ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಪ್ರೀಮಿಯರ್ ಸ್ಟುಡಿಯೋ ಬಸವರಾಜಯ್ಯ

Share this post
ಪ್ರಗತಿ ಅಶ್ವತ್ಥ ನಾರಾಯಣ
ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ

ಪ್ರೀಮಿಯರ್‌ ಸ್ಟುಡಿಯೋ ಆವರಣದಲ್ಲಿ ಒಂದು ದೊಡ್ಡ ಆಲದಮರವಿತ್ತು. ವಿಶಾಲ ಆಲದ ನೆರಳಿನಲ್ಲಿ ಸಿಮೆಂಟ್ ಬೆಂಚ್‌ಗಳಿದ್ದವು. ಶೂಟಿಂಗ್ ಬಿಡುವಿನ ವೇಳೆ ಕಲಾವಿದರು, ತಂತ್ರಜ್ಞರು ಅಲ್ಲಿ ಸೇರಿ ಹರಟೆ ಹೊಡೆಯೋದು, ಇಸ್ಪೀಟು ಆಡೋದು, ನಗೆ ಚಟಾಕಿ..

ಕನ್ನಡ ಚಲನಚಿತ್ರಗಳ ಬೆಳವಣಿಗೆಯಲ್ಲಿ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಹಾಗೂ ಸ್ಟುಡಿಯೋ ಮಾಲೀಕ ಬಸವರಾಜಯ್ಯನವರ ಕಾಣ್ಕೆಯನ್ನು ಮರೆಯಲು ಸಾದ್ಯವಿಲ್ಲ. 1970ರಿಂದ 1990ರ ನಡುವೆ ಈ ಸ್ಟುಡಿಯೋ ದಕ್ಷಿಣ ಭಾರತದಲ್ಲೇ ಉಚ್ಛ್ರಾಯ ಸ್ಥತಿಯಲ್ಲಿತ್ತು. 7 ಪ್ಲೋರ್‌ಗಳನ್ನು ಹೊಂದಿದ್ದ ಸ್ಟುಡಿಯೋದಲ್ಲಿ ಪ್ರತಿದಿನ ಮೂರ್ನಾಲ್ಕು ಚಿತ್ರಗಳ ಶೂಟಿಂಗ್ ಜಾರಿಯಲ್ಲಿರುತ್ತಿತ್ತು.

ಚಿತ್ರೀಕರಣ ನಡೆಸಲು ಒಂದು ರೀತಿಯ ಪ್ರಶಾಂತ ವಾತಾವರಣವಿತ್ತು. ಸ್ಟುಡಿಯೋ ಆವರಣದಲ್ಲಿ ಒಂದು ದೊಡ್ಡ ಆಲದಮರವಿತ್ತು. ವಿಶಾಲ ಆಲದ ನೆರಳಿನಲ್ಲಿ ಸಿಮೆಂಟ್ ಬೆಂಚ್‌ಗಳಿದ್ದವು. ಶೂಟಿಂಗ್ ಬಿಡುವಿನ ವೇಳೆ ಕಲಾವಿದರು, ತಂತ್ರಜ್ಞರು ಅಲ್ಲಿ ಸೇರಿ ಹರಟೆ ಹೊಡೆಯೋದು, ಇಸ್ಪೀಟು ಆಡೋದು, ನಗೆ ಚಟಾಕಿ.. ಆ ಅನುಭವ ಪಡೆದವರಿಗೆ ಅವನ್ನೆಲ್ಲಾ ಮರೆಯಲು ಸಾದ್ಯವಿಲ್ಲ. ಒಟ್ಟಿನಲ್ಲಿ ಸ್ನೇಹಮಯ ವಾತವರಣ.

ಸ್ಟುಡಿಯೋ ಮಾಲೀಕ ಬಸವರಾಜಯ್ಯನವರಂತೂ ನಿರ್ಮಾಪಕರಿಗೆ ಸಕಲ ರೀತಿಯಲ್ಲೂ ಸಹಕಾರ ನೀಡುತ್ತಿದ್ದರು. ಹಲವು ಬಾರಿ ಮಧ್ಯಾಹ್ನದ ಊಟ ತರಿಸಲು ಸಹನಿರ್ಮಾಪಕರು ಬಸವರಾಜಯ್ಯನವರ ಬಳಿ ಹೋಗಿ ಹಣ ಕೇಳುತ್ತಿದ್ದುದೂ ಇದೆ. ಆ ಹಣವಾದರೂ ಎಷ್ಟು?  150 ರೂಪಾಯಿ. ಅಷ್ಟರಲ್ಲಿ ಪೂರಾ ಒಂದು ಚಿತ್ರತಂಡಕ್ಕೆ ಸಾಕಾಗುವಷ್ಟು ಊಟದ ವ್ಯವಸ್ಥೆ ಮಾಡಬಹುದಾಗಿತ್ತು. ಸರಿಯಾಗಿ ವ್ಯವಸ್ಥೆ ಮಾಡಿಕೊಳ್ಳದೆ ಚಿತ್ರನಿರ್ಮಾಣ ಮಾಡಲು ಬರುತ್ತಿದ್ದ ನಿರ್ಮಾಪಕರಿಗೆ ಬಸವರಾಜಯ್ಯನವರು ಬುದ್ಧಿವಾದ ಹೇಳಿ ಹಣ ಕೊಟ್ಟು ಕಳಿಸುತ್ತಿದ್ದರು.

ಸ್ಟುಡಿಯೋ ಆವರಣದಲ್ಲೇ ಅವರ ಮನೆ ಇತ್ತು. ಚಿತ್ರೀಕರಣ ಸಂದರ್ಭದಲ್ಲಿ ಬೇಕಾಗುತ್ತಿದ್ದ ಬೆಳ್ಳಿ, ಚಿನ್ನ ಹಾಗೂ ಇನ್ನಿತರೆ ಪರಿಕರಗಳನ್ನು ಕೇಳಿ ಪಡೆದುಕೊಂಡು ಉಪಯೋಗಿಸಿದ ನಂತರ ಸಿನಿಮಾದವರು ವಾಪಸು ಕೊಡುತ್ತಿದ್ದರು. ಉದ್ಯಮಕ್ಕೆ ಹೊಸದಾಗಿ ಬಂದ ನಿರ್ಮಾಪಕರು ಯಾರಾದರೂ ಬಂದು ಸ್ಟುಡಿಯೋ ಬಾಡಿಗೆಗೆ ಕೇಳಿದರೆ, ಮುಂದೆ ಬರಬಹುದಾದ ಕಷ್ಟ ನಷ್ಟಗಳ ಬಗ್ಗೆ ಬಸವರಾಜಯ್ಯನವರು ಅವರಿಗೆ ತಿಳಿ ಹೇಳುತ್ತಿದ್ದರು. ಚಿತ್ರನಿರ್ಮಾಣದಲ್ಲಿ ಎದುರಾಗುವ ಕಷ್ಟನಷ್ಟಗಳನ್ನು ತಡೆದುಕೊಳ್ಳುವ ಶಕ್ತಿ ಇದೆಯೇ? ಸ್ವಇಚ್ಛೆಯಿಂದ ನಿರ್ಮಾಪಕರಾಗಿ ಬಂದಿರುವರೋ ಇಲ್ಲವೇ ಯಾರದ್ದೋ ಮಾತು ಕೇಳಿಕೊಂಡು ಹಣ ಹಾಕುತ್ತಿದ್ದಾರೋ ಎಂದೆಲ್ಲಾ ಕಾಳಜಿಯಿಂದ ವಿಚಾರಿಸುತ್ತಿದ್ದರು. ಸ್ಟುಡಿಯೋ ತಂತ್ರಜ್ಞರಂತೂ ತಮ್ಮದೇ ಚಿತ್ರವೆಂಬಂತೆ ದುಡಿಯುತ್ತಿದ್ದರು. ಆಗ ಅವರಿಗೆ ದೊರೆಯುತ್ತಿದ್ದ ಹಣ ತೀರಾ ಕಡಿಮೆ. ಅವರೆಲ್ಲಾ ಸಿನಿಮಾ ವ್ಯಾಮೋಹದಿಂದ ಕೆಲಸ ಮಾಡುತ್ತಿದ್ದರು. ಬಸವರಾಜಯ್ಯ ಮತ್ತು ಅವರ ಸ್ಟುಡಿಯೋ ತಂತ್ರಜ್ಞರ ಶ್ರದ್ಧೆಯ ಕೆಲಸ, ಕಾರ್ಯತತ್ಪರತೆ, ಕಾಳಜಿಯಿಂದಾಗಿ ಸಿನಿಮಾಗಳು ಯಾವುದೇ ಅಡಚಣೆಗಳಿಲ್ಲದೆ ಚಿತ್ರಣಗೊಳ್ಳುತ್ತಿದ್ದವು.

ಆಗ ಮುಖ್ಯಮಂತ್ರಿಯಾಗಿದ್ದ ದೇವರಾಜು ಅರಸು ಅವರಿಂದ ಬಸವರಾಜಯ್ಯನವರಿಗೆ ಗೌರವ

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ