ಸಿನಿಮಾ
ಇತಿಹಾಸ - ಮಾಹಿತಿ - ಮನರಂಜನೆ

ಫೋಟೋಗಳು ಕತೆ ಹೇಳುತ್ತವೆ. ಅದರಲ್ಲೂ ಸಿನಿಮಾಗೆ ಸಂಬಂಧಿಸಿದ ಫೋಟೋಗಳು ತಮ್ಮೊಳಗೆ ಅನೇಕ ಕತೆ-ವಿಶೇಷಗಳನ್ನು ಬಚ್ಚಿಟ್ಟುಕೊಂಡಿರುತ್ತವೆ. ಅವುಗಳನ್ನು ದಾಖಲಿಸುವ ಮತ್ತು ಫೋಟೋಗಳ ಹಿಂದಿನ ಕತೆ ಹೇಳುವ ಒಂದು ಪ್ರಯತ್ನ.

ಹುಡುಕಿಕೊಂಡು ಮನೆಗೇ ಬಂದಿದ್ದರು ಅಂಬರೀಶ್!

(ಫೋಟೊ-ಬರಹ: ಪ್ರಗತಿ ಅಶ್ವತ್ಥ ನಾರಾಯಣ, ಸ್ಥಿರಚಿತ್ರ ಛಾಯಾಗ್ರಾಹಕ) 1978ರ ಸಂಕ್ರಾಂತಿ ಹಬ್ಬದ ದಿನ ಅಪರೂಪಕ್ಕೆ ನಾನು ಮನೆಯಲ್ಲೇ ಇದ್ದೆ. ಯಾವುದೇ ಶೂಟಿಂಗ್ ಇರಲಿಲ್ಲ. ಅಂದು ನಮ್ಮ ‘ಪ್ರಗತಿ’ ಸ್ಟುಡಿಯೋ ರಜೆ ಮಾಡಿದ್ದೆವು. ಮನೆಯಲ್ಲಿ ಕುಟುಂಬದವರೊಂದಿಗೆ ಹಬ್ಬದ ಸಂಭ್ರಮದಲ್ಲಿದ್ದೆ. ಆ ಸಮಯದಲ್ಲಿ ಶೂಟಿಂಗ್‌ಗಳಿಗೆ

ಇದು ನಟಿ ಆರತಿ ಕ್ಲಿಕ್ಕಿಸಿದ ಫೋಟೊ!

ತಮ್ಮ ಕ್ಯಾಮರಾಗಳ ಮೂಲಕ ಎಲ್ಲರ ನೆನಪುಗಳನ್ನು ಹಿಡಿದಿಡುವ ಛಾಯಾಗ್ರಾಹಕರು ತಮಗಾಗಿ ಫೋಟೋ ತೆಗೆದಿಟ್ಟುಕೊಳ್ಳುವುದು ತೀರಾ ಅಪರೂಪ. ಅದರಲ್ಲೂ ಅಂದಿನ ದುಬಾರಿ ಕಾಲದಲ್ಲಿ ಆ ರೀತಿ ಯೋಚಿಸುತ್ತಲೂ ಇರಲಿಲ್ಲ. ‘ವಿನಾಃಕಾರಣ ಒಂದು ನೆಗೆಟಿವ್‌ ವೇಸ್ಟ್ ಆಗುತ್ತೆ’ ಎಂದು ಸ್ಥಿರಚಿತ್ರ ಛಾಯಾಗ್ರಾಹಕರು ಲೆಕ್ಕಾಚಾರ ಹಾಕುತ್ತಿದ್ದರು.

ಭಕ್ತ ಕುಂಬಾರ ಮತ್ತು ಭಾರತ್ ಟಾಕೀಸ್

ಸಿನಿಮಾ ಕಲಾವಿದರು, ತಂತ್ರಜ್ಞರು, ವಿತರಕರು, ಪ್ರದರ್ಶಕರು… ಚಿತ್ರೋದ್ಯಮದ ಎಲ್ಲರೂ ಒಂದು ಕುಟುಂಬ ಎನ್ನುವ ಭಾವನೆಯಿದ್ದ ಕಾಲವದು. ಪರಸ್ಪರರು ಸಹಕಾರ – ವಿಶ್ವಾಸದಿಂದಿರುತ್ತಿದ್ದರು. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ `ಭಕ್ತಕುಂಬಾರ’

ಅಮೃತ ಗಳಿಗೆ – ‘ಪ್ರಗತಿ’ ಸ್ಥಿರಚಿತ್ರ

ಆಗ ಸಿನಿಮಾದಲ್ಲಿ ಸ್ಟಿಲ್ ಫೋಟೋಗ್ರಾಫರ್ ಮತ್ತು ಛಾಯಾಗ್ರಾಹಕ ಜೊತೆಜೊತೆಗೇ ಕೆಲಸ ಮಾಡಬೇಕಿತ್ತು. ತಂತ್ರಜ್ಞಾನದ ಇತಿಮಿತಿಗಳಲ್ಲೇ ಸಿನಿಮಾ ತಯಾರಾಗುತ್ತಿದ್ದ ಕಾಲವದು. ಸನ್ನಿವೇಶಗಳ ಕಂಟ್ಯೂನಿಟಿಗೆ ಸ್ಟಿಲ್ ಫೋಟೋಗ್ರಫಿಯನ್ನೇ ಅವಲಂಬಿಸಬೇಕಿತ್ತು. ಸನ್ನಿವೇಶವೊಂದರಲ್ಲಿನ

`ನಾಗರಹಾವು’ ಮೇಕಿಂಗ್ ಸ್ಟಿಲ್

ಪುಟ್ಟಣ್ಣ ಕಣಗಾಲ್‌ನವರ ಮಹೋನ್ನತ ಚಿತ್ರಗಳಲ್ಲೊಂದಾದ `ನಾಗರಹಾವು’ ಚಿತ್ರಕ್ಕೆ ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿಯೂ ಚಿತ್ರೀಕರಣ ನಡೆದಿತ್ತು. ಚಿತ್ರದಲ್ಲಿನ ಪ್ರಿನ್ಸಿಪಾಲ್ ಮನೆಯ ಸನ್ನಿವೇಶಗಳು ಸೇರಿದಂತೆ ಕೆಲವು ಸೀನ್‌ಗಳನ್ನು ಸ್ಟುಡಿಯೋದಲ್ಲಿ ಸೆಟ್

ಅವರನ್ನು ನೋಡಿಕೊಳ್ಳುವ ಹೊಣೆ ನನ್ನದಾಗಿತ್ತು..

ಹಿಂದಿ ರಂಗಭೂಮಿ ಮತ್ತು ಚಿತ್ರರಂಗದ ಮೇರು ನಟ ಪೃಥ್ವಿರಾಜ್‌ ಕಪೂರ್‌ ಅವರು ‘ಸಾಕ್ಷಾತ್ಕಾರ’ ಕನ್ನಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರದಲ್ಲಿನ

ಸ್ಪಾಟ್ ರೆಕಾರ್ಡಿಂಗ್ ಹೇಗಾಗುತ್ತಿತ್ತು?

1971 – 72ರವರೆಗೂ ಸಿನಿಮಾಗಳಲ್ಲಿ ಸ್ಪಾಟ್ ರೆಕಾರ್ಡಿಂಗ್ ಇತ್ತು. ಆನಂತರವೇ ವಾಯ್ಸ್ ಡಬ್ಬಿಂಗ್ ಪೂರ್ಣಪ್ರಮಾಣದಲ್ಲಿ ಚಾಲ್ತಿಗೆ ಬಂದಿದ್ದು. ಆಗೆಲ್ಲಾ ಕಲಾವಿದರು ನಟನೆ ಜೊತೆಗೆ ಧ್ವನಿಯ ಏರಿಳಿತಗಳತ್ತಲೂ ಗಮನಹರಿಸಿ

ಕವಿ ಕೆಎಸ್‌ನ ಸಿಚ್ಯುಯೇಷನ್‌ಗೆ ಹಾಡು ಬರೆದರು…

ನಾಗಾಭರಣ ನಿರ್ದೇಶನದ `ಮೈಸೂರು ಮಲ್ಲಿಗೆ’ ಅಂದಾಕ್ಷಣ ಕವಿ ಕೆ.ಎಸ್.ನರಸಿಂಹಸ್ವಾಮಿ ನೆನಪಾಗುತ್ತಾರೆ. ಇದಕ್ಕೂ ಬಹು ಹಿಂದೆ, 1969ರಲ್ಲೇ `ಅನಿರೀಕ್ಷಿತ’ ಚಿತ್ರಕ್ಕೆ ಅವರು ಹಾಡು ಬರೆದಿದ್ದರು. ನಾಗೇಶ್ ಬಾಬ ನಿರ್ಮಿಸಿ