ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಬಣ್ಣದ ಸಿನಿಮಾ ಮಾಡಬೇಕೆನ್ನುವ ನಿರ್ದೇಶಕ ಎಂ.ಆರ್.ವಿಠಲ್ ಆಸೆ ಕೈಗೂಡಲಿಲ್ಲ…

Share this post

(ಬರಹ – ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಕನ್ನಡ ಚಿತ್ರರಂಗ ಕಂಡ ಸದಭಿರುಚಿಯ ಚಿತ್ರಗಳ ನಿರ್ದೇಶಕರು ಎಂ.ಆರ್.ವಿಠಲ್. ಸುಮಾರು 17 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಅವರು ನಿರ್ದೇಶನ ಮಾಡಿದ ಚಿತ್ರಗಳು 3 ರಾಷ್ಟ್ರ ಹಾಗೂ 3 ರಾಜ್ಯ ಪ್ರಶಸ್ತಿ ಪಡೆದಿವೆ. ನಂದಾದೀಪ, ಮಿಸ್ ಲೀಲಾವತಿ, ಹಣ್ಣೆಲೆ ಚಿಗುರಿದಾಗ, ಎರಡು ಮುಖ, ಪ್ರೇಮಮಯಿ, ನಕ್ಕರೆ ಅದೇ ಸ್ವರ್ಗ, ಪ್ರೊಫೆಸರ್ ಹುಚ್ಚುರಾಯ… ಅವರ ನಿರ್ದೇಶನದ ಪ್ರಮುಖ ಚಿತ್ರಗಳು. ವಿದೇಶ ಪ್ರವಾಸ ಮಾಡಿ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಳವಾದ ಅದ್ಯಯನ ಮಾಡಿದ್ದರು. ತೀರಾ ಸರಳ, ಸುಸಂಸ್ಕೃತ ವ್ಯಕ್ತಿ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪುರಸ್ಕೃತರು. ಕನ್ನಡದ ಮತ್ತೊಬ್ಬ ಖ್ಯಾತ ಚಿತ್ರನಿರ್ದೇಶಕ ಕೆ.ವಿ ಜಯರಾಂ ಇವರ ಶಿಷ್ಯರು. ವಿಠಲ್‌ ನಿರ್ದೇಶನ ಮಾಡಿದ ಅಷ್ಟೂ ಸಿನಿಮಾಗಳು ಕಪ್ಪು ಬಿಳುಪು. ಒಂದು ಕಲರ್ ಚಿತ್ರ ನಿರ್ದೇಶನ ಮಾಡಬೇಕೆನ್ನುವ ಅವರ ಆಸೆ ಕೈಗೂಡಲಿಲ್ಲ. ಇವರೊಂದಿಗೆ 4 ಚಿತ್ರಗಳಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕನಾಗಿ ಕೆಲಸ ಮಾಡುವ ಸುಯೋಗ ನನಗೆ ಒದಗಿ ಬಂದಿತು. ಎಂ.ಆರ್.ವಿಠಲ್ ಅವರ ಬಗ್ಗೆ ಲೇಖಕ ಎನ್‌.ಎಸ್‌.ಶ್ರೀಧರಮೂರ್ತಿ ಅವರು ವಿವರವಾದ ಪುಸ್ತಕ ರಚಿಸಿದ್ದಾರೆ.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ