮ್‌’ (1982), ‘ರಂಗ್‌ ಬಿರಂಗ್‌’ (1987) ಚಿತ್ರಗಳ ಅತ್ಯುತ್ತಮ ಅಭಿನಯಕ್ಕಾಗಿ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದ್ದಾರೆ. ನಟ, ನಿರ್ದೇಶಕನಾಗಿ ಮಾತ್ರವಲ್ಲದೆ ಚಳವಳಿಯಲ್ಲಿ ಪಾಲ್ಗೊಂಡು ಅವರು ಜೈಲು ವಾಸವನ್ನೂ ಅನುಭವಿಸಿದ್ದರು.

ಉತ್ಪಲ್‌ ದತ್ | ಜನನ: 29/03/1929 | ನಿಧನ: 19/08/1993)

‘ಪಸಂದ್ ಅಪ್ನಿ ಅಪ್ನಿ’ ಹಿಂದಿ ಚಿತ್ರದ ದೃಶ್ಯ
‘ಮಿಸ್ಟರ್ ರೋಮಿಯೋ’ ಹಿಂದಿ ಚಿತ್ರದ ದೃಶ್ಯ

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಶಶಿಕಪೂರ್

ಹಿಂದಿ ಚಿತ್ರರಂಗ ಮತ್ತು ರಂಗಭೂಮಿ ದಿಗ್ಗಜ ಪೃಥ್ವೀರಾಜ್ ಕಪೂರ್ ಅವರ ಮೂರನೇ ಪುತ್ರ ಶಶಿಕಪೂರ್. ಕಪೂರ್ ಸಹೋದರರ ಪೈಕಿ ಚಿಕ್ಕವರು.

ಡಿ.ಕೆ.ಸಪ್ರು

ಕಾಶ್ಮೀರ ಮೂಲದ ದಯಾ ಕಿಶನ್ ಸಪ್ರು ಹಿಂದಿ ಸಿನಿಮಾ ನಟ. ಆರಂಭದಲ್ಲಿ ನಾಯಕನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದ ಸಪ್ರು ಮುಂದೆ