ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟಿ ಮಂಜುಳಾಗೆ ‘ಬಂಗಾರದ ಪಂಜರ’ ಚಿತ್ರದ ಅವಕಾಶ ತಪ್ಪಿದ್ದೇಕೆ?

Share this post
ಕನ್ನಡ ಚಿತ್ರರಂಗ ಕಂಡ ಟಾಂಬಾಯ್ ಹೀರೋಯಿನ್ ಮಂಜುಳಾ. ರಾಜಕುಮಾರ್ ಜೊತೆಗಿನ ‘ಸಂಪತ್ತಿಗೆ ಸವಾಲ್‌’ ಸಿನಿಮಾ ಅವರ ವೃತ್ತಿ ಬದುಕಿಗೆ ಮಹತ್ವದ ತಿರುವಾಯ್ತು. ಹಾಗೆ ನೋಡಿದರೆ ಇದಕ್ಕೂ ಮುನ್ನ ತೆರೆಕಂಡ ‘ಬಂಗಾರದ ಪಂಜರ’ ಚಿತ್ರದಲ್ಲೇ ಮಂಜುಳಾ ಅವರು ರಾಜ್‌ಗೆ ನಾಯಕಿಯಾಗಿ ನಟಿಸುವ ಅವಕಾಶವಿತ್ತು. ಚಿತ್ರಕ್ಕೆ ಫೈನಾನ್ಸ್ ಮಾಡುವವರು, ನಿರ್ಮಾಪಕರ ಕೆಲವು ನಂಬಿಕೆಗಳಿಂದಾಗಿ ಅವರಿಗೆ ಆರಂಭದ ಹಂತದಲ್ಲೇ ಅವಕಾಶ ಕೈತಪ್ಪಿತು. ಇಲ್ಲದಿದ್ದರೆ ‘ಎರಡು ಕನಸು’, ‘ಸಂಪತ್ತಿಗೆ ಸವಾಲ್‌’ ಚಿತ್ರಕ್ಕೂ ಮುನ್ನವೇ ಅವರು ‘ಬಂಗಾರದ ಪಂಜರ’ ಚಿತ್ರದಲ್ಲಿ ರಾಜ್‌ ಅವರಿಗೆ ಪ್ರಮುಖ ನಾಯಕಿಯಾಗುತ್ತಿದ್ದರು.