ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಪೂರ್ವ ಚಿತ್ರನಿರ್ದೇಶಕ ಕೆ.ರಾಘವೇಂದ್ರರಾವ್ – 79

Share this post
ಮೋಹನ್‌ ಬಾಬು ಬಿ.ಕೆ.
ಲೇಖಕ

ಕೋವೆಲಮುಡಿ ರಾಘವೇಂದ್ರರಾವ್… ತೆಲುಗು ಚಿತ್ರರಂಗದ ಜನಪ್ರಿಯ ಚಿತ್ರನಿರ್ದೇಶಕ. ಕನ್ನಡದ ‘ಶ್ರೀ ಮಂಜುನಾಥ’ ಅವರ ನಿರ್ದೇಶನದಲ್ಲಿ ತಯಾರಾದ ಸಿನಿಮಾ. 108 ಚಿತ್ರಗಳನ್ನು ನಿರ್ದೇಶಿಸಿರುವ ಕೆ.ರಾಘವೇಂದ್ರರಾವ್ ಇಂದು 79ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಕೋವೆಲಮುಡಿ ರಾಘವೇಂದ್ರರಾವ್… ತೆಲುಗು ಚಿತ್ರರಂಗದಲ್ಲಿ ಇವರ ಹೆಸರು ಹೇಳದಿದ್ದರೆ ಅಪೂರ್ಣವೆನಿಸುತ್ತದೆ. 23 ಮೇ 1942ರಲ್ಲಿ ಖ್ಯಾತ ನಿರ್ದೇಶಕ ಕೆ.ಎಸ್.ಪ್ರಕಾಶ್ ರಾವ್ ರವರ ಪುತ್ರನಾಗಿ ಜನಿಸಿದರು. ಮೊದಲಿನಿಂದಲೂ ಸಿನಿಮಾ ಪ್ರೀತಿ ಇಟ್ಟುಕೊಂಡಿದ್ದ ‘ಬಾಬು’ (1975) ಚಿತ್ರದೊಂದಿಗೆ ಸ್ವತಂತ್ರ ನಿರ್ದೇಶಕರಾದರು. ಇವರ ನಿರ್ದೇಶನದ ನೂರನೇ ಚಿತ್ರ ‘ಗಂಗೋತ್ರಿ’. ರಾಘವೇಂದ್ರರಾವ್ ನಿರ್ದೇಶನದ ಸೂಪರ್‌ಹಿಟ್‌ ತೆಲುಗು ಸಿನಿಮಾ ‘ಘರಾನಾ ಮೊಗುಡು’ ನಿರ್ಮಾಪಕರಿಗೆ 10 ಕೋಟಿ ಶೇರ್ ತಂದುಕೊಟ್ಟ ಮೊದಲ ತೆಲುಗು ಸಿನಿಮಾ. ರಾಜಕುಮಾರ್ ಅಭಿನಯದ ‘ಅನುರಾಗ ಅರಳಿತು’ ಕನ್ನಡ ಚಿತ್ರದ ಈ ತೆಲುಗು ರೀಮೇಕ್‌ನಲ್ಲಿ ಚಿರಂಜೀವಿ ಹೀರೋ.

ಅಲ್ಲಿಂದ ಇಲ್ಲಿಯವರೆಗೂ ಸುಮಾರು 108 ಚಿತ್ರಗಳನ್ನು ನಿರ್ದೇಶಿಸಿರುವುದು ದಾಖಲೆಯಾದರೆ, ಅವುಗಳಲ್ಲಿ ಸುಮಾರು 90 ಹಿಟ್ ಚಿತ್ರಗಳನ್ನು ನೀಡಿರುವುದು ಮತ್ತೊಂದು ದಾಖಲೆ. ತೆಲುಗು, ಕನ್ನಡ, ಹಿಂದಿ ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಅವರದ್ದೇ ಸ್ವಂತ ಬ್ಯಾನರ್ ಅರ್.ಕೆ. ಫಿಲಿಮ್ಸ್ ನಿರ್ಮಾಣ ಸಂಸ್ಥೆಯಲ್ಲಿ ತಮ್ಮನೊಡನೆ (ಚಿಕ್ಕಪ್ಪನ ಮಗ) ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಈಗ ತಮ್ಮ ಅಳಿಯನೊಡಗೂಡಿ ಶೋಭು ಯಾರ್ಲಗಡ್ಡ (ಬಾಹುಬಲಿ 1,2) ಪಾಲುದಾರ ನಿರ್ಮಾಪಕರಾಗಿದ್ದಾರೆ.

ಕನ್ನಡದಲ್ಲಿ ‘ಶ್ರೀ ಮಂಜುನಾಥ’ ಚಿತ್ರ ನಿರ್ದೇಶಿಸಿದ್ದಾರೆ. ತೆಲುಗಿನಲ್ಲಿ ಪ್ರಖ್ಯಾತ ನಟರೆಲ್ಲಾ ಇವರ ಚಿತ್ರದಲ್ಲಿ ನಟಿಸಲು ಹಾತೊರೆಯುತ್ತಿದ್ದರು. ಬಹಳಷ್ಟು ಒಳ್ಳೆಯ ಪ್ರತಿಭೆಗಳನ್ನು ಪರಿಚಯಿಸಿದ್ದರು. ವೆಂಕಟೇಶ್, ಅಲ್ಲೂ ಅರ್ಜುನ್ ರಂಥ ಘಟಾನುಘಟಿಗಳಿಗೆ ಅದ್ಭುತ ಓಪನಿಂಗ್ಸ್ ಕೊಟ್ಟ ನಿರ್ದೇಶಕ. ಮುಖ್ಯವಾಗಿ ಹಲವಾರು ನಾಯಕನಟಿಯರಿಗೆ ಚಿತ್ರರಂಗದಲ್ಲಿ ಭದ್ರ ನೆಲೆ ಕಂಡುಕೊಳ್ಳಲು ಕಾರಣರಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಹಾಡುಗಳ ಮೇಕಿಂಗ್ ಎಂದರೆ ಹೀಗಿರಬೇಕು ಎಂದು ತೋರಿಸಿಕೊಟ್ಟವರು. ಇವರ ಹಲವಾರು ಚಿತ್ರಗಳು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನವಾಗಿವೆ.

ಇವರ ಕೆಲವು ಸೂಪರ್ ಹಿಟ್ ಚಿತ್ರಗಳು – ಕೊಂಡವೀಟಿ ಸಿಂಹಂ, ವೇಟಗಾಡು, ಕಲಿಯುಗ ಪಾಂಡವುಲು, ಆಗ್ನಿ ಪರ್ವತಂ, ಬೊಬ್ಬಿಲಿ ಬ್ರಹ್ಮನ್ನ, ಅಲ್ಲುಡುಗಾರು, ಜಗದೇಕವೀರುಡು ಅತಿಲೋಕ ಸುಂದರಿ, ಘರಾನಾ ಮೊಗುಡು, ಅನ್ನಮಯ್ಯ, ಗಂಗೋತ್ರಿ, ಪೆಳ್ಳಿ ಸಂದಡಿ (ಈ ಚಿತ್ರದ ಕೋರಿಯೋಗ್ರಾಫರ್ ಕೂಡಾ ಇವರೇ) ಸ್ಟೂಡೆಂಟ್ ನಂಬರ್ 1…ಪಟ್ಟಿ ಹೇಳ್ತಾ ಹೋದರೆ ಬೆಳೆಯುತ್ತಾ ಹೋಗುತ್ತದೆ. ಇನ್ನು ಎಸ್.ಎಸ್.ರಾಜಮೌಳಿ ತಯಾರಾಗಿದ್ದು ಇವರ ಗರಡಿಯಲ್ಲೇ. 2015ರಿಂದ 2019 ರವರೆಗೂ ಟಿಟಿಡಿ ಟ್ರಸ್ಟ್ ನ ಸದಸ್ಯರಾಗಿ ನೇಮಕವಾಗಿದ್ದರು. ರಾಜಕೀಯದಿಂದ ದೂರವಿರುವ ರಾಘವೇಂದ್ರರಾವ್ ಸಿನಿಮಾವನ್ನೇ ಉಸಿರು ಎಂದು ಜೀವಿಸುತ್ತಿರುವ ತಂತ್ರಜ್ಞ. ಇಂದು (ಮೇ 23) 79ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮೇರು ನಿರ್ದೇಶಕನಿಗೆ ಶುಭಾಶಯ.

ಮಾಹಿತಿ - ವಿಶೇಷ - ಇತರೆ ಹಿನ್ನೋಟ

ನಟಿ ಸುಬ್ಬಲಕ್ಷ್ಮಿ

ಖ್ಯಾತ ಶಾಸ್ತ್ರೀಯ ಸಂಗೀತಗಾರ್ತಿ, ಭಾರತರತ್ನ ಎಂ.ಎಸ್.ಸುಬ್ಬಲಕ್ಷ್ಮಿ ಸಿನಿಮಾ ನಟಿ ಎನ್ನುವ ವಿಚಾರ ಬಹಳಷ್ಟು

ಧರ್ಮಸೆರೆ – ಪುಟ್ಟಣ್ಣ

‘ಧರ್ಮಸೆರೆ’ (1979) ಚಿತ್ರಕ್ಕೆ ಕುಂದಾಪುರ ಸಮೀಪ ಸಮುದ್ರದ ಹಿನ್ನೀರಿನಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ನಿರ್ದೇಶಕ ಪುಟ್ಟಣ್ಣನವರು ಬೋಟ್‍ವೊಂದನ್ನು ಟ್ರ್ಯಾಲಿಯಂತೆ ಬಳಕೆ ಮಾಡಿ

ಸಾಹಸಿ ನಿರ್ಮಾಪಕ ಬಿ.ಎಸ್.ರಂಗಾ

ಸಿನಿಮಾ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡಿಗ ಬಿ.ಎಸ್.ರಂಗಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡ ಹೆಸರು. ಕನ್ನಡದಲ್ಲಿ ಸಿನಿಮಾಗಳ ನಿರ್ಮಾಣವೇ ಕಷ್ಟವಾಗಿದ್ದ

ಒಂದಾನೊಂದು ಕಾಲದಲ್ಲಿ

ಗಿರೀಶ್ ಕಾರ್ನಾಡ್ ನಿರ್ದೇಶನದ ‘ಒಂದಾನೊಂದು ಕಾಲದಲ್ಲಿ’ (1978) ಚಿತ್ರದಲ್ಲಿ ಶಂಕರ್‌ ನಾಗ್‌. ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಸಿನಿಮಾ ಸಂದರ್ಭದಲ್ಲೇ

ಆರ್‌ಎನ್‌ಜೆ – ಎಲ್‌ಪಿ

ಕನ್ನಡದಲ್ಲಿ ಗೀತರಚನೆಕಾರರೊಬ್ಬರ ಮೊದಲ ಎಲ್.ಪಿ ಬಿಡುಗಡೆ ಆಗಿದ್ದು ಆರ್.ಎನ್.ಜಯ ಗೋಪಾಲ್ ಅವರದ್ದು. ಅದರ ಬಿಡುಗಡೆ ಕಾರ್ಯಕ್ರಮದ ಚಿತ್ರವಿದು. ನರಸಿಂಹನ್, ನಟ