ಬಹುನಿರೀಕ್ಷಿತ ‘TOXIC’ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಟೀಸರ್‌ನ ಕೊನೆಯಲ್ಲಿ ದಾಡಿ ಇಲ್ಲದ ಯಶ್ ಕಾಣಿಸುತ್ತಾರೆ ಎನ್ನುವುದು ವಿಶೇಷ!
ನಟ ಯಶ್ ಅವರ ತೆರೆ ಮೇಲೆ ಕಾಣಿಸಿಕೊಂಡು ಆರು ವರ್ಷಗಳೇ ಆಯ್ತು. ‘ಕೆಜಿಎಫ್ 2’ ನಂತರ ಅವರೀಗ ‘TOXIC’ ಚಿತ್ರದೊಂದಿಗೆ ಬರುತ್ತಿದ್ದಾರೆ. ಈ ಚಿತ್ರ ಮುಂದಿನ ತಿಂಗಳು ಮಾರ್ಚ್ 19ರಂದು ತೆರೆಕಾಣಲಿದ್ದು, ಇಂದು ಟೀಸರ್ ಹೊರಬಿದ್ದಿದೆ. ತಿಂಗಳ ಹಿಂದೆ ಬಂದಿದ್ದ ಚಿತ್ರದ ಟೀಸರ್ ವಿವಾದಕ್ಕೀಡಾಗಿತ್ತು. ಈ ಬಾರಿಯ ಟೀಸರ್‌ನಲ್ಲಿ ವಿವಾದಕ್ಕೆ ಆಸ್ಪದ ನೀಡುವಂಥ ಯಾವುದೇ ದೃಶ್ಯಗಳಿಲ್ಲ. ಆಕ್ಷನ್ ಸೀನ್‌ಗಳೇ ಹೆಚ್ಚಾಗಿ ಕಾಣಿಸುತ್ತಿದ್ದು, ಭರಪೂರ ಆಕ್ಷನ್‌ಗೆ ಗ್ಯಾರಂಟಿ ನೀಡುತ್ತವೆ. ಯಶ್ ಪಾತ್ರದ ಹೊರತಾಗಿ ಚಿತ್ರದ ಮತ್ತಾವ ಪಾತ್ರಗಳೂ ಇಲ್ಲಿ ಕಾಣಿಸುವುದಿಲ್ಲ. ಕೊನೆಯ ಇಪ್ಪತ್ತು ಸೆಕೆಂಡ್‌ಗಳಲ್ಲಿ ದಾಡಿ ಇಲ್ಲದ Young ಯಶ್ ಕಾಣಿಸುತ್ತಾರೆ ಎನ್ನುವುದು ವಿಶೇಷ. ಈ ಟ್ರಾನ್ಸ್‌ಫಾರ್ಮೇಷನ್ ಈ ಬಾರಿಯ ಟೀಸರ್‌ನ ಅಚ್ಚರಿ. ಇದರಿಂದ ಚಿತ್ರದಲ್ಲಿ ಯಶ್ ಅವರದ್ದು ಡಬಲ್ ರೋಲ್ ಇರಬಹುದೇ ಎಂದು ಸಿನಿಪ್ರಿಯರು ಮಾತನಾಡಿಕೊಳ್ಳುವಂತಾಗಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಟೀಸರ್ ಬಿಡುಗಡೆಯಾಗಿದೆ.







