ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ದಿವ್ಯಾ ಭಾರತಿ

ನಟಿ
ಪೋಸ್ಟ್ ಶೇರ್ ಮಾಡಿ

ನಟಿ ದಿವ್ಯಾ ಭಾರತಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದುದು ಕೇವಲ ನಾಲ್ಕು ವರ್ಷವಷ್ಟೆ. ಈ ನಾಲ್ಕು ವರ್ಷಗಳ ಅವಧಿಯಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ, ಅತ್ಯಂತ ಜನಪ್ರಿಯ ತಾರೆಯಾಗಿ ಹೆಸರು ಮಾಡಿದ್ದರು. 14ರ ಹರೆಯದಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ದಿವ್ಯಾ ‘ಬೊಬ್ಬಿಲಿ ರಾಜಾ’ (1990) ತೆಲುಗು ಚಿತ್ರದೊಂದಿಗೆ ಸಿನಿಮಾ ಪ್ರವೇಶಿಸಿದರು. ಮರುವರ್ಷ ತೆರೆಕಂಡ ‘ರೌಡಿ ಅಲ್ಲುಡು’ ತೆಲುಗು ಸಿನಿಮಾ ಬಹುದೊಡ್ಡ ಯಶಸ್ಸು ಕಂಡಿತು. ಅದು ದಿವ್ಯಾ ವೃತ್ತಿಬದುಕಿನ ಮಹತ್ವದ ತಿರುವು.

‘ವಿಶ್ವಾತ್ಮಾ’ (1992) ಹಿಂದಿ ಚಿತ್ರದೊಂದಿಗೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಅವರು ‘ಶೋಲಾ ಔರ್ ಶಬ್ನಮ್’, ‘ದೀವಾನಾ’ ಚಿತ್ರಗಳ ಯಶಸ್ಸಿನೊಂದಿಗೆ ಬೇಡಿಕೆಯ ನಟಿಯಾದರು. 1992ರ ಒಂದೇ ವರ್ಷ ಅವರ ಹನ್ನೆರೆಡು ಚಿತ್ರಗಳು ಬಿಡುಗಡೆಯಾಗಿದ್ದವು! ಪದಾರ್ಪಣೆ ಮಾಡಿದ ವರ್ಷದಲ್ಲೇ ಸಾಲು, ಸಾಲು ಚಿತ್ರಗಳ ಅವಕಾಶ ಪಡೆದ ಮತ್ತೊಬ್ಬ ನಟಿ ಇಲ್ಲವೆಂದೇ ಹೇಳಬಹುದು. ತೆಲುಗು, ಹಿಂದಿಯ ಒಟ್ಟು 20 ಚಿತ್ರಗಳಲ್ಲಿ ನಟಿಸಿದ್ದಾರೆ. 1993ರ ಏಪ್ರಿಲ್ 5ರಂದು ಅಕಾಲಿಕವಾಗಿ ಅಗಲಿದಾಗ ದಿವ್ಯಾ ಭಾರತಿಗೆ 19 ವರ್ಷವಷ್ಟೆ. ಐದನೇ ಮಹಡಿಯಲ್ಲಿದ್ದ ಮನೆಯ ಬಾಲ್ಕನಿಯಿಂದ ಕೆಳಗೆ ಬಿದ್ದು ಅಸುನೀಗಿದ ದಿವ್ಯಾ ಸಾವು ಆಕಸ್ಮಕವಷ್ಟೇ ಅಲ್ಲ, ರಹಸ್ಯವಾಗಿಯೂ ಉಳಿದಿದೆ.

ನೆನಪು ಸಾಧನೆ - ಸ್ಫೂರ್ತಿ

ಜನಪ್ರಿಯ ಪೋಸ್ಟ್ ಗಳು

ಕಮಿಡಿಯನ್ ಗುಗ್ಗು

ಕನ್ನಡ ಸಿನಿಮಾ ರೂಪುಗೊಂಡ ಹಾದಿಯಲ್ಲಿ ಹಲವಾರು ಅಪರೂಪದ ವ್ಯಕ್ತಿತ್ವಗಳು, ಸಂದರ್ಭಗಳು ಕಾಣಸಿಗುತ್ತವೆ. ಈ ಹಾದಿಯಲ್ಲಿನ ಅಂತಹ ವಿಶಿಷ್ಟ ವ್ಯಕ್ತಿ ಕಮೆಡಿಯನ್

ಸಿನಿಮಾ – ಕ್ಯಾಸೆಟ್ ಲೋಕದಲ್ಲಿ ಮಿಂಚಿದ ಧೀರೇಂದ್ರ ಗೋಪಾಲ್

ಕನ್ನಡ ಚಿತ್ರರಂಗ ಕಂಡ ವಿಶಿಷ್ಟ ಕಲಾವಿದ ಧೀರೇಂದ್ರ ಗೋಪಾಲ್ ಹುಟ್ಟೂರು ಹಾಸನಜಿಲ್ಲೆ ಹೊಳೆನರಸೀಪುರ ತಾಲೂಕಿನ ಜೋಡಿಗುಬ್ಬಿ. ಚಿಕ್ಕಂದಿನಿಂದಲೇ ಏಕಪಾತ್ರಾಭಿನಯ, ಹಾಡು,

Exit mobile version